ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ

ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ


ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ 'ಧುರಂಧರ 2' ಸಿನಿಮಾ

‘ಧುರಂಧರ 2’ ಸಿನಿಮಾ (ಧುರಂಧರ 2 ಚಿತ್ರ) ದಾಖಲೆಯ ಮೇಲೆ ದಾಖಲೆ ಬರೆದಿದೆ. ಮೊದಲ ದಿನವೇ ಚಿತ್ರ ಅದ್ಭುತ ಯಶಸ್ಸು ಕಂಡಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 250 ಕೋಟಿ ರೂಪಾಯಿ ಸಮೀಪಿಸಿದೆ. ಇದು ಚಿತ್ರದ ಅಬ್ಬರವನ್ನು ತೋರಿಸುತ್ತದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿದೆ. ಭಾರತ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಇದು ಬದಲಾಗಲಿದೆ ಎಂಬ ಕುತೂಹಲ ಮೂಡಿದೆ.

‘ಧುರಂಧರ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದ ಅವರೇ ಹೈಲೈಟ್ ಆಗುತ್ತಾರೆ. ಸಂಜಯ್ ದತ್ ಅರ್ಜುನ್ ರಾಮ್ ಪಾಲ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಗಳಿಕೆಯ ವಿವರ ಸಿಕ್ಕಿದೆ.

‘ಧುರಂಧರ 2’ ಸಿನಿಮಾ ಪ್ರೀಮಿಯರ್ ಹಾಗೂ ಮೊದಲ ದಿನದ ಕಲೆಕ್ಷನ್ ಸೇರಿ 236 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಭಾರತದಿಂದ 172 ಕೋಟಿ ರೂಪಾಯಿ ಹಾಗೂ ವಿದೇಶದಿಂದ 64 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾರತದ ನೆಟ್ ಕಲೆಕ್ಷನ್ 140 ಕೋಟಿ ರೂಪಾಯಿ ಇದೆ ಎಂದು sacnilk ವರದಿ ಮಾಡಿದೆ.

ಈ ಸಿನಿಮಾ ಮಾರ್ಚ್ 19ರಂದು ಸಿನಿಮಾ ಹಿಂದಿಯಲ್ಲಿ 103 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅತಿ ದೊಡ್ಡ ಓಪನಿಂಗ್ ಪಡೆದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆ ಈ ಸಿನಿಮಾಗೆ ಬಂದಿದೆ. ‘ಧುರಂಧರ 2’ ಪ್ರೀಮಿಯರ್ ಶೋನಿಂದ 40 ಕೋಟಿ ರೂಪಾಯಿ ಗಳಿಸಿತು. ಈ ಸಿನಿಮಾ ಅನಾಯಾಸವಾಗಿ 2000 ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಲಲಕ್ಷಣ ಗೋಚರವಾಗಿದೆ. ಈ ಸಿನಿಮಾಗೆ ಬರೋಬ್ಬರಿ 34 ಸಾವಿರ ಶೋಗಳು ಸಿಕ್ಕಿದ್ದವು ಎಂಬುದು ವಿಶೇಷ.

ಇದನ್ನೂ ಓದಿ: ಅಬ್ಬಬ್ಬಾ, ಪೇಯ್ಡ್ ಪ್ರೀಮಿಯರ್‌ನಿಂದ ‘ಧುರಂಧರ 2’ ಸಿನಿಮಾ ಗಳಿಸಿದ್ದು ಇಷ್ಟವಾಯಿತೇ?

‘ಧುರಂಧರ’ ಸಿನಿಮಾ ಹಲವು ದಾಖಲೆಗಳನ್ನು ಮಾಡಿತ್ತು. ಇದು ಸೀಕ್ವಲ್‌ಗೆ ಸಹಕಾರಿ ಆಗುತ್ತಿದೆ. ಈ ಕಾರಣದಿಂದಲೇ ಚಿತ್ರದ ಕಲೆಕ್ಷನ್ ಜೋರಾಗಿದೆ. ಈ ಚಿತ್ರದ ಮೂಲಕ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಲಾಭ ಮಾಡುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *