
ಮಸಾಲೆ ಕಂಪನಿ ನಡೆಸೋ, ಹಸಿವೇ ನೋಡದ ಕುಟುಂಬದ ಹುಡುಗ ವಿರಾಜ್. ಈತನಿಗೆ ಮಲ್ಲಿಯನ್ನು ನೋಡಿದ್ ಕೂಡ್ಲೇ ಲವ್ವಾಗುತ್ತೆ. ಈಕೆಗೋ ಶ್ರೀಮಂತರನ್ನು ಕಂಡರಾಗದು. ಈ ಮಧ್ಯೆ ದ್ವೇಷಕ್ಕಾಗಿ ಮನೆಯೊಳಗೆ ನಡಿಯೋ ಸಂಚುಗಳು. ಇವೆಲ್ಲ ನಡಿಯೋವಾಗ ಮಲ್ಲಿ ಮತ್ತು ವಿರಾಜ್ ಲವ್ ಸ್ಟೋರಿ ಎಲ್ಲಿ ಮುಟ್ಟುತ್ತೆ? ಇದಕ್ಕೆ ಉತ್ತರ ಸೋಮವಾರ ರಾತ್ರಿ 8 ಗಂಟೆಗೆ ಸಿಗುತ್ತೆ.
“ಅಂತರಪಟ” ಖ್ಯಾತಿಯ ಚಂದನ್ ಗೌಡ ನಾಯಕ, “ಕೋಟಿ” ಸಿನಿಮಾದಲ್ಲಿ ಡಾಲಿ ಧನಂಜಯ ತಂಗಿಯಾಗಿ ನಟಿಸಿದ್ದ ತನುಜಾ ವೆಂಕಟೇಶ್ ನಾಯಕಿ. ಹಿರಿಯ ನಟಿ ಅಂಬಿಕಾ, ತೆಲುಗು ಬಿಗ್‌ಬಾಸ್ ಖ್ಯಾತಿಯ ಕನ್ನಡತಿ ಕೀರ್ತಿ ಭಟ್, ಆರ್ಯ, ವೀಣಾ ಪೊನ್ನಪ್ಪ, ಪುನೀತ್, ಮರೀನಾ- ಹೀಗೆ ಭಾರೀ ತಾರಾಗಣ “ಮೂಗುತಿ ಮಲ್ಲಿ”ಯಲ್ಲಿದೆ.