Dhurandhar The Revenge: ವಿಲನ್ ಬಡೇ ಸಾಹೇಬ್‌ ಯಾರು? ನಿಮ್ಮ ಊಹೆಯಂತೂ ಖಂಡಿತ ತಪ್ಪು!

Dhurandhar The Revenge: ವಿಲನ್ ಬಡೇ ಸಾಹೇಬ್‌ ಯಾರು? ನಿಮ್ಮ ಊಹೆಯಂತೂ ಖಂಡಿತ ತಪ್ಪು!

Dhurandhar The Revenge: ವಿಲನ್ ಬಡೇ ಸಾಹೇಬ್‌ ಯಾರು? ನಿಮ್ಮ ಊಹೆಯಂತೂ ಖಂಡಿತ ತಪ್ಪು!

Dhurandhar The Revenge: ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ಮೊದಲ ಭಾಗದಿಂದಲೂ ‘ಬಡೇ ಸಾಹಬ್’ ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಈಗ ‘ಧುರಂಧರ್ 2’ ಆ ರಹಸ್ಯವನ್ನು ಬಯಲು ಮಾಡಿದೆ. ವಿಶೇಷ ಅಂದ್ರೆ, ಈ ಪಾತ್ರದ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳನ್ನು ಚಿತ್ರತಂಡ ಸುಳ್ಳು ಮಾಡಿದೆ.

Dhurandhar: The Revenge ಮೊದಲ ಭಾಗದ ನಂತರ ‘ಬಡೇ ಸಾಹೇಬ್’ ಹೆಸರು ಸಖತ್ ಚರ್ಚೆಯಲ್ಲಿತ್ತು. ರಣವೀರ್ ಸಿಂಗ್ ಪಾತ್ರವಾದ ಹಮ್ಜಾ ಅಲಿ ಮಜಾರಿ ಡೈರಿಯಲ್ಲಿ ಈ ಹೆಸರಿನ ಜೊತೆಗಿದ್ದ ಪ್ರಶ್ನಾರ್ಥಕ ಚಿಹ್ನೆ, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು. ಮೊದಲ ಭಾಗ ರಿಲೀಸ್ ಆದಾಗಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಈ ಪಾತ್ರದ ಬಗ್ಗೆ ಸತತವಾಗಿ ಥಿಯರಿಗಳು ಮತ್ತು ಊಹೆಗಳು ಹರಿದಾಡುತ್ತಿದ್ದವು.

’ಧುರಂಧರ್: ದಿ ರಿವೆಂಜ್’ ರಿಲೀಸ್‌ಗೂ ಮುನ್ನ, ‘ಬಡೇ ಸಾಹೇಬ್’ ಪಾತ್ರದಲ್ಲಿ ಸಲ್ಮಾನ್ ಖಾನ್ ಅಥವಾ ಇಮ್ರಾನ್ ಹಶ್ಮಿಯಂತಹ ದೊಡ್ಡ ಸೂಪರ್‌ಸ್ಟಾರ್‌ಗಳು ಅತಿಥಿ ಪಾತ್ರ ಮಾಡಬಹುದು ಎಂದು ಊಹಿಸಲಾಗಿತ್ತು. ಆದರೆ, ಚಿತ್ರದ ಪೇಯ್ಡ್ ಪ್ರಿವ್ಯೂ ನಂತರ ಈ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದೆ.

ಚಿತ್ರದಲ್ಲಿ ‘ಬಡೇ ಸಾಹೇಬ್’ ಕೇವಲ ಪೋಷಕ ಪಾತ್ರವಲ್ಲ, ಬದಲಿಗೆ ಕಥೆಯ ಮುಖ್ಯ ವಿಲನ್ ಮತ್ತು ಮಾಸ್ಟರ್‌ಮೈಂಡ್. ಈ ಪಾತ್ರವು ಹಮ್ಜಾನ ಸಂಪೂರ್ಣ ಪಯಣದ ಮೇಲೆ ಪ್ರಭಾವ ಬೀರುತ್ತದೆ ಮತ್ತು ಕಥೆಯ ಅನೇಕ ದೊಡ್ಡ ಟ್ವಿಸ್ಟ್‌ಗಳು ಇದರಿಂದಲೇ ಶುರುವಾಗುತ್ತವೆ. ಈ ಪಾತ್ರವು ವಯಸ್ಸಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂನದ್ದು. ಹಾಸಿಗೆ ಹಿಡಿದು ಆಕ್ಸಿಜನ್ ಸಹಾಯದಿಂದ ಬದುಕುತ್ತಿದ್ದರೂ, ಭಯೋತ್ಪಾದನೆಯ ಎಲ್ಲಾ ಸೂತ್ರಗಳು ಅವನ ಕೈಯಲ್ಲಿವೆ.

’ಧುರಂಧರ್: ದಿ ರಿವೆಂಜ್’ ಚಿತ್ರದಲ್ಲಿ ‘ಬಡೇ ಸಾಹೇಬ್’ ಪಾತ್ರವನ್ನು ಹಿರಿಯ ನಟ ದಾನಿಶ್ ಇಕ್ಬಾಲ್ ನಿರ್ವಹಿಸಿದ್ದಾರೆ. ಇವರು ಅನುಭವಿ ರಂಗಭೂಮಿ ಕಲಾವಿದ ಮತ್ತು ನಟ. ಈ ಆಯ್ಕೆ ಅಚ್ಚರಿ ಮೂಡಿಸಿದರೂ, ಚಿತ್ರದ ಟೋನ್ ಮತ್ತು ಪಾತ್ರದ ಆಳವನ್ನು ಗಮನಿಸಿದರೆ, ಇದೊಂದು ಉತ್ತಮ ನಿರ್ಧಾರವೆಂದು ಪರಿಗಣಿಸಲಾಗಿದೆ.

ದಾನಿಶ್ ಇಕ್ಬಾಲ್ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (NSD) ದಿಂದ ನಟನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಲಂಡನ್‌ನ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾದಿಂದ ಕ್ಲಾಸಿಕಲ್ ಆಕ್ಟಿಂಗ್‌ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ. ‘ಮಹಾರಾಣಿ 2’ ರಲ್ಲಿ ದಿಲ್ಶಾದ್ ಮಿರ್ಜಾ ಪಾತ್ರದಿಂದ ಇವರು ಚರ್ಚೆಗೆ ಬಂದಿದ್ದರು. ಅಲ್ಲದೆ ‘ಅರಣ್ಯಕ್’, ‘ಫರಾಜ್’, ‘ಆಖ್ರಿ ಸಚ್’ ಮತ್ತು ‘ಭಕ್ಷಕ್’ ನಂತಹ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *