Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ

Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ  ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ

Bigg Boss ಮನೆಗೆ ರಶ್ಮಿಕಾ ಜೊತೆ ಹೋಗೋ ಛಾನ್ಸ್​ ಸಿಕ್ರೆ  ರಕ್ಷಿತ್​ ಶೆಟ್ಟಿ ಮಾಡೋದೇನು? ನಟನ ಬಾಯಲ್ಲೇ ಕೇಳಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆ ಸುದ್ದಿಯ ನಡುವೆ, ನಟ ರಕ್ಷಿತ್ ಶೆಟ್ಟಿ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ. ತಮ್ಮಿಬ್ಬರ ಸಂಬಂಧ ಮುರಿದುಬಿದ್ದ ಬಗ್ಗೆ ಮಾತನಾಡಿದ್ದ ರಕ್ಷಿತ್, ರಶ್ಮಿಕಾರಿಂದ ಒಂದು ಪಾಠ ಕಲಿತಿದ್ದೇನೆ ಮತ್ತು ಅದಕ್ಕೆ ಅವರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದರು.
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ (Rashmika Mandanna and Vijaya Devarakonda) ಮದುವೆಯಾಗಿ ಇದಾಗಲೇ ರಶ್ಮಿಕಾ ಸಿನಿಮಾ ಶೂಟಿಂಗ್​ಗೂ ವಾಪಸ್​ ಬಂದಾಗಿದೆ. ಆದರೂ ಇವರ ಮದುವೆಯ ಬಗ್ಗೆ ಇಂದಿಗೂ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಲೇ ಇದೆ.

ಇದೇ ವೇಳೆ ಮುನ್ನೆಲೆಗೆ ಬಂದಿದ್ದು ನಟ ರಕ್ಷಿತ್​ ಶೆಟ್ಟಿ (Rakhsit Shetty). ಎಲ್ಲರಿಗೂ ತಿಳಿದಿರುವಂತೆ ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​ ಆಗಿತ್ತು. ಆದರೆ ಮದುವೆ ಮುರಿದು ಬಿದ್ದಿತ್ತು. ರಶ್ಮಿಕಾ ಮದುವೆಯ ಬೆನ್ನಲ್ಲೇ ಈ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ರಕ್ಷಿತ್​ ಅವರ ಹಳೆಯ ವಿಡಿಯೋಗಳೆಲ್ಲವೂ ವೈರಲ್​ ಆಗುತ್ತಿದೆ.

ಇದೀಗ ಅಂಥದ್ದೇ ಮತ್ತೊಂದು ವಿಡಿಯೋ ವೈರಲ್​ ಆಗಿದೆ. ಇದು ಗೌರೀಶ್​ ಅಕ್ಕಿ ಸ್ಟುಡಿಯೋ ಯುಟ್ಯೂಬ್​ ಚಾನೆಲ್​ಗೆ ರಕ್ಷಿತ್​ ಶೆಟ್ಟಿ ಅವರು ನೀಡಿದ್ದ ವಿಡಿಯೋ. ಅವರಿಬ್ಬರ ಸಂಬಂಧ ಮುರಿದ ಬಳಿಕ ಆ ವಿಷಯ ಹಾಟ್​ ಆಗಿದ್ದಾಗ, ಈ ಬಗ್ಗೆ ನಟ ಹೇಳಿದ್ದೀಗ ವೈರಲ್​ ಆಗುತ್ತಿದೆ.

ನಮ್ಮ ಜೀವನದಲ್ಲಿ ಯಾರೇ ಬಂದರೂ ನಮಗೆ ಏನೋ ಒಂದು ಪಾಠ ಕಲಿಸಿ ಹೋಗ್ತಾರೆ. ರಶ್ಮಿಕಾ ಮತ್ತು ನನ್ನ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಇಬ್ಬರೂ ಒಂದೊಂದು ಪಾಠ ಕಲಿತಿದ್ದೇವೆ. ಇದರಿಂದ ನನಗೆ ಬೇಸರವಿಲ್ಲ ಎಂದಿರುವ ರಕ್ಷಿತ್​ ತಾವೇನು ಪಾಠ ಕಲಿತಿದ್ದೇವೆ ಎಂದು ಹೇಳಲು ನಿರಾಕರಿಸಿದರು.

ಬ್ರೇಕಪ್​ ಆಗಿದ್ದಕ್ಕೆ ಬೇಸರವಿಲ್ಲ. ಜೀವನದಲ್ಲಿ ಎಲ್ಲವೂ ಮಾಮೂಲು. ಅದಕ್ಕೆ ತಮ್ಮದೇ ಆದ ಕಾರಣಗಳು ಇರುತ್ತವೆ. ಇಲ್ಲಿಯೂ ಹಾಗೆಯೇ ಆಗಿದೆ. ಯಾವ ಕಾರಣಕ್ಕೂ ನಾನು ರಶ್ಮಿಕಾ ಮಂದಣ್ಣ ಅವರನ್ನು ದೂಷಿಸುವುದಿಲ್ಲ ಎಂದು ನಟ ಹೇಳಿದ್ದಾರೆ.

ಇದೇ ವೇಳೆ ಬಿಗ್​ಬಾಸ್​ ಮನೆಗೆ ರಶ್ಮಿಕಾ ಸೇರಿದಂತೆ ಇತರ ಕೆಲವು ನಟರ ಜೊತೆಗೆ ಹೋಗುವ ಛಾನ್ಸ್​ ಸಿಕ್ಕರೆ ಏನ್​ ಮಾಡ್ತೀರಾ ಎನ್ನುವ ಪ್ರಶ್ನೆ ಎದುರಾದಾಗ, ಕೂಡಲೇ ನಕ್ಕ ರಕ್ಷಿತ್​ ಅವರು, ಎಲ್ಲರ ಜೊತೆ ಸೇರಿ ಒಂದು ಸಿನಿಮಾ ಮಾಡುತ್ತೇನೆ ಎಂದು ಜಾಣ ಉತ್ತರ ಕೊಟ್ಟಿದ್ದಾರೆ.

Source link

Leave a Reply

Your email address will not be published. Required fields are marked *