Headlines

‘ಧುರಂಧರ್’ ನಟ ರಣವೀರ್‌ ಸಿಂಗ್‌ಗೆ ಪಾಕಿಸ್ತಾನದ ನಂಟು; ಭಾರೀ ಶಾಕಿಂಗ್ ಸಂಗತಿ ಬಹಿರಂಗ..! | Dhurandhar 2 The Revenge Ranveer Singh Intriguing Pakistan Link You Probably Did Not Know About

‘ಧುರಂಧರ್’ ನಟ ರಣವೀರ್‌ ಸಿಂಗ್‌ಗೆ ಪಾಕಿಸ್ತಾನದ ನಂಟು; ಭಾರೀ ಶಾಕಿಂಗ್ ಸಂಗತಿ ಬಹಿರಂಗ..! | Dhurandhar 2 The Revenge Ranveer Singh Intriguing Pakistan Link You Probably Did Not Know About



‘ಧುರಂಧರ್’ ನಟ ರಣವೀರ್‌ ಸಿಂಗ್‌ಗೆ ಪಾಕಿಸ್ತಾನದ ನಂಟು; ಭಾರೀ ಶಾಕಿಂಗ್ ಸಂಗತಿ ಬಹಿರಂಗ..! | Dhurandhar 2 The Revenge Ranveer Singh Intriguing Pakistan Link You Probably Did Not Know About

ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ಬರೆದಿದೆ. ಪ್ರಿವ್ಯೂ ಶೋ ಮತ್ತು ಮೊದಲ ದಿನದ ಕಲೆಕ್ಷನ್ ಸೇರಿದಂತೆ ಈವರೆಗೆ ಒಟ್ಟು 144 ಕೋಟಿ ರೂಪಾಯಿ ಬಾಚಿಕೊಂಡಿದೆ. ಮಾರ್ಚ್ 19, 2026 ರಂದು ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಧುರಂಧರ್ 2’ ಅಬ್ಬರದ ನಡುವೆ ರಣ್ವೀರ್ ಸಿಂಗ್ ಪಾಕಿಸ್ತಾನ್ ಕನೆಕ್ಷನ್ ಬಹಿರಂಗ! ನಿಮಗೆ ಗೊತ್ತಿಲ್ಲದ ಅಚ್ಚರಿಯ ವಿಷಯ ಇಲ್ಲಿದೆ!

ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್‌ ಸಿಂಗ್‌ ಸದ್ಯ ತಮ್ಮ ಹೊಸ ಸಿನಿಮಾ ‘ಧುರಂಧರ್ 2: ದಿ ರಿವೆಂಜ್’ (Dhurandhar 2: The Revenge) ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದಾರೆ. ಈ ಚಿತ್ರದಲ್ಲಿ ಅವರು ಪಾಕಿಸ್ತಾನದ ಉಗ್ರರ ಅಡಗುತಾಣಕ್ಕೆ ನುಗ್ಗುವ ಭಾರತೀಯ ಗೂಢಚಾರಿ ಹಮ್ಜಾ ಅಲಿ ಮಜಾರಿ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಆದರೆ, ತೆರೆಯ ಮೇಲೆ ಪಾಕಿಸ್ತಾನದ ವಿರುದ್ಧ ಹೋರಾಡುವ ಈ ನಟನಿಗೂ, ಆ ದೇಶಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎನ್ನುವ ಸತ್ಯ ನಿಮಗೆ ಗೊತ್ತೇ? ಹೌದು, ರಣವೀರ್‌ ಸಿಂಗ್‌ ಅವರ ಕುಟುಂಬದ ಬೇರುಗಳು ಇಂದಿನ ಪಾಕಿಸ್ತಾನದಲ್ಲಿವೆ!

ಪಾಕಿಸ್ತಾನದ ರಾಯಭಾರಿಯ ಸೋದರ ಸೊಸೆ ಈ ‘ಧುರಂಧರ್’ ನಟ!

ಬಿಬಿಸಿ ಇಂಡಿಯಾ ವರದಿಯ ಪ್ರಕಾರ, ರಣವೀರ್‌ ಸಿಂಗ್‌ ಅವರ ಅಜ್ಜಿ ಚಂದ್ ಬರ್ಕೆ (Chand Burke) ಅವರು 1940ರ ದಶಕದಲ್ಲಿ ಅಖಂಡ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು. ದೇಶ ವಿಭಜನೆಯ ನಂತರ ಅವರು ವಾಸವಿದ್ದ ಆ ಗ್ರಾಮ ಈಗ ಪಾಕಿಸ್ತಾನದಲ್ಲಿದೆ. ಚಂದ್ ಬರ್ಕೆ ಅವರ ಸಹೋದರ ಸ್ಯಾಮ್ಯುಯೆಲ್ ಮಾರ್ಟಿನ್ ಬರ್ಕೆ ಅವರು ಪಾಕಿಸ್ತಾನದ ದೊಡ್ಡ ರಾಜತಾಂತ್ರಿಕರಾಗಿದ್ದರು. ಅವರು ಸುಮಾರು 11 ದೇಶಗಳಿಗೆ ಪಾಕಿಸ್ತಾನದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಆದರೆ ಚಂದ್ ಬರ್ಕೆ ಅವರು ಚಿತ್ರರಂಗದ ಮೇಲೆ ಒಲವು ಬೆಳೆಸಿಕೊಂಡು ಮುಂಬೈಗೆ ವಲಸೆ ಬಂದರು.

ಪಂಜಾಬ್‌ನ ‘ಡ್ಯಾನ್ಸಿಂಗ್ ಲಿಲಿ’ ಚಂದ್ ಬರ್ಕೆ:

ರಣವೀರ್‌ ಸಿಂಗ್‌ ಅವರ ಅಜ್ಜಿ ಚಂದ್ ಬರ್ಕೆ ಆ ಕಾಲದ ಖ್ಯಾತ ಪೋಷಕ ನಟಿಯಾಗಿದ್ದರು. ದೇಶ ವಿಭಜನೆಗೂ ಮುನ್ನ ಅವರು ಪಾಕಿಸ್ತಾನದ ಲಾಹೋರ್‌ನಲ್ಲಿ ತಯಾರಾಗುತ್ತಿದ್ದ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅವರ ನೃತ್ಯಕ್ಕೆ ಮಾರುಹೋಗಿದ್ದ ಜನರು ಅವರನ್ನು ‘ಡ್ಯಾನ್ಸಿಂಗ್ ಲಿಲಿ ಆಫ್ ಪಂಜಾಬ್’ (Dancing Lily of Punjab) ಎಂದು ಕರೆಯುತ್ತಿದ್ದರು. ವಿಭಜನೆಯ ನಂತರ ಅವರು ಮುಂಬೈಗೆ ಬಂದು ಹಿಂದಿ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದರು.

ರಾಜ್ ಕಪೂರ್ ನೀಡಿದ ಬ್ರೇಕ್:

ಮುಂಬೈಗೆ ಬಂದ ನಂತರ ಚಂದ್ ಬರ್ಕೆ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದವು. ಆಗ ಖ್ಯಾತ ನಟ ರಾಜ್ ಕಪೂರ್ ಅವರು ಚಂದ್ ಬರ್ಕೆ ಅವರನ್ನು ಗುರುತಿಸಿ ‘ಬೂಟ್ ಪಾಲಿಶ್’ (Boot Polish – 1954) ಚಿತ್ರದಲ್ಲಿ ನಟಿಸುವಂತೆ ಮಾಡಿದರು. ಆ ಚಿತ್ರದಲ್ಲಿ ಅವರು ಅನಾಥ ಮಕ್ಕಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವ ಕ್ರೂರಿ ಅತ್ತೆಯ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಮುಂದೆ ಅವರು ಸುಂದರ್ ಸಿಂಗ್ ಭವನಾನಿ ಅವರನ್ನು ವಿವಾಹವಾದರು. ಇದೇ ಸುಂದರ್ ಸಿಂಗ್ ಭವನಾನಿ ಮತ್ತು ಚಂದ್ ಬರ್ಕೆ ಅವರ ಮೊಮ್ಮಗನೇ ಈ ನಮ್ಮ ರಣವೀರ್‌ ಸಿಂಗ್‌ ಭವನಾನಿ!

ಧುರಂಧರ್ 2 ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ:

ಇನ್ನು ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಬಗ್ಗೆ ಹೇಳುವುದಾದರೆ, ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಸುವ ಮೂಲಕ ದಾಖಲೆ ಬರೆದಿದೆ. ಪ್ರಿವ್ಯೂ ಶೋ ಮತ್ತು ಮೊದಲ ದಿನದ ಕಲೆಕ್ಷನ್ ಸೇರಿದಂತೆ ಈವರೆಗೆ ಒಟ್ಟು 144 ಕೋಟಿ ರೂಪಾಯಿ ಬಾಚಿಕೊಂಡಿದೆ. ಮಾರ್ಚ್ 19, 2026 ರಂದು ತೆರೆಗೆ ಬಂದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತೆರೆಯ ಮೇಲೆ ಪಾಕಿಸ್ತಾನದ ವಿರುದ್ಧ ಗುಡುಗುವ ರಣವೀರ್‌ ಸಿಂಗ್‌, ನಿಜ ಜೀವನದಲ್ಲಿ ಪಾಕಿಸ್ತಾನದ ನಂಟನ್ನು ಹೊಂದಿರುವುದು ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಒಟ್ಟಿನಲ್ಲಿ ರನ್ವೀರ್ ಅವರ ಈ ಐತಿಹಾಸಿಕ ನಂಟು ಅವರ ‘ಧುರಂಧರ್’ ಪಾತ್ರಕ್ಕೆ ಒಂದು ಹೊಸ ಆಯಾಮ ನೀಡಿದಂತಿದೆ.



Source link

Leave a Reply

Your email address will not be published. Required fields are marked *