man use immersion rod to cook: ಗ್ಯಾಸ್ ಖಾಲಿ: ವಾಟರ್‌ ಹೀಟರ್ ಬಳಸಿ ಸಾಂಬಾರ್ ಮಾಡಿದ ಯುವಕ: ವೀಡಿಯೋ ಭಾರಿ ವೈರಲ್ | Lpg Fnished While Cooking Man Makes Sambar Using Immersion Rod Video Goes Viral

man use immersion rod to cook: ಗ್ಯಾಸ್ ಖಾಲಿ: ವಾಟರ್‌ ಹೀಟರ್ ಬಳಸಿ ಸಾಂಬಾರ್ ಮಾಡಿದ ಯುವಕ: ವೀಡಿಯೋ ಭಾರಿ ವೈರಲ್ | Lpg Fnished While Cooking Man Makes Sambar Using Immersion Rod Video Goes Viral



man use immersion rod to cook: ಗ್ಯಾಸ್ ಖಾಲಿ: ವಾಟರ್‌ ಹೀಟರ್ ಬಳಸಿ ಸಾಂಬಾರ್ ಮಾಡಿದ ಯುವಕ: ವೀಡಿಯೋ ಭಾರಿ ವೈರಲ್ | Lpg Fnished While Cooking Man Makes Sambar Using Immersion Rod Video Goes Viral

ಇರಾನ್ ಹಾಗೂ ಇಸ್ರೇಲ್ ಅಮೆರಿಕಾ ನಡುವಣ ಯುದ್ಧದಿಂದಾಗಿ ದೇಶದೆಲ್ಲೆಡೆ ಅಡುಗೆ ಅನಿಲ ಎಲ್‌ಪಿಜಿ ಸಮಸ್ಯೆ ಎದುರಾಗಿದೆ. ಹೀಗಿರುವಾಗ ಟೆಕ್ಕಿಯೊಬ್ಬರು ಗ್ಯಾಸ್ ಇಲ್ಲದೇ ಅಡುಗೆ ಮಾಡುವುದಕ್ಕೆ ಹೊಸ ಉಪಾಯ ಮಾಡಿದ್ದು,ಈ ವಿನೂತನ ಪ್ರಯೋಗದ ವೀಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ಗ್ಯಾಸ್ ಟ್ರಬಲ್‌ಗೆ ಹೊಸ ಪ್ರಯೋಗ ಮಾಡಿದ ಟೆಕ್ಕಿ

ಅನಿವಾರ್ಯತೆಯೇ ಮನುಷ್ಯನ ಅವಿಷ್ಕಾರಗಳ ಮೂಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇರಾನ್ ಹಾಗೂ ಇಸ್ರೇಲ್ ಅಮೆರಿಕಾ ನಡುವಣ ಯುದ್ಧದಿಂದಾಗಿ ದೇಶದೆಲ್ಲೆಡೆ ಅಡುಗೆ ಅನಿಲ ಎಲ್‌ಪಿಜಿ ಸಮಸ್ಯೆ ಎದುರಾಗಿದೆ. ಮದುವೆ ಮುಂಜಿ ಅಂತ ಶುಭಕಾರ್ಯಗಳನ್ನು ಇರಿಸಿಕೊಂಡಿರುವ ಅನೇಕರು ಅಡುಗೆ ಗ್ಯಾಸ್ ಸಿಗದೇ ಪರದಾಡುತ್ತಿದ್ದಾರೆ. ಇದರ ಜೊತೆಗೆ ನಗರದ ಬಹುತೇಕ ಕಡೆ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಅನೇಕ ಹೊಟೇಲ್‌ಗಳು ಮುಚ್ಚಲ್ಪಟ್ಟಿವೆ. ಊರು ಬಿಟ್ಟು ಉದ್ಯೋಗ ಅಂತ ಮಹಾನಗರಗಳಲ್ಲಿ ವಾಸ ಮಾಡುವ ಅನೇಕರು ಅಡುಗೆಗೆ ಗ್ಯಾಸ್ ಸಿಗದೆ ಪರದಾಡುತ್ತಿದ್ದಾರೆ. ಅನೇಕರು ಕರೆಂಟ್ ಸ್ಟೌವ್‌ ಅಥವಾ ಇಂಡಕ್ಷನ್ ಸ್ಟೌ ಮೊರೆ ಹೋಗಿದ್ದು, ಅವುಗಳಿಗೂ ಈಗ ಬೇಡಿಕೆ ಹೆಚ್ಚಿದೆ. ಆದರೆ ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಕಾಣಲು ಇಲ್ಲೊಬ್ಬ ಯುವಕ ಹೊಸದಾದ ಪ್ರಯೋಗ ಮಾಡಿದ್ದು, ಆತನ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ಹೌದು ಅಡುಗೆಯ ನಡುವೆ ಗ್ಯಾಸ್ ಮುಗಿದು ಹೋದ್ರೆ ಮೊದಲೆಲ್ಲಾ ಒಲೆ ಹೊತ್ತಿಸಿ ಬೆಂಕಿ ಮಾಡಲಾಗುತ್ತಿತ್ತು. ಆದರೆ ನಗರಗಳಲ್ಲಿ ಅದು ಸಾಧ್ಯವಿಲ್ಲ, ಏಕೆಂದರೆ ಉರುವಲು ತುಂಬುವ ಒಲೆಗಳೇ ನಗರದಲ್ಲಿ ಇಲ್ಲ, ಕೂಡಲೇ ಗ್ಯಾಸ್ ಬುಕ್ ಮಾಡೋಣ ಅಂದ್ರೆ ಯುದ್ಧದ ಪರಿಸ್ಥಿತಿಯಿಂದಾಗಿ ಈಗ ಅದೂ ಸಾಧ್ಯವಿಲ್ಲ. ಹೀಗಿರುವಾಗ ಇಲ್ಲೊಬ್ಬ ಯುವಕ ಮಾಡಿದ ಪ್ರಯೋಗ ಯಶಸ್ವಿಯಾಗಿದ್ದು, ಆತ ಗ್ಯಾಸ್ ಇಲ್ಲದೆಯೇ ಸಾಂಬಾರ್ ಮಾಡಿದ್ದಾನೆ ಹೇಗೆ ನೋಡಿ..

ಇದನ್ನೂ ಓದಿ: ಅಮೆರಿಕಾದ F-35 ಯುದ್ಧ ವಿಮಾನಕ್ಕೂ ಹೊಡೆಯಿತಾ ಇರಾನ್: ಅಮೆರಿಕಾ ಹೇಳಿದ್ದೇನು?

ನಗರಗಳಲ್ಲಿ ಬ್ಯಾಚುಲರ್ ಜೀವನ ಮಾಡುವ ಅನೇಕರು ಈ ನೀರು ಬಿಸಿ ಮಾಡೋದಿಕೆ ಅಂತ ವಾಟರ್ ಹಿಟರ್ ಇಟ್ಕೊಂಡಿರೋದು ಗೊತ್ತೆ ಇದೆ. ಅದನ್ನೇ ನೋಡಿ ಇಲ್ಲಿ ಯುವಕ ಅಡುಗೆ ಮಾಡುವುದಕ್ಕೆ ಬಳಸಿರುವುದು. ವೃತ್ತಿಯಲ್ಲಿ ಟೆಕ್ಕಿ ಆಗಿರುವ ಈ ಯುವಕನ ಔಟ್ ಆಫ್ ಬಾಕ್ಸ್ ಯೋಚನೆ ಗ್ಯಾಸ್ ಕೊರತೆಯ ಈ ಸಮಯದಲ್ಲಿ ಕೆಲಸ ಮಾಡಿದೆ.

ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋ ವೈರಲ್ ಕ್ರಿಯೇಟಿವಿಟಿಗೆ ಮೆಚ್ಚುಗೆ

ಹಿಮಾಂಕ್ ವಸುದೇವ್ ಎಂಬುವವರು ಈ ದೃಶ್ಯದ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ಯುವಕನ ಈ ಹೊಸ ಐಡಿಯಾವನ್ನು ಜನ ಮೆಚ್ಚಿಕೊಂಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಯುವಕ ಅಡುಗೆಮನೆಯಲ್ಲಿ ಸ್ಟೀಲ್ ಪಾತ್ರೆಗೆ ಸಾಂಬಾರ್ ಮಾಡುವುದಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಹಾಕಿ ಅದು ಕುದಿ ಬರುವುದಕ್ಕೆ ಆ ಸಾಂಬಾರ್‌ ನೀರಿಗೆ ಈ ವಾಟರ್ ಹೀಟರ್‌ನ್ನು ಇಟ್ಟಿದ್ದಾನೆ. ಈ ಐಡಿಯಾ ಕೆಲಸ ಮಾಡಿದ್ದು, ವಾಟರ್ ಹೀಟರ್ ನೀರಲ್ಲಿಟ್ಟಂತೆ ಬಿಸಿಯಾಗಿದ್ದು, ಸಾಂಬಾರ್ ಕುದಿಯೋದಕ್ಕೆ ಶುರು ಮಾಡಿದೆ.

ಇದನ್ನೂ ಓದಿ: ಯುದ್ಧದ ನಡುವೆ ಕುಸ್ತಿ ಚಾಂಪಿಯನ್ 19 ವರ್ಷದ ಸಲೇಹ್ ಮೊಹಮ್ಮದಿಯನ್ನು ಗಲ್ಲಿಗೇರಿಸಿದ ಇರಾನ್

‘ಗ್ಯಾಸ್ ಗಾನ್ ಹೀಟ್ ರಾಡ್ ಆನ್’ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್‌ ಮಾಡಿದ್ದಾರೆ. ಈ ಗ್ರೇವಿಯನ್ನು ತಿನ್ನಬಹುದೇ ಅಥವಾ ಇದ್ದರಲ್ಲಿ ಸ್ನಾನ ಮಾಡಬೇಕಾ ಎಂದು ಒಬ್ಬರು ಕೇಳಿದ್ದಾರೆ. ಇವರು 100% ಮಿದುಳು ಬಳಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇದನ್ನು ಪ್ರಯೋಗ ಮಾಡಬೇಕು. ಹೊಸ ಟೆಕ್ನಾಲಾಜಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಕೈ ಹಾಕಿ ಚೆಕ್ ಮಾಡಿ ಟೇಸ್ಟ್ ಹೇಗಿದೆ ಅಂತ ಎಂದು ಕಾಮೆಂಟ್ ಮಾಡಿದ್ದಾರೆ(ಕೈ ಹಾಕಿದ್ರೆ ಕರೆಂಟ್ ಶಾಕ್ ಹೊಡೆದು ಕತೆ ಮುಗಿಯೋದು ಗ್ಯಾರಂಟಿ). ಇಮ್ಮರ್ಶನ್ ರಾಡ್‌ಗಳನ್ನು ಸ್ನಾನ ಮಾಡಲು ಅಥವಾ ಸ್ವಚ್ಛಗೊಳಿಸಲು ನೀರನ್ನು ಬಿಸಿಮಾಡಲು ವಿನ್ಯಾಸಗೊಳಿಸಲಾಗಿದೆ. ನೇರ ಆಹಾರ ತಯಾರಿಕೆಗೆ ಅಲ್ಲ, ಮತ್ತು ಅವುಗಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲು ಅನುಮೋದಿಸಲಾಗುವುದಿಲ್ಲ, ಇದು ತೀವ್ರವಾದ ಹೊಟ್ಟೆಯ ಸೋಂಕಿಗೆ ಕಾರಣವಾಗಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಗ್ಯಾಸ್ ಇಲ್ಲದ ಈ ಸಮಯದಲ್ಲಿ ಈ ಹೊಸ ಐಡಿಯಾ ಅನೇಕರ ಮನಸೆಳೆದಿದೆ.

ವೀಡಿಯೋ ಇಲ್ಲಿದೆ ನೋಡಿ:



Source link

Leave a Reply

Your email address will not be published. Required fields are marked *