ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ವಿಚ್ಛೇದನದ ನಂತರ ಆರ್ಥಿಕವಾಗಿ ಸದೃಢರಾಗಲು ಐಟಂ ಸಾಂಗ್ ಮಾಡಲು ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಸಮುದ್ರಕ್ಕೆ ಜಿಗಿದು ಮಾಡಿದ ರೀಲ್ಸ್ ವೈರಲ್ ಆಗಿದ್ದು, ದಾಂಪತ್ಯದ ಬಗ್ಗೆ ಅವರು ನೀಡಿದ ಸಲಹೆಗೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಮತ್ತು ಚಂದನ್ ಶೆಟ್ಟಿ ಅವರ ವಿಷ್ಯ ಎಲ್ಲರಿಗೂ ತಿಳಿದದ್ದೇ. . ಇನ್ನೂ ವಯಸ್ಸು 20 ಇರುವಾಗಲೇ ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿಯವರ ಲವ್ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಡಿವೋರ್ಸ್ ಪಡೆದಾಗಿನಿಂದ, ತುಂಡುಡುಗೆಯಲ್ಲಿ ರೀಲ್ಸ್ ಮಾಡುವ ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವಾಕೆಯೇ.

ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.

ಇದೀಗ ಅವರು ಸಮುದ್ರಕ್ಕೆ ಜಿಗಿದು ಅಲ್ಲೊಂದು ರೀಲ್ಸ್ ಮಾಡಿ ಅದನ್ನು ಶೇರ್ ಮಾಡಿದ್ದಾರೆ. honeymoon island state park ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದು ನಿಜವಾದರೆ ಫ್ಲೊರಿಡಾದಲ್ಲಿ ನಟಿ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ. ಸಮದ್ರ ನೋಡಿದ ನೆಟ್ಟಿಗರು, ಬೇಡ ಕಣಮ್ಮಾ ಈ ಸಾಹಸ ಬಿದ್ದುಗಿದ್ದು ಬಿಟ್ಯಾ ಎನ್ನುತ್ತಿದ್ದಾರೆ. ಆದರೆ ಇದೇ ರೀಲ್ಸ್ನಲ್ಲಿ ನಿವ್ವಿ ಚಪ್ಪಲಿಯನ್ನು ಕೂಡ ತೋರಿಸಿದ್ದು, ಎಲ್ಲಾ ಓಕೆ, ಚಪ್ಪಲಿ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಿವೇದಿತಾ ಗೌಡರ ಈ ರೀಲ್ಸ್ ಕೂಡ ಸಕತ್ ಸೌಂಡ್ ಮಾಡುತ್ತಿದೆ.

ಕೆಲ ದಿನಗಳ ಹಿಂದಷ್ಟೇ ನಟಿ, ಸಂಗಾತಿಯನ್ನು ಹೇಗೆ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಸಂದರ್ಶನದಲ್ಲಿ ಟಿಪ್ಸ್ ಕೊಟ್ಟಿದ್ದರು. ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಿವೇದಿತಾ ಅವರು, ಸಂಗಾತಿಗೆ ಎಷ್ಟು ಗಂಟೆ ಮೀಸಲು ಇಡುತ್ತೇವೆ ಎನ್ನುವುದು ಮುಖ್ಯವಲ್ಲ. ಇಡುವ ಸಮಯವನ್ನು ಹೇಗೆ ಗುಣಮಟ್ಟದಲ್ಲಿ ಕಳೆಯುತ್ತೇವೆ ಎನ್ನುವುದು ಮುಖ್ಯ ಎಂದಿದ್ದರು.

24 ಗಂಟೆ ಅವರೊಟ್ಟಿಗೆ ಇರುವುದು ಮುಖ್ಯವಲ್ಲ, ಅರ್ಧ ಗಂಟೆ ಜೊತೆಯಾಗಿ ಇದ್ದರೂ ಗುಣಮಟ್ಟದ ಸಮಯ ನೀಡಬೇಕು. Quantity ಮುಖ್ಯವಲ್ಲ, Quality ಮುಖ್ಯ ಎಂದು ಹೇಳಿದ್ದರು. ಹೀಗೆ ಆದರೆ. ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದರು.

ನಿವೇದಿತಾ ಗೌಡ ಅವರ ಈ ಟಿಪ್ಸ್ ಕೇಳಿ ನೆಟ್ಟಿಗರು ಸುಸ್ತಾಗಿದ್ದಾರೆ. ಆಕೆ ಏನು ಹೇಳುತ್ತಿದ್ದಾಳೆ ಎನ್ನುವುದು ಅವಳಿಗೆ ಗೊತ್ತಾ ಎಂದು ಕೆಲವರು ಪ್ರಶ್ನಿಸಿದರೆ, ನಿನ್ನ ಬಾಯಿಯಿಂದ ಕಿವಿಮಾತು ಕೇಳಿ ಧನ್ಯನಾದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಕನ್ನಡೇತರ ಚಾನೆಲ್ ಒಂದರಲ್ಲಿ ಕುಳಿತು ಇನ್‌ಸ್ಪಿರೇಷನ್ ಮಾತನಾಡ್ತಿರೋ ನಟಿಗೆ ದೊಡ್ಡ ನಮಸ್ಕಾರ ಹಾಕಿದ್ದಾರೆ ಕನ್ನಡದ ಜನತೆ!

Source link
ಹನಿಮೂನ್ ಲ್ಯಾಂಡ್ನಲ್ಲಿ ಸಮುದ್ರಕ್ಕೆ ಧುಮುಕಿದ Nivedita Gowda! ಚಪ್ಪಲಿ ಫೋಟೋ- ನಟಿ ಹೇಳಿದ್ದೇನು?