ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25ರಷ್ಟು ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?


ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25% ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?

ಜನವರಿ, ಮಾರ್ಚ್ 20: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ತಮ್ಮ ಪ್ರೀಮಿಯಂ ಪೆಟ್ರೋಲ್ ದರಗಳನ್ನು ಏರಿಸಿರುವ ಬೆನ್ನಲ್ಲೇ ಇಂಡಿಯನ್ ಆಯಿಲ್ ಸಂಸ್ಥೆಯು ಕೈಗಾರಿಕಾ ಡೀಸೆಲ್ ಬೆಲೆಯನ್ನು (ಕೈಗಾರಿಕಾ ಡೀಸೆಲ್ ಬೆಲೆಗಳು) ಹೆಚ್ಚಿಸಿದೆ. ಒಂದು ಲೀಟರ್‌ಗೆ 87.57 ರೂ ಇದ್ದ ಡೀಸಲ್ ಬೆಲೆ 109.59 ರೂಗೆ ಏರಿಸಲಾಗಿದೆ. ಬೆಲೆಯಲ್ಲಿ ಬರೋಬ್ಬರಿ ಶೇ. 25ರಷ್ಟು ಹೆಚ್ಚಾಗಿದೆ.

ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಮತ್ತು ಅನಿಲಗಳ ಹಡಗುಗಳು ಸಾಗಣೆಗೆ ನಿರ್ಬಂಧಿತ ಜಾಗತಿಕವಾಗಿ ಇವುಗಳ ಸರಬರಾಜು ಕುಂಠಿತಗೊಂಡಿದೆ. ಭಾರತಕ್ಕೂ ಇವುಗಳ ಕೊರತೆ ಕಾಡುತ್ತಿದೆ. ಜನಸಾಮಾನ್ಯರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯಾಗದಂತೆ ಎಚ್ಚರ ವಹಿಸುತ್ತಿದೆ.

ಇದನ್ನೂ ಓದಿ: ಜೊಮಾಟೊದಲ್ಲಿ ಫುಡ್ ಆರ್ಡರ್ ಹೆಚ್ಚು ದುಬಾರಿ; ಪ್ಲಾಟ್ಫಾರ್ಮ್ ಶುಲ್ಕ ಶೇ 19ರಷ್ಟು ಏರಿಕೆ

ಇರಾನ್ ಯುದ್ಧದ ಅವಧಿ ನಿರೀಕ್ಷೆಮೀರಿ ಹಿಗ್ಗುತ್ತಿರುವುದರಿಂದ ತೈಲ ಪೂರೈಕೆ ಈಗ ಮತ್ತಷ್ಟು ಕಠಿಣವಾಗಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುವುದು ಅನಿವಾರ್ಯ. ಹೀಗಾಗಿ, ಪ್ರೀಮಿಯಂ ಪೆಟ್ರೋಲ್, ಆದ್ಯಮಿಕ ಡೀಸಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮಾಮೂಲಿಯ ಪೆಟ್ರೋಲ್, ಡೀಸಲ್ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಈಗ ಕೈಗಾರಿಕಾ ಡೀಸಲ್ ಮತ್ತು ವಿವಿಧ ಕೈಗಾರಿಕೆಗಳು ಬಳಸಲ್ಪಡುತ್ತವೆ. ವಿದ್ಯುತ್ ಉತ್ಪಾದನೆ, ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಕ್ಷೇತ್ರದ ಕಂಪನಿಗಳು ಈ ಡೀಸಲ್ ಬಳಸುತ್ತವೆ. ಈಗ ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡುವುದರಿಂದ ಕೈಗಾರಿಕಾ ಉತ್ಪಾದನಾ ವೆಚ್ಚ ಮತ್ತು ಸಾರಿಗೆ ಹೆಚ್ಚಲಿದೆ.

ಇದನ್ನೂ ಓದಿ: ಪ್ರೀಮಿಯಂ ಪೆಟ್ರೋಲ್ ಬೆಲೆ 2 ರೂ. ಮಾಮೂಲಿ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಪ್ರೀಮಿಯಂ ಪೆಟ್ರೋಲ್ ಲೀಟರ್‌ಗೆ 2.05 ರೂನಿಂದ 2.30 ರೂವರೆಗೆ ಏರಿಕೆಯಾಗಿದೆ. ಆದರೆ, ಮಾಮೂಲಿಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿ ಹೆಚ್ಚಿಲ್ಲ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *