
‘ರಾವಣ’ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು:
ಪ್ರಿಯಾಮಣಿ ಅವರ ಹಿಂದಿ ಚಿತ್ರರಂಗದ ಪಯಣ ಆರಂಭವಾಗಿದ್ದು ಮಣಿರತ್ನಂ ನಿರ್ದೇಶನದ ‘ರಾವಣ’ ಚಿತ್ರದ ಮೂಲಕ. ಈ ಬಗ್ಗೆ ಮಾತನಾಡಿರುವ ಅವರು, “ನಾನು ಹಿಂದಿ ಸಿನಿಮಾಗಳನ್ನು ನೋಡುತ್ತಲೇ ಬೆಳೆದವಳು. ಹಾಗಾಗಿ ‘ರಾವಣ’ ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸುವ ಅವಕಾಶ ಸಿಕ್ಕಾಗ ನಾನು ತುಂಬಾ ರೋಮಾಂಚನಗೊಂಡಿದ್ದೆ.
ಅಭಿಷೇಕ್ ಬಚ್ಚನ್, ರವಿ ಕಿಶನ್ ಮತ್ತು ಪಂಕಜ್ ತ್ರಿಪಾಠಿ ಅವರಂತಹ ಅದ್ಭುತ ಕಲಾವಿದರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆ ಚಿತ್ರದ ನಂತರ ಬಾಲಿವುಡ್‌ನಲ್ಲಿ ನನಗೆ ಸಾಕಷ್ಟು ಅವಕಾಶಗಳು ಲಭಿಸಬಹುದು ಎಂದು ನಾನು ನಿರೀಕ್ಷಿಸಿದ್ದೆ,” ಎಂದು ಹೇಳಿದ್ದಾರೆ.