ಈ ರೀತಿ ಹಿಟ್ಟು ಮಾಡಿದರೆ ಯಾರೇ ಆಗ್ಲಿ ದೋಸೆ, ಇಡ್ಲಿ ತಿನ್ನಲು ಮತ್ತೆಂದು ಹೋಟೆಲ್‌ಗೆ ಹೋಗೋದೆ ಇಲ್ಲ

ಈ ರೀತಿ ಹಿಟ್ಟು ಮಾಡಿದರೆ ಯಾರೇ ಆಗ್ಲಿ ದೋಸೆ, ಇಡ್ಲಿ ತಿನ್ನಲು ಮತ್ತೆಂದು ಹೋಟೆಲ್‌ಗೆ ಹೋಗೋದೆ ಇಲ್ಲ

ಈ ರೀತಿ ಹಿಟ್ಟು ಮಾಡಿದರೆ ಯಾರೇ ಆಗ್ಲಿ ದೋಸೆ, ಇಡ್ಲಿ ತಿನ್ನಲು ಮತ್ತೆಂದು ಹೋಟೆಲ್‌ಗೆ ಹೋಗೋದೆ ಇಲ್ಲ

Dosa Batter Tips: ಇಡ್ಲಿ, ದೋಸೆ ಎದುರಿಗಿದ್ದರೆ ಯಾರಿಗೆ ತಾನೇ ಇಷ್ಟವಾಗಲ್ಲ? ಆದರೆ ಹೋಟೆಲ್‌ನಲ್ಲಿ ಸಿಗುವಂತಹ ಅದ್ಭುತ ರುಚಿ, ಹದ ಮನೆಯಲ್ಲಿ ಬರಲ್ಲ ಅನ್ನೋದು ಹೆಚ್ಚಿನವರ ದೂರು. ಚಿಂತಿಸಬೇಡಿ, ಉದ್ದಿನಬೇಳೆ ಆರಿಸುವುದರಿಂದ ಹಿಡಿದು ಹಿಟ್ಟು ರುಬ್ಬುವವರೆಗೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್.

ನಾವೆಲ್ಲರೂ ಮನೆಯಲ್ಲಿ ದೋಸೆ ಅಥವಾ ಇಡ್ಲಿ ಮಾಡಿದಾಗ ಹೋಟೆಲ್‌ನಲ್ಲಿ ಸಿಗುವ ಹಾಗೆ ರುಚಿ ಬರುತ್ತಿಲ್ಲ ಎಂದು ಅಂದುಕೊಳ್ಳುವುದು ಸಹಜ. ಆದರೆ ಹಿಟ್ಟು ತಯಾರಿಸುವಾಗ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ನೀವೂ ಕೂಡ ಮನೆಯಲ್ಲೇ ಅದ್ಭುತವಾದ ಬ್ರೇಕ್‌ಫಾಸ್ಟ್ ಸಿದ್ಧಪಡಿಸಬಹುದು. ಫುಡ್ ಎಕ್ಸ್‌ಪರ್ಟ್ ನೀಡಿರುವ ಕೆಲವು ಅಮೂಲ್ಯ ಸಲಹೆಗಳು ಇಲ್ಲಿವೆ.

ಉದ್ದಿನಬೇಳೆಯ ಆಯ್ಕೆ ಮತ್ತು ನೆನೆಸುವ ವಿಧಾನ*ಇಡ್ಲಿ, ದೋಸೆ ಅಥವಾ ವಡೆಗೆ ಯಾವಾಗಲೂ ಸಿಪ್ಪೆ ಇಲ್ಲದ ಬಿಳಿ ಉದ್ದಿನಬೇಳೆ ಬಳಸುವುದು ಉತ್ತಮ.*ಒಂದು ವೇಳೆ ಸಿಪ್ಪೆ ಇರುವ ಉದ್ದಿನಬೇಳೆ ಬಳಸಿದರೆ ಅದರ 80% ಸಿಪ್ಪೆಯನ್ನು ತೆಗೆಯಬೇಕು. ವಡೆಗೆ ಬಳಸುವಾಗ 50% ಸಿಪ್ಪೆ ಇದ್ದರೂ ನಡೆಯುತ್ತದೆ.*ಉದ್ದಿನಬೇಳೆಯನ್ನು 3-4 ಗಂಟೆ ನೆನೆಸಿದರೆ ಸಾಕು. ಸಿಪ್ಪೆ ಇರುವ ಬೇಳೆಯಾದರೆ 6-7 ಗಂಟೆ ಬೇಕಾಗುತ್ತದೆ. ಬೇಳೆ ಬೇಗ ನೆನೆಯಬೇಕೆಂದರೆ ಅದಕ್ಕೆ ಒಂದು ಚಿಕ್ಕ ಕಬ್ಬಿಣದ ವಸ್ತುವನ್ನು ಹಾಕುವ ಹಳೆಯ ಕಾಲದ ಟ್ರಿಕ್ ಬಳಸಬಹುದು.

*ಇಡ್ಲಿಗೆ ಒಂದು ಲೋಟ ಉದ್ದಿನಬೇಳೆಗೆ ಎರಡೂವರೆ ಲೋಟ ಇಡ್ಲಿ ರವೆ ಅಥವಾ ಅಕ್ಕಿ ರವೆ (ಅಕ್ಕಿ ತರಿ) ಬಳಸಿ.*ಇಡ್ಲಿ ರವೆಯನ್ನು ನೇರವಾಗಿ ಹಿಟ್ಟಿನಲ್ಲಿ ಹಾಕಿ ನೆನೆಯಲು ಬಿಡಿ, ಪ್ರತ್ಯೇಕವಾಗಿ ನೀರಲ್ಲಿ ನೆನೆಸಬೇಡಿ. ಅಕ್ಕಿ ರವೆಯಾದರೆ ಉದ್ದಿನಬೇಳೆಯ ಜೊತೆಗೇ ನೆನೆಸಿ ರುಬ್ಬಿಕೊಳ್ಳಿ.*ರವೆಯಲ್ಲಿರುವ ನೀರನ್ನು ಬೇಗನೆ ತೆಗೆಯಲು ಕಾಟನ್ ಬಟ್ಟೆಯಲ್ಲಿ ಹಾಕಿ ಹಿಂಡುವುದು ಉತ್ತಮ ವಿಧಾನ.

*ಮಿಕ್ಸಿಗಿಂತ ವೆಟ್ ಗ್ರೈಂಡರ್‌ನಲ್ಲಿ ರುಬ್ಬಿದರೆ ಹಿಟ್ಟು ಹೆಚ್ಚು ಮೃದುವಾಗಿ ಬರುತ್ತದೆ.*ಒಂದು ವೇಳೆ ಮಿಕ್ಸಿಯಲ್ಲಿ ರುಬ್ಬುವಾಗ ಹಿಟ್ಟು ಬಿಸಿಯಾಗದಂತೆ ತಡೆಯಲು ಐಸ್ ವಾಟರ್ ಅಥವಾ ತಣ್ಣೀರನ್ನು ಬಳಸಿ. ಇದರಿಂದ ಹಿಟ್ಟು ಹಾಳಾಗುವುದಿಲ್ಲ.*ರುಬ್ಬಿದ ತಕ್ಷಣ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ ಇಡ್ಲಿ ಗಟ್ಟಿಯಾಗುತ್ತದೆ. ಆದ್ದರಿಂದ ಕೆಲವು ಗಂಟೆಗಳ ಕಾಲ ಹೊರಗಿಟ್ಟು ಹಿಟ್ಟು ಹದವಾಗಿ ಉಬ್ಬಿದ ನಂತರ ಬಳಸಿದರೆ ಇಡ್ಲಿಗಳು ಹೂವಿನಂತೆ ಮೃದುವಾಗಿ ಬರುತ್ತವೆ.

*ಒಂದು ಲೋಟ ಉದ್ದಿನಬೇಳೆಗೆ ಮೂರು ಲೋಟ ಅಕ್ಕಿ ಸರಿಯಾದ ಪ್ರಮಾಣ.*ದೋಸೆ ಹಿಟ್ಟಿಗೆ ಸ್ವಲ್ಪ ಮೆಂತ್ಯ, ಅವಲಕ್ಕಿ ಅಥವಾ ಕಡ್ಲೆಬೇಳೆ ಸೇರಿಸುವುದರಿಂದ ರುಚಿ ಹೆಚ್ಚುತ್ತದೆ.*ವಿಶೇಷವಾಗಿ ಕಡ್ಲೆಬೇಳೆ ಸೇರಿಸುವುದರಿಂದ ದೋಸೆಗೆ ಹೋಟೆಲ್‌ನಲ್ಲಿ ಸಿಗುವಂತಹ ಸುಂದರವಾದ ಚಿನ್ನದ ಬಣ್ಣ (Golden Color) ಬರುತ್ತದೆ.

*ಹಿಟ್ಟಿಗೆ ಅನ್ನವನ್ನು ಬೆರೆಸಬೇಡಿ. ಇದು ಆರೋಗ್ಯಕ್ಕೆ ಹಾನಿಕರ.*ಅಡುಗೆ ಸೋಡಾ ಬಳಸುವುದನ್ನು ತಪ್ಪಿಸಿ. ಇದು ಎಲುಬುಗಳನ್ನು ದುರ್ಬಲಗೊಳಿಸುತ್ತದೆ. ನೈಸರ್ಗಿಕವಾಗಿ ಹಿಟ್ಟು ಉಬ್ಬಲು ಬಿಡುವುದು ಅತ್ಯುತ್ತಮ.*ಹಿಟ್ಟನ್ನು 2-3 ದಿನಕ್ಕಿಂತ ಹೆಚ್ಚು ಕಾಲ ಸಂಗ್ರಹಿಸಿ ಬಳಸಬೇಡಿ.

ದೋಸೆ ಹಿಟ್ಟನ್ನು ರುಬ್ಬುವಾಗ ಸ್ವಲ್ಪ ಹಸಿ ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿದರೆ ದೋಸೆಯ ರುಚಿ ಮತ್ತಷ್ಟು ಹೆಚ್ಚುತ್ತದೆ ಮತ್ತು ಜೀರ್ಣಕ್ರಿಯೆಗೂ ಸಹಕಾರಿ.

Source link

Leave a Reply

Your email address will not be published. Required fields are marked *