Headlines

Scandal ಸ್ವಯಂಘೋಷಿತ ದೇವಮಾನವನ ರಾಸಲೀಲೆ ವಿಡಿಯೋ ಹೊರಬಂದ ಬೆನ್ನಲ್ಲೇ ರಾಜಕಾರಣಿಗಳ ನಂಟು ಬಯಲು | Nashik Godman Arrest Police Probe Political Connections In Ashok Kharat Scandal

Scandal ಸ್ವಯಂಘೋಷಿತ ದೇವಮಾನವನ ರಾಸಲೀಲೆ ವಿಡಿಯೋ ಹೊರಬಂದ ಬೆನ್ನಲ್ಲೇ ರಾಜಕಾರಣಿಗಳ ನಂಟು ಬಯಲು | Nashik Godman Arrest Police Probe Political Connections In Ashok Kharat Scandal



Scandal ಸ್ವಯಂಘೋಷಿತ ದೇವಮಾನವನ ರಾಸಲೀಲೆ ವಿಡಿಯೋ ಹೊರಬಂದ ಬೆನ್ನಲ್ಲೇ ರಾಜಕಾರಣಿಗಳ ನಂಟು ಬಯಲು | Nashik Godman Arrest Police Probe Political Connections In Ashok Kharat Scandal

ಸ್ವಯಂಘೋಷಿತ ದೇವಮಾನವನ ರಾಸಲೀಲೆ ವಿಡಿಯೋ ಹೊರಬಂದ ಬೆನ್ನಲ್ಲೇ ರಾಜಕಾರಣಿಗಳ ನಂಟು ಬಯಲು, ಕ್ಯಾಪ್ಟನ್ ಅಶೋಕ್ ಖಾರಟ್ ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ವೈರಲ್ ಆಗಿ ಅರೆಸ್ಟ್ ಆಗಿದ್ದಾರೆ. ಇದೀಗ ರಾಜಕಾರಣಿ, ಆಸ್ತಿ ಕುರಿತು ಸ್ಫೋಟಕ ಮಾಹಿತಿ ಬಯಲಾಗಿದೆ.

ನಾಸಿಕ್ (ಮಾ.20) ಸ್ವಯಂಘೋಷಿತ ದೇವಮಾನವ ಹಾಗೂ ಜ್ಯೋತಿಷಿ ಅಶೋಕ್ ಖಾರಟ್ ಬಂಧನ ಬೆನ್ನಲ್ಲೇ ಸ್ಫೋಟಕ ಮಾಹಿತಿಗಳು ಹೊರಬಂದಿದೆ. ಪೂಜೆ, ಜ್ಯೋತಿಷ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕೇಳಿ ಬರುವ ಮಹಿಳೆಯನ್ನು ಟಾರ್ಗೆಟ್ ಮಾಡುವ ಈತ ಅಶೋಕ್ ಖಾರಟ್ ಡ್ರಗ್ಸ್ ನೀಡಿ ಅಥವಾ ಬೆದರಿಸಿ ಬಳಸಿಕೊಳ್ಳುತ್ತಿದ್ದಾರೆ. ಮಹಿಳೆಯೊಬ್ಬರ ಜೊತೆಗಿನ ಅಶ್ಲೀಲ ವಿಡಿಯೋ ಒಂದು ವೈರಲ್ ಆದ ಬೆನ್ನಲ್ಲೇ ಪೊಲೀಸರು ಅಶೋಕ್ ಖಾರಟ್ ಬಂಧಿಸಿದ್ದಾರೆ. ಬಂಧನ ಬೆನ್ನಲ್ಲೇ ಬರೋಬ್ಬರಿ 58 ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದೆ. ಇತ್ತ ಪೊಲೀಸರ ತನಿಖೆಯಲ್ಲಿ ಅಶೋಕ್ ಖಾರಟ್‌ಗೆ ಪ್ರಮುಖ ರಾಜಕಾರಣಿಗಳ ಜೊತೆ ತೀವ್ರ ನಂಟಿರುವ ಮಾಹಿತಿಯೂ ಬಹಿರಂಗವಾಗಿದೆ. ಇಷ್ಟೇ ಅಲ್ಲ ಅಶೋಕ್ ಖಾರಟ್ ಆಸ್ತಿ ಬಗ್ಗೆ ಭಾರಿ ಅನುಮಾನ ಮೂಡಿದೆ.

ಆಧ್ಯಾತ್ಮ, ಧಾರ್ಮಿಕತೆ ಹೆಸರಿನಲ್ಲಿ ಮಹಿಳೆಯರ ಮೇಲೆ ಅತ್ಯಾ””ರ

ಅಶೋಕ್ ಖಾರಟ್ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿ. ಹೀಗಾಗಿ ಕ್ಯಾಪ್ಟನ್ ಅಶೋಕ್ ಎಂದೇ ಚಿರಪರಿಚತರಾಗಿದ್ದಾರೆ. ನಿವತ್ತ ನೌಕಾ ಅಧಿಕಾರಿ ಹಾಗೂ ಆಧ್ಯಾತ್ಮಕವಾಗಿ ಸಾಧನೆ ಮಾಡಿದ್ದಾರೆ ಎಂದು ಜನರು ಬೇಗನ ನಂಬಿದ್ದರು. ಆದರೆ ಇವರ ಬಳಿ ಬರುತ್ತಿದ್ದ ಮಹಿಳೆಯರನ್ನು ಹೇಗಾದರೂ ಮಾಡಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದೆ. ಪ್ರತಿ ದಿನ ಹಲವರು ಸಲಹೆ, ಪರಿಹಾರಕ್ಕಾಗಿ ಅಶೋಕ್ ಖಾರತ್ ಬಳಿ ಬರುತ್ತಿದ್ದರು. ಇವರೆಲ್ಲರನ್ನು ಅಶೋಕ್ ಖಾರಟ್ ಬಳಸಿಕೊಂಡಿದ್ದಾನೆ.

ಅಶೋಕ್ ಖಾರಟ್ ಬಳಿ ಇದ್ದ ಪೆನ್ ಡ್ರೈವ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ 58 ವಿವಿಧ ಮಹಿಳೆಯರ ಜೊತೆ ದೈಹಿಕ ಸಂಪರ್ಕ ನಡೆಸಿರುವ ವಿಡಿಯೋ, ಅಶ್ಲೀಲವಾಗಿ ಬಳಸಿಕೊಂಡಿರುವ ವಿಡಿಯೋಗಳಿವೆ. ತನ್ನ ಬಳಿ ಪರಿಹಾರಕ್ಕೆ,ಸಹಾಯಕ್ಕಾಗಿ ಬಂದ ಬಹುತೇಕ ಎಲ್ಲಾ ಮಹಿಳೆಯರನ್ನು ಬಳಸಿಕೊಂಡಿರುವ ಆರೋಪವೂ ಇದೀಗ ಸ್ವಯಂಘೋಷಿತ ದೇವಮಾನವನ ಮೇಲಿದೆ. ಈ ವಿಡಿಯೋಗಳ ಪೈಕಿ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೊರಬಂದಿದೆ.

ರಾಜಕಾರಣಿಗಳ ನಂಟು

ಅಶೋಕ್ ಖಾರಟ್ ಹಲವು ಪ್ರಮುಖ ರಾಜಕಾರಣಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಪ್ರಮುಖ ನಾಯಕರು ಅಶೋಕ್ ಖರಾಟ್ ಬಳಿ ಆಶೀರ್ವಾದ ಪಡೆದಿದ್ದಾರೆ. ಈ ಕುರಿತ ಹಲವು ಫೋಟೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಅಶೋಕ್ ಖಾರಟ್ ಕೆಲ ರಾಜಕಾರಣಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಅಕ್ರಮ ಆಸ್ತಿ ಕುರಿತು ಪೊಲೀಸ್ ತನಿಖೆ

ಅಶೋಕ್ ಖಾರಟ್ ಕೆಲವೇ ವರ್ಷದಲ್ಲಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದರೆ. ಇದರ ಮೂಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಅಶೋಕ್ ಖಾರಟ್ ಆಸ್ತಿ ಗಳಿಕೆಯಲ್ಲಿ ಅಕ್ರಮ ನಡೆದಿದೆ ಅನ್ನೋ ಅನುಮಾನಗಳು ಪೊಲೀಸರನ್ನು ಕಾಡುತ್ತಿದೆ. ಹೀಗಾಗಿ ತನಿಖೆ ತೀವ್ರಗೊಂಡಿದೆ.



Source link

Leave a Reply

Your email address will not be published. Required fields are marked *