
ದೋಹಾ, ಮಾರ್ಚ್ 20: ಕತಾರ್ನ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್(ಇರಾನ್) ನಡೆಸಿದ ಘಾತಕ ದಾಳಿಯಿಂದ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಿಗೆ ಐದು ವರ್ಷಗಳವರೆಗೆ ಅನಿಲ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಈಗ ಬರುತ್ತಿರುವ ವರದಿಗಳ ಪ್ರಕಾರ, ಕತಾರ್‌ನಿಂದ ಭಾರತಕ್ಕೆ ರವಾನೆಯಾಗುತ್ತಿರುವ ಅನಿಲಕ್ಕೂ ಸಮಸ್ಯೆಯಾಗುವ ಸಾಧ್ಯತೆಯಿದೆ. ವಿಶ್ವದ ಶೇ.17ರಷ್ಟು ನೈಸಗರ್ಗಕ ಅನಿಲ ಪೂರೈಕೆಯು ಕತಾರ್‌ನ ಇದೊಂದೇ ಘಟಕದಿಂದ ಆಗುತ್ತದೆ.
ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದೆ, ಇರಾನ್ ದಾಳಿಯಿಂದ ಕತಾರ್‌ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್‌ನಷ್ಟು ಆದಾಯ ನಷ್ಟವಾಗುವ ಸಾಧ್ಯತೆಯಿದೆ. ಸುಮಾರು ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್ ಎನ್ ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯವಾಗಬಹುದು ಎಂದು ಅಂದಾಜಿಸಲಾಗಿದೆ.
ಇದನ್ನು ಕತಾರ್ನ ಇಂಧನ ಇಲಾಖೆಯೇ ಖಾತ್ರಿಪಡಿಸಿದೆ, ಇದು ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳ ಸಮಸ್ಯೆಗೆ ಸಂಬಂಧಿಸಿದೆ. ಇರಾನ್‌ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕಥಾರ್ನ ಅಂತಹ ಪ್ರಮುಖ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಾಗುವುದು ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಅಂದಾಜು ಮಾಡಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರವೊಂದು ಈ ರೀತಿ ದಾಳಿ ಮಾಡಿದೆ ಎಂದು ಕತಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ಕೃತ್ಯವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದುಃಸ್ವಪ್ನವಾಗಿ ಕಾಡಿದೆ.
ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಮತ್ತು ಚೀನಾಕ್ಕೆ ಅನಿಲ ಪೂರೈಕೆ ಘಟಕವು ಎರಡು ಟ್ರೇನ್ಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಈ ದೇಶದೊಂದಿಗೆ ದೀರ್ಘಾವಧಿಗೆ ಮಾಡಿಕೊಂಡಿದ್ದ ಅನಿಲ ಪೂರೈಕೆ ಒಪ್ಪಂದಗಳ ಮೇಲೆ ಕೂಲ ಪರಿಣಾಮ ಬೀರಿದೆ. ಎಲ್ಎನ್ಜಿ ಟ್ರೇನ್ ಎಸ್ 4 ಮೇಲೆ ದಾಳಿಯು ಹಾನಿಗೊಳಗಾದ ಪರಿಣಾಮದಿಂದ ಇಟಲಿ ಮತ್ತು ಬೆಲ್ಜಿಯಂಗೆ ಆಗುವ ಅನಿಲ ಪೂರೈಕೆಗಳು ಭಾಹಶಃ ಸ್ಥಗಿತಗೊಂಡಿವೆ.
ಮತ್ತಷ್ಟು ಓದಿ: ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ
ಇದು ಸರಿಯಾಗಲು ವರ್ಷಗಳೇ ಬೇಕಾಗಬಹುದು. ಎಸ್ 6 ಟ್ರೇನ್ ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿದೆ. ಒಂದೆಡೆ ಈ ದಾಳಿಯಿಂದ ವಿಶ್ವದ ಇತರ ರಾಷ್ಟ್ರಗಳ ಸಮಸ್ಯೆಯಾಗುವುದರೊಂದಿಗೆ ಕತಾರನ್ನು 10 ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕತಾರ್ನ ಇಂಧನ ಸಚಿವ ಅಲ್ ಕಾಬಿ ಹೇಳಿದ್ದಾರೆ. ಇರಾನ್ ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್ನಿರ್ಮಾಣಕ್ಕೆ 26 ಬಿಲಿಯನ್ ಬೇಕಾಗಬಹುದು ಎಂದು ಕತಾರ್ ಹೇಳಿದೆ.
ಈ ದಾಳಿಯಿಂದ ಕತಾರ್ನ ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಕುಸಿತವಾಗಿದೆ. ಘಟಕದ ಮೇಲಿನ ಹಾನಿಯಿಂದ ದೀರ್ಘಾವಧಿಯಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗದಿದ್ದರೂ ಅಲ್ಪಾವಧಿಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಭಾರತದ ಒಟ್ಟಾರೆ ಎಲ್‌ಎನ್‌ಜಿ ಆಮದಿನಲ್ಲಿ ಕತಾರ್‌ನ ಭಾಗವು ಶೇ.20ರಷ್ಟಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ