Brahmagantu Twist: ಕೊನೆಗೂ ದಿಶಾ ಜೊತೆ ಚಿರು ಮದುವೆ? ಗುಣ vs ಸೌಂದರ್ಯ ಯಾವುದು ಗೆಲ್ಲತ್ತೆ?

Brahmagantu Twist: ಕೊನೆಗೂ ದಿಶಾ ಜೊತೆ ಚಿರು ಮದುವೆ? ಗುಣ vs ಸೌಂದರ್ಯ ಯಾವುದು ಗೆಲ್ಲತ್ತೆ?

Brahmagantu Twist: ಕೊನೆಗೂ ದಿಶಾ ಜೊತೆ ಚಿರು ಮದುವೆ? ಗುಣ vs ಸೌಂದರ್ಯ ಯಾವುದು ಗೆಲ್ಲತ್ತೆ?
ಬ್ರಹ್ಮಗಂಟು ಸೀರಿಯಲ್ ರೋಚಕ ಘಟ್ಟ ತಲುಪಿದ್ದು, ಸತ್ತಿದ್ದಾಳೆ ಎಂದುಕೊಂಡ ದೀಪಾ, ದಿಶಾಳಾಗಿ ಮರಳಿದ್ದಾಳೆ. ಸೌಂದರ್ಯಳ ವಿರುದ್ಧ ಸೇಡು ತೀರಿಸಿಕೊಳ್ಳಲು ಚಿರುವನ್ನು ಮದುವೆಯಾಗಲು ಮುಂದಾಗಿದ್ದು, ಈ ಮದುವೆ ನಡೆಯುವುದೇ ಎಂಬ ಕುತೂಹಲ ಮೂಡಿದೆ.
ಬ್ರಹ್ಮಗಂಟು ಸೀರಿಯಲ್​ ಇದೀಗ ರೋಚಕ ಘಟ್ಟ ತಲುಪಿದೆ. ದೀಪಾ ಸಾವನ್ನಪ್ಪಿರುವುದಾಗಿ ಎಲ್ಲರೂ ಅಂದುಕೊಂಡಿದ್ದಾರೆ. ಈ ವಿಷಯ ದೀಪಾಳ ಅಪ್ಪ, ಅರ್ಚನಾ ಮತ್ತು ಮಾವನಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ, ಸೌಂದರ್ಯಳ ವಿರುದ್ಧ ಸೇಡು ತೀರಿಸಿಕೊಳ್ಳಲು ದೀಪಾಳಿಗೆ ತನ್ನ ಅಸಲಿಯತ್ತು ಮುಚ್ಚಿಟ್ಟುಕೊಳ್ಳುವ ಅವಶ್ಯಕತೆ ಇದೆ. ಅದಕ್ಕೆ ಅವಳ ಅಪ್ಪ ಕೂಡ ಸಾಥ್​ ನೀಡಿದ್ದಾರೆ.

ಆದರೆ, ಇದೀಗ ಕುತೂಹಲದ ಘಟ್ಟದಲ್ಲಿ ದಿಶಾ ಮತ್ತು ಚಿರು ಮದುವೆ ನಡೆಯುತ್ತಿರುವ ಪ್ರೊಮೋ ಬಿಡುಗಡೆ ಮಾಡಲಾಗಿದೆ. ದೀಪಾನೇ ದಿಶಾ ಎನ್ನುವ ಸತ್ಯ ಅಪ್ಪನಿಗೆ ತಿಳಿದಿರುವ ಕಾರಣ ಹಾಗೂ ಮಾವನಿಗೂ ಗೊತ್ತಿರುವುದರಿಂದ ಅವರು ಮದುವೆ ಒಪ್ಪಿದ್ದಾರೆ.

ಆದರೆ, ಸೌಂದರ್ಯ ಮಾತ್ರ ತಾನು ಗೆದ್ದು ಬೀಗಿದೆ ಎಂದು ಖುಷಿ ಪಡುತ್ತಿದ್ದಾರೆ. ದೀಪಾಳ ಅಮ್ಮ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುವವರೆಗೂ ಈ ಮದುವೆ ಮಾಡಿಸುವುದಿಲ್ಲ ಎಂದಿದ್ದಾಳೆ.

ಒಟ್ಟಿನಲ್ಲಿ ದಿಶಾ ಮತ್ತು ಚಿರು ಮದುವೆಯಾಗುತ್ತದಾ? ಚಿರು ಇದಕ್ಕೆ ಒಪ್ಪಿದ್ದು ಅಪ್ಪನ ಒತ್ತಾಯದ ಮೇರೆಗಾ?ಒಂದು ವೇಳೆ ಮದುವೆಯಾದ ಮೇಲೆ ದಿಶಾ ಮತ್ತು ದೀಪಾ ಒಬ್ಬಳೇ ಎನ್ನುವುದು ಅವನಿಗೆ ತಿಳಿದರೆ ಅವನು ಸುಮ್ಮನೆ ಇರ್ತಾನಾ ಎನ್ನುವುದಕ್ಕೆ ಉತ್ತರ ಸಿಗಲು ಇನ್ನೊಂದೆರಡು ವರ್ಷ ಸೀರಿಯಲ್​ ನೋಡಬೇಕು!

ಒಂದು ವೇಳೆ ಈ ಮದುವೆ ನಡೆದರೆ ಗುಣ ಮತ್ತು ಸೌಂದರ್ಯ ಎರಡರ ನಡುವೆ ಗುಣವೇ ಮೇಲು ಎಂದು ತೋರಿಸಲು ಹೋಗಿರುವ ಸೀರಿಯಲ್​ ಕಥೆ ಬುಡಮೇಲಾಗುತ್ತದೆ. ಅಷ್ಟಕ್ಕೂ ಚಿರು ಅಂತೂ ದಿಶಾಳನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಅತ್ತಿಗೆಯ ಬಂಡವಾಳ ಬಯಲು ಮಾಡಲು ದಿಶಾ ಆಗಿ ಬರಬೇಕಿದೆ ದೀಪಾ.

Source link

Leave a Reply

Your email address will not be published. Required fields are marked *