ಬಂಗಾರ ಖರೀದಿಸೋರಿಗೆ ಶುಭ ಶುಕ್ರವಾರ! ತಿಂಗಳ ಬಳಿಕ ಮೊದಲ ಸಲ 14 ಸಾವಿರದೊಳಗೆ ಬಂದ ಚಿನ್ನದ ಬೆಲೆ! ಇವತ್ತಿನ ರೇಟ್ ಎಷ್ಟು?

ಬಂಗಾರ ಖರೀದಿಸೋರಿಗೆ ಶುಭ ಶುಕ್ರವಾರ! ತಿಂಗಳ ಬಳಿಕ ಮೊದಲ ಸಲ 14 ಸಾವಿರದೊಳಗೆ ಬಂದ ಚಿನ್ನದ ಬೆಲೆ! ಇವತ್ತಿನ ರೇಟ್ ಎಷ್ಟು?

ಬಂಗಾರ ಖರೀದಿಸೋರಿಗೆ ಶುಭ ಶುಕ್ರವಾರ! ತಿಂಗಳ ಬಳಿಕ ಮೊದಲ ಸಲ 14 ಸಾವಿರದೊಳಗೆ ಬಂದ ಚಿನ್ನದ ಬೆಲೆ! ಇವತ್ತಿನ ರೇಟ್ ಎಷ್ಟು?

ಬೆಂಗಳೂರು: ಯುಗಾದಿ-ರಂಜಾನ್ ಹಾಗೂ ಮದುವೆ ಶುಭ ಸಮಾರಂಭಗಳ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಮಾರ್ಚ್ ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಬೆಲೆ 14 ಸಾವಿರದಿಂದ ಕೆಳಗಿಳಿದಿದೆ. ಮಾರ್ಚ್ 20ರಂದು ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

ಒಂದು ಕಡೆ ಇರಾನ್-ಇಸ್ರೇಲ್ ಯುದ್ದ ತಾರಕ್ಕೇರುತ್ತಿದೆ. ಮತ್ತೊಂದು ಕಡೆ ಸಾಲು ಸಾಲು ಹಬ್ಬ ಹರಿದಿನಗಳು, ಶುಭಸಮಾರಂಭಗಳು ಬರುತ್ತಿವೆ. ಹೀಗಿರುವಾಗಲೇ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿರುವುದು ಆಭರಣ ಖರೀದಿಸುವ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ಯುಗಾದಿ ಹಬ್ಬದ ದಿನದಂದು ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 714 ರುಪಾಯಿ ಇಳಿಕೆ ಕಂಡಿತ್ತು. ಅದೇ ರೀತಿ ಆಭರಣ ಚಿನ್ನವಾದ 22 ಕ್ಯಾರಟ್ ಪ್ರತಿ ಗ್ರಾಮ್‌ ಚಿನ್ನದ ಬೆಲೆಯಲ್ಲಿ 655 ರುಪಾಯಿ ಇಳಿಕೆ ಕಂಡಿದ್ದು ಚಿನ್ನ ಖರೀದಿಸುವವರ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಮಾರ್ಚ್ 19ರ ಅಂತ್ಯದ ವೇಳೆಗೆ ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 7140 ರುಪಾಯಿ ಇಳಿಕೆ ಕಂಡಿತ್ತು. ಆದರೆ ಇದೀಗ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 65 ರುಪಾಯಿಗಳ ಕೊಂಚ ಏರಿಕೆ ಕಂಡಿದೆ. ಇಂದು ಪ್ರತಿ ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,093 ರುಪಾಯಿಗಳಾಗಿದೆ.

ಇನ್ನೊಂದೆಡೆ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ ಮಾರ್ಚ್ ತಿಂಗಳಿನಲ್ಲಿ ಮೊದಲ ಸಲ 13 ಸಾವಿರ ರುಪಾಯಿ ಗಡಿಗೆ ಬಂದು ನಿಂತಿತ್ತು. ಇದೀಗ ಇಂದು ಪ್ರತಿ ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೇವಲ 60 ರುಪಾಯಿ ಏರಿಕೆಯಾಗಿದ್ದು, ಇಂದು ಪ್ರತಿ ಗ್ರಾಮ್‌ಗೆ 13,835 ರುಪಾಯಿಗಳಾಗಿವೆ.

ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 5000 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 2,55,000 ರುಪಾಯಿಗಳಾಗಿವೆ.

ಕಳೆದ 10 ದಿನಗಳಲ್ಲಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12380 ರುಪಾಯಿ ಇಳಿಕೆಯಾಗಿದ್ದರೇ, 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 11,350 ರುಪಾಯಿ ಇಳಿಕೆ ಕಂಡಿದೆ. ಇದು ಸಾಮಾನ್ಯವಾಗಿ ಆಭರಣ ಖರೀದಿಸುವವರ ಮುಖದಲ್ಲಿ ಕೊಂಚ ನಿರಾಳ ಭಾವ ಮೂಡಿಸಿದೆ.

Source link

Leave a Reply

Your email address will not be published. Required fields are marked *