Reporter escapes ಲೈವ್ ನೀಡುತ್ತಿದ್ದಂತೆ ಪತ್ರಕರ್ತನ ಪಕ್ಕದಲ್ಲೇ ಇಸ್ರೇಲ್ ಮಿಸೈಲ್ ದಾಳಿ, ಜಸ್ಟ್ ಮಿಸ್ ವಿಡಿಯೋ ಸೆರೆ | Caught On Camera Israeli Missile Strikes Metres Away From Rt Journalist During Live

Reporter escapes ಲೈವ್ ನೀಡುತ್ತಿದ್ದಂತೆ ಪತ್ರಕರ್ತನ ಪಕ್ಕದಲ್ಲೇ ಇಸ್ರೇಲ್ ಮಿಸೈಲ್ ದಾಳಿ, ಜಸ್ಟ್ ಮಿಸ್ ವಿಡಿಯೋ ಸೆರೆ | Caught On Camera Israeli Missile Strikes Metres Away From Rt Journalist During Live



Reporter escapes ಲೈವ್ ನೀಡುತ್ತಿದ್ದಂತೆ ಪತ್ರಕರ್ತನ ಪಕ್ಕದಲ್ಲೇ ಇಸ್ರೇಲ್ ಮಿಸೈಲ್ ದಾಳಿ, ಜಸ್ಟ್ ಮಿಸ್ ವಿಡಿಯೋ ಸೆರೆ | Caught On Camera Israeli Missile Strikes Metres Away From Rt Journalist During Live

ಲೈವ್ ನೀಡುತ್ತಿದ್ದಂತೆ ಪತ್ರಕರ್ತನ ಪಕ್ಕದಲ್ಲೇ ಇಸ್ರೇಲ್ ಮಿಸೈಲ್ ದಾಳಿ, ಜಸ್ಟ್ ಮಿಸ್ ವಿಡಿಯೋ ಸೆರೆ, ಇರಾನ್, ಲೆಬೆನಾನ್ ಸೇರದಂತೆ ಕೆಲೆವಡೆ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ. ಈ ವೇಳೆ ಪತ್ರಕರ್ತ ಜಸ್ಟ್ ಮಿಸ್ ಆದ ಘಟನೆ ನಡೆದಿದೆ. 

ಲೆಬೆನಾನ್ (ಮಾ.20) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಇದೀಗ ತೈಲ ಹಾಗೂ ಗ್ಯಾಸ್ ಘಟಕಗಳ ಮೇಲೆ ನಡೆಯುತ್ತಿದೆ. ಈ ಮೂಲಕ ತಾವು ಮಾತ್ರವಲ್ಲ ಇಡೀ ಜಗತ್ತು ಸಂಕಷ್ಟ ಅನುಭವಿಸಲಿ ಎಂದು ಹೋರಾಡುತ್ತಿದೆ. ಇರಾನ್ ಮೇಲೆ ಮಾತ್ರವಲ್ಲ, ಲೆಬೆನಾನ್ ಸೇರಿದಂತೆ ಇಸ್ರೇಲ್ ಸುತ್ತಲು ಅಪಾಯಕಾರಿ ದೇಶಗಳ ವಿರುದ್ದ ಇಸ್ರೇಲ್ ದಾಳಿ ಮಾಡುತ್ತಿದೆ. ಲೆಬೆನಾನ್‌ನಿಂದ ಇಸ್ರೇಲ್‌ನತ್ತ ಮಿಸೈಲ್‌ಗಳು ತೂರಿ ಬಂದ ಕಾರಣ ಲೆಬೆನಾನ್ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್ ಮಾಡಿದೆ. ಲೆಬೆನಾನ್ ಯುದ್ಧ ಸ್ಥಳದಿಂದ ಪತ್ರಕರ್ತ ಲೈವ್ ವಿಡಿಯೋ ಮಾಡುತ್ತಿದ್ದಂತೆ ಇಸ್ರೇಲ್ ಮಿಸೈಲ್ ದಾಳಿ ನಡೆದಿದೆ. ಪತ್ರಕರ್ತನ ಹಿಂದೆ ಈ ಮಿಸೈಲ್ ಸ್ಫೋಟಿಸಿದೆ. ಪತ್ರಕರ್ತ ಹಾಗೂ ಕ್ಯಾಮೆರಾಮ್ಯಾನ್‌ಗೆ ಗಾಯಗಳಾಗಿದೆ. ಆದರೆ ಪ್ರಾಣಾಪಾಯದಿಂದ ಪಾರಾದ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ಲೈವ್ ಮಾಡುತ್ತಿದ್ದಂತೆ ಮಿಸೈಲ್ ದಾಳಿ

ಇರಾನ್ ಬೆಂಬಲಿತ ಹೆಝಬೊಲ್ಲ ಉಗ್ರರ ಗುಂಪು ಲೆಬೆನಾನ್‌ನಿಂದ ದಾಳಿ ಮಾಡುತ್ತಿದೆ. ಲೆಬೆನಾನ್‌ ಅಲ್ ಖಾಸ್ಮಿಯಾ ಸೇತುವೆ ಬಳಿ ನಿಂತ ರಷ್ಯಾ ಪತ್ರಕರ್ತ ಸ್ವೀನಿ ಹಾಗೂ ಕ್ಯಾಮೆರಾಮ್ಯಾನ್ ಅಲ್ ರಿದಾ ಲೈವ್ ವರದಿ ನೀಡುತ್ತಿದ್ದರು. ಅಲ್ ಖಾಸ್ಮಿಯಾ ಲೆಬನಾನ್ ಸೇನಾ ನೆಲೆಯಾಗಿದೆ. ಇದರ ಪಕದಲ್ಲೇ ನಿಂತು ಲೈವ್ ವಿಡಿಯೋ ಮಾಡುತ್ತಿದ್ದಂತೆ ಇಸ್ರೇಲ್ ಮಿಸೈಲ್ ದಾಳಿ ಮಾಡಿದೆ. ಇಸ್ರೇಲ್ ಮಿಸೈಲ್ ದಾಳಿ ಪತ್ರಕರ್ತನ ಹಿಂಭಾಗದಲ್ಲಿ ಸ್ಫೋಟಿಸಿದೆ. ಸ್ಫೋಟದ ಚೂರಗಳು ಪತ್ರಕರ್ತ ಹಾಗೂ ಕ್ಯಾಮೆರಾನ ಮ್ಯಾನ್‌ಗೆ ತಗುಲಿದೆ. ಇದರಿಂದ ಗಾಯಗಳಾಗಿದೆ. ತಕ್ಷಣವೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇಸ್ರೇಲ್ ವಿರುದ್ದ ಕೆರಳಿದ ರಷ್ಯಾ

ಇರಾನ್ ಬೆಂಬಲಿತ ಹೆಝಬೊಲ್ಲಾ ಉಗ್ರ ಪಡೆಯ ನೆರವಿನಿಂದ ಲೆಬೆನಾನ್ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ. ಇಸ್ರೇಲ್‌ನತ್ತ ಗುರಿಯಾಗಿಸಿ ದಾಳಿಗೆ ಸಜ್ಜಾಗಿದೆ. ಹೀಗಾಗಿ ದಕ್ಷಿಣ ಲೆಬೆನಾನ್ ಮೇಲೆ ಕಳೆದೆ ಕೆಲ ದಿನಗಳಿಂದ ಇಸ್ರೇಲ್ ದಾಳಿ ಮಾಡುತ್ತಿದೆ. ಘಟನೆ ಬೆನ್ನಲ್ಲೇ ರಷ್ಯಾ ತೀವ್ರ ಆಕ್ರೋಶ ಹೊರಹಾಕಿದೆ. ಪತ್ರಕರ್ತಪ್ರೆಸ್ ಜಾಕೆಟ್ ಧರಿಸಿ ವರದಿ ನೀಡುತ್ತಿದ್ದಾಗ ಇಸ್ರೇಲ್ ದಾಳಿ ಮಾಡಿದೆ. ಇದು ಉದ್ದೇಶಿತ ದಾಳಿಯಾಗಿದೆ. ರಷ್ಯಾ ಪತ್ರಕರ್ತ ಹಾಗೂ ಕ್ಯಾಮೆರಾಮ್ಯಾನ್ ಗಾಯಗೊಂಡಿದ್ದಾರೆ. ಇಸ್ರೇಲ್ ಎಲ್ಲಾ ನಿಯಮ ಉಲ್ಲಂಘಿಸುತ್ತಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ.

Scroll to load tweet…

ಸ್ಪಷ್ಟನೆ ನೀಡಿ, ದಾಖಲೆ ಬಹಿರಂಗಪಡಿಸಿದ ಇಸ್ರೇಲ್

ರಷ್ಯಾ, ಲೆಬೆನಾನ್ ಹಾಗೂ ಇರಾನ್ ಆಕ್ರೋಶ ಹೊರಹಾಕುತ್ತಿದಂತೆ ಇಸ್ರೇಲ್ ಸ್ಪಷ್ಟನೆ ನೀಡಿದೆ. ಲೆಬೆನಾನ್ ದಕ್ಷಿಣ ಭಾಗದಲ್ಲಿ ಕೆಳೆದ ಕೆಲ ದಿನಗಳಿಂದ ದಾಳಿ ನಡೆಯುತ್ತಿದೆ. ಈ ಕುರಿತು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶಗಳ ಜನರು ಸ್ಥಳ ಬಿಟ್ಟು ತೆರಳುವಂತೆ ಸೂಚನೆ ನೀಡಲಾಗಿದೆ. ದಾಳಿಗೂ ಮೊದಲೇ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಈ ಎಚ್ಚರಿಕೆ ಹೊರತಾಗಿಯೂ ವರದಿ ಮಾಡಲು ಹೋಗಿದ್ದಾರೆ. ದಾಳಿಗೂ ಕೆಲ ದಿನಗಳ ಮೊದಲೇ ಸೂಚನೆ ನೀಡಲಾಗಿತ್ತು. ಬಳಿಕ ದಾಳಿ ನಡೆಸುವ ಹಲವು ಗಂಟೆಗಳ ಮೊದಲು ನಾಗರೀಕರು ದಾಳಿ ಸ್ಥಳಗಳಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.



Source link

Leave a Reply

Your email address will not be published. Required fields are marked *