Headlines

astrologer Video ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು | Shocking Revelations Nashik Godman Ashok Kharat Used Viagra Offerings To Trap Women

astrologer Video ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು | Shocking Revelations Nashik Godman Ashok Kharat Used Viagra Offerings To Trap Women



astrologer Video ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು | Shocking Revelations Nashik Godman Ashok Kharat Used Viagra Offerings To Trap Women

ಮಹಿಳೆಯರಿಗೆ ವಯಾಗ್ರ ಪ್ರಸಾದ, ಜ್ಯೋತಿಷಿ ಕಾಮಕೇಳಿ ವಿಡಿಯೋ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು, ತನ್ನ ಬಳಿ ಪರಿಹಾರ ಕೇಳಿ ಬರುತ್ತಿದ್ದ ಮಹಿಳೆಯರಿಗೆ ವಯಾಗ್ರ ನೀಡಿ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಮಹಿಳೆ ಜೊತೆಗಿನ ಅಶ್ಲೀಲ ವಿಡಿಯೋ ಬೆನ್ನಲ್ಲೇ ಜ್ಯೋತಿಷಿ ಅರೆಸ್ಟ್ ಆಗಿದ್ದಾರೆ.

ನಾಸಿಕ್ (ಮಾ.20) ಜ್ಯೋತಿಷಿ, ಸ್ವಯಂಘೋಷಿತ ದೇವಮಾನವನಾಗಿ ಗುರುತಿಸಿಕೊಂಡಿದ್ದ ಗುರೂಜಿ, ಕ್ಯಾಪ್ಟನ್ ಅಶೋಕ್ ಖಾರಟ್ ಒಂದೊಂದೇ ಕರ್ಮಕಾಂಡಗಳು ಬಯಲಾಗುತ್ತಿದೆ. ಪೊಲೀಸರು ನಕಲಿ ದೇವಮಾನವನ ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ವಸ್ತುಗಳ ವಶಪಡಿಸಿಕೊಂಡು ಹಲವು ವಿಡಿಯೋಗಳನ್ನು ಪರಿಶೀಲಿಸಿದ್ದಾರೆ. ಇದೀಗ ತನಿಖೆಯಲ್ಲಿ ಈ ಅಶೋಕ್ ಖಾರಟ್ ಮತ್ತೊಂದು ಕರಾಳ ಮುಖ ಬಯಲಾಗಿದೆ. ಜ್ಯೋತಿಷ್ಯ, ಆಧ್ಯಾತ್ಮ ಹೆಸರಿನಲ್ಲಿ ಮೋಸ ಮಾಡುತ್ತಿದ್ದ ಈತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಮಹಿಳೆಯರಿಗೆ ನೀಡತ್ತಿದ್ದ ಪ್ರಸಾದದಲ್ಲಿ ವಯಾಗ್ರ ಹಾಕಿ ಕೊಡುತ್ತಿದ್ದ ಬಳಿಕ ಕೆಲ ಹೊತ್ತು ಇರಲು ಹೇಳಿ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಈ ವಿಡಿಯೋಗಳು ಇದೀಗ ಹೊರಬಂದಿದೆ.

ಮಹಿಳೆಯರ ಕೂರಿಸಿ ಪೂಜೆ, ವಯಾಗ್ರ ಪ್ರಸಾದ

ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಆಧ್ಯಾಥ್ಮ, ಮಾಟ ಮಂತ್ರ ಸೇರಿದಂತೆ ಹಲವು ವಿಚಾರಗಳನ್ನು ಒಟ್ಟಿಗೆ ಸೇರಿಸಿ ತಾನು ಎಲ್ಲದಕ್ಕೂ ಪರಿಹಾರ ನೀಡುವ ಗುರೂಜಿ ಎಂದು ಗುರುತಿಸಿಕೊಂಡಿದ್ದಾರೆ. ಪರಿಹಾರ ಕೇಳಿ ಬರುತ್ತಿದ್ದ ಮಹಿಳೆಯರಿಗೆ ಆಧ್ಯಾತ್ಮ ಸೇರಿದಂತೆ ಹಲವು ಹೆಸರು ಹೇಳಿ ಕೆಲ ಪೂಜೆ ಹಾಗೂ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡುತ್ತಿದ್ದ. ಒಬ್ಬೊಬ್ಬ ಮಹಿಳೆಯರ ಕೂರಿಸಿ ಪೂಜೆ ಮಾಡಿಸುತ್ತಿದ್ದ. ಪೂಜೆ ಹೆಸರಿನಲ್ಲಿ ಆರಂಭದಲ್ಲೇ ವಯಾಗ್ರ ನೀಡುತ್ತಿದ್ದ. ಬಳಿಕ ವಯಾಗ್ರ ಆಕೆಯ ದೇಹದಲ್ಲಿ ಪ್ರತಿಕ್ರಿಯೆ ನೀಡುವವರೆಗೆ ಪೂಜೆ ಮಾಡುತ್ತಿದ್ದ. ಇದರ ನಡುವೆ ಆಕೆಯನ್ನು ಮೆಲ್ಲನೆ ಮುಟ್ಟಿ ಪ್ರಚೋದಿಸುವ ಕೆಲಸವನ್ನೂ ಈತ ಮಾಡುತ್ತಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.

ಕಲಶ ಹಿಡಿದು ನಿಲ್ಲುತ್ತಿದ್ದಂತೆ ಕಾಮದಾಟ ಆರಂಭ

ವಯಾಗ್ರ ಕೆಲಸ ಆರಂಭಿಸುತ್ತಿದ್ದಂತೆ ಸ್ವಯಂ ಘೋಷಿತ ದೇವಮಾನವನ ಆಟವೂ ಆರಂಭಗೊಳ್ಳುತ್ತಿತ್ತು. ಹೀಗೆ ಆಧ್ಯಾತ್ಮಿಕ ಪ್ರಕ್ರಿಯೆ ನಡುವಿನ ಈ ಅಶ್ಲೀಲ ವಿಡಿಯೋ ಇದೀಗ ವೈರಲ್ ಆಗಿದೆ. ಮಹಿಳೆಯ ತಲೆ ಮೇಲೆ ಕಳಶ ರೀತಿ ಹಿಡಿದು ನಿಲಲ್ಲು ಸೂಚಿಸಿದ್ದಾನೆ. ಕೆಲವೇ ಹೊತ್ತಲ್ಲಿ ಮಹಿಳೆಯನ್ನು ಪುಸಲಾಯಿಸಿ ಕಾಮಕ್ಕೆ ಬಳಸಿಕೊಂಡಿದ್ದಾನೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ದಾಳಿ ಮಾಡಿ ಅಶೋಖ್ ಖಾರಟ್ ಬಂಧಿಸಲಾಗಿದೆ. ಈತನ ಬಳಿ ಇದ್ದ ಪೆನ್‌ಡ್ರೈವ್‌ನಲ್ಲಿ 58 ವಿವಿಧ ಮಹಿಳೆಯರ ಜೊತೆ ಇದೇ ರೀತಿ ಕಾಮಕೇಳಿ ನಡೆಸಿದ ವಿಡಿಯೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜಕಾರಣಿಗಳು, ಉದ್ಯಮಿಗಳ ಈತನಿಂದ ಆಶೀರ್ವಾದ ಪಡೆದಿದ್ದಾರೆ. ಪ್ರಮುಖ ಹುದ್ದೆಯಲ್ಲಿರುವ ಗಣ್ಯರು ಈ ನಕಲಿ ದೇವಮಾನವನಿಂದ ಆಶೀರ್ವಾದ ಪಡೆದು ಧನ್ಯರಾಗಿದ್ದಾರೆ. ಆದರೆ ಈತನ ಅಸಲಿ ಮುಖ ಹೊರಬರುತ್ತಿದ್ದಂತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈತನ ಬಳಿ ಬಂದ ಮಹಿಳೆಯರ ಕಾಮಕೇಳಿ ವಿಡಿಯೋ ಸೇರಿದಂತೆ ಕಾಮಕಾಂಡ ಹೊರಬೀಳುತ್ತಿದ್ದಂತೆ ಹಲವರು ನಾನವನಲ್ಲ ಎನ್ನುತ್ತಿದ್ದಾರೆ. ತನಿಖೆಯಲ್ಲಿ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ.

ಅಶೋಕ್ ಖಾರಟ್ ನಿವೃತ್ತ ನೌಕಾಧಿಕಾರಿ. ನೇವಿಯಿಂದ ನಿವೃತ್ತಿಯಾದ ಬಳಿಕ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಆಧ್ಯಾತ್ಮ ಎಂದು ಕೇಂದ್ರ ಆರಂಭಿಸಿದ ಈ ಅಶೋಕ್ ಖಾರಟ್, ಅಲ್ಲಿಂದಲೇ ಈ ಬ್ಯೂಸಿನೆಸ್ ಶುರುಮಾಡಿದ್ದ. ಸಮಸ್ಯೆ ಪರಿಹಾರಕ್ಕೆ ಲಕ್ಷ ಲಕ್ಷ ರೂಪಾಯಿ ಸಂಭಾವನೆಯಾಗಿ ಪಡೆಯುತ್ತಿದ್ದ. 100ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಇದೇ ರೀತಿ ಮಾಡಿದ್ದಾನೆ. ಇನ್ನು ಹಲವು ಉದ್ಯಮಿ ಕುಟುಂಬಗಳ ಮಹಿಳೆಯರಿಗೆ ಮೊದಲು ವಿಡಿಯೋ ಮಾಡಿ ಬಳಿಕ ವಿಡಿಯೋ ತೋರಿಸಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

Scroll to load tweet…



Source link

Leave a Reply

Your email address will not be published. Required fields are marked *