ಐಶ್ವರ್ಯ ರೈಗೆ ‘ಕ್ಷಮಿಸಿ’ ಎಂದ ಸ್ನೇಹಾ ಉಳ್ಳಾಲ್‌, ಐಶ್‌ ಪ್ರತಿಕ್ರಿಯೆ ಹೇಗಿತ್ತು? | When Sneha Ullal Asked Sorry To Aishwarya Rai Bachchan Bni

ಐಶ್ವರ್ಯ ರೈಗೆ ‘ಕ್ಷಮಿಸಿ’ ಎಂದ ಸ್ನೇಹಾ ಉಳ್ಳಾಲ್‌, ಐಶ್‌ ಪ್ರತಿಕ್ರಿಯೆ ಹೇಗಿತ್ತು? | When Sneha Ullal Asked Sorry To Aishwarya Rai Bachchan Bni



ಐಶ್ವರ್ಯ ರೈಗೆ ‘ಕ್ಷಮಿಸಿ’ ಎಂದ ಸ್ನೇಹಾ ಉಳ್ಳಾಲ್‌, ಐಶ್‌ ಪ್ರತಿಕ್ರಿಯೆ ಹೇಗಿತ್ತು? | When Sneha Ullal Asked Sorry To Aishwarya Rai Bachchan Bni

ನಟಿ ಸ್ನೇಹಾ ಉಳ್ಳಾಲ್‌, ಐಶ್ವರ್ಯ ರೈ ಅವರಂತೆಯೇ ಕಾಣುತ್ತಾರೆ ಎಂಬ ಕಾರಣಕ್ಕೆ ಪ್ರಸಿದ್ಧರಾದರು. ತಮ್ಮ ಮೊದಲ ಚಿತ್ರದ ನಂತರ ಐಶ್ವರ್ಯ ರೈ ಅವರನ್ನು ಭೇಟಿಯಾದಾಗ, ಸ್ನೇಹಾ ಸಂಕೋಚದಿಂದ ‘ಕ್ಷಮಿಸಿ’ ಎಂದಿದ್ದರು. ಅದಕ್ಕೆ ಐಶ್ವರ್ಯ ರೈ ಪ್ರತಿಕ್ರಿಯಿಸಿದ್ದು ಹೇಗೆ? ಇಲ್ಲಿದೆ ನೋಡಿ.

2005ರಲ್ಲಿ ಬಿಡುಗಡೆಯಾದ ʼಲಕ್ಕಿ:ನೋ ಟೈಮ್‌ ಫಾರ್‌ ಲವ್‌ʼ ಚಿತ್ರದಲ್ಲಿ ನಟಿಸಿದ್ದ ನಟಿ ಸ್ನೇಹಾ ಉಳ್ಳಾಲ್‌ (Sneha Ullal) ನಿಮಗೆ ನೆನಪಿದೆಯಾ? ಈ ಸಿನಿಮಾದ ಮೂಲಕ ಅವರು ಬಾಲಿವುಡ್‌ಗೆ ದೊಡ್ಡ ಪ್ರವೇಶ ಮಾಡಿದರು. ಈ ಚಿತ್ರದಲ್ಲಿ ಅವರು ಸಲ್ಮಾನ್‌ ಖಾನ್‌ ಅವರ ಜೊತೆಗೆ ನಟಿಸಿದ್ದರು. ಆದರೆ ಸ್ನೇಹಾ ಉಳ್ಳಾಲ್ ಹೆಚ್ಚು ಸುದ್ದಿಯಾಗಿದ್ದದ್ದು ಅವರ ನಟನೆಯ ಕಾರಣಕ್ಕೆ ಅಲ್ಲ. ಅವರು ಐಶ್ವರ್ಯ ರೈ ಬಚ್ಚನ್‌ ಅವರಂತೆ ಕಾಣುತ್ತಾರೆ ಎಂಬ ಹೋಲಿಕೆಯ ಕಾರಣದಿಂದ. ಅದೊಂದೇ ಕಾರಣಕ್ಕೆ ಆಕೆ ರಾತ್ರೋರಾತ್ರಿ ಪ್ರಸಿದ್ಧರಾದರು.

ಈಗ, ತಮ್ಮ ಮೊದಲ ಚಿತ್ರದ ಬಿಡುಗಡೆಯಾದ ಸುಮಾರು 21 ವರ್ಷಗಳ ನಂತರ, ಸ್ನೇಹಾ ಒಂದು ಆಸಕ್ತಿದಾಯಕ ಘಟನೆ ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ, ಬಾಲಿವುಡ್‌ಗೆ ಬಂದ ಕೆಲ ಸಮಯದ ನಂತರ ಅವರು ಒಮ್ಮೆ ಐಶ್ವರ್ಯ ರೈ ಅವರನ್ನು ಭೇಟಿಯಾಗಿದ್ದರಂತೆ.

ಸೌಜನ್ಯ ಮೆರೆದ ಐಶ್ವರ್ಯ ರೈ

ಆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಇಬ್ಬರ ನಡುವಿನ ಹೋಲಿಕೆಯನ್ನು ಮತ್ತೆ ಮತ್ತೆ ಸುದ್ದಿ ಮಾಡಲಾಗುತ್ತಿತ್ತು. ಅದನ್ನು ಐಶ್ವರ್ಯ ಗಮನಿಸಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಸ್ನೇಹಾ ಅವರಿಗೇ ಇದರಿಂದ ಸಂಕೋಚವಾಗಿತ್ತು. ಐಶ್ವರ್ಯ ರೈ ಮುಖಾಮುಖಿ ಆದಾಗ ಸ್ನೇಹಾ, ಮೆತ್ತಗೆ “ಕ್ಷಮಿಸಿ, ನನ್ನನ್ನು ದ್ವೇಷಿಸಬೇಡಿ” ಎಂದು ಹೇಳಿದರು. ಅದಕ್ಕೆ ಐಶ್ವರ್ಯ ರೈ ತುಂಬಾ ಸೌಜನ್ಯಯುತವಾಗಿ ಪ್ರತಿಕ್ರಿಯಿಸಿ, “ಬಾಲಿವುಡ್ ಫ್ಯಾಮಿಲಿಗೆ ಸ್ವಾಗತ” ಎಂದು ಹೇಳಿದರು.

ಸ್ನೇಹಾ ಇನ್ನೊಂದು ವಿಷಯವನ್ನೂ ನೆನಪಿಸಿಕೊಂಡಿದ್ದಾರೆ. ಅವರಿಗೆ ಈ ಸಿನಿಮಾದ ಅವಕಾಶ ಹೇಗೆ ಸಿಕ್ಕಿತು ಎಂಬುದನ್ನು ಅವರು ವಿವರಿಸಿದ್ದಾರೆ. ಅವರು ಕಾಲೇಜಿಗೆ ಹೋಗಲು ಆರಂಭಿಸಿದ್ದ ಸಮಯದಲ್ಲಿ, ಅರ್ಪಿತಾ ಖಾನ್‌ ಅವರ ಸ್ನೇಹಿತರು ಸ್ನೇಹಾಳನ್ನು ಗಮನಿಸಿದರು. ಅವರ ಮೂಲಕವೇ ಸ್ನೇಹಾಳಿಗೆ ಆಡಿಷನ್ ಅವಕಾಶ ಸಿಕ್ಕಿತು. ನಂತರ ಅವರು ಚಿತ್ರದಲ್ಲಿ ಪಾತ್ರ ಪಡೆದರು.

ಸ್ನೇಹಾ ಹೇಳುವಂತೆ, ಅವರಿಗೆ ಮೊದಲಿನಿಂದಲೇ ನಟಿಯಾಗಬೇಕು ಎಂಬ ಆಸೆ ಇರಲಿಲ್ಲ. “ನಾನು ಆಗ ಕಾಲೇಜಿನಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿ ಐಶ್ವರ್ಯ ರೈ ಮಿಸ್ ವರ್ಲ್ಡ್ ಆಗಿದ್ದರು ಮತ್ತು ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದರು. ನನ್ನ ಸುತ್ತಮುತ್ತಲಿನವರು ನನಗೆ ‘ನೀವು ಐಶ್ವರ್ಯ ರೈ ತರ ಕಾಣುತ್ತೀರಾ’ ಎಂದು ಹೇಳುತ್ತಿದ್ದರು. ಅದರಿಂದ ನಾನು ನನ್ನ ಸುತ್ತಮುತ್ತಲಿನ ಪರಿಸರದಲ್ಲಿ ತುಸು ಖ್ಯಾತಿ ಪಡೆದೆ” ಎಂದು ಅವರು ಹೇಳುತ್ತಾರೆ.

ಸಲ್ಮಾನ್‌ ಖಾನ್‌ ಅವರು ಸ್ನೇಹಾಳನ್ನು ಆಯ್ಕೆ ಮಾಡಿದ್ದು, ಅವರು ಐಶ್ವರ್ಯ ರೈ ತರ ಕಾಣುವುದರಿಂದ ಎಂದು ಕೆಲವು ಮೀಡಿಯಾಗಳು ವರದಿ ಮಾಡಿದ್ದವು. ಆದರೆ ಸ್ನೇಹಾ ಅದನ್ನು ತಳ್ಳಿ ಹಾಕುತ್ತಾರೆ. “ಅದು ಪಿಆರ್ ಮಾತುಗಳಷ್ಟೇ. ನಾನು ಅಷ್ಟು ಚಿಕ್ಕವಳಾಗಿದ್ದೆ. ಅದರಿಂದ ನನಗೆ ಯಾವುದೇ ಸಹಾಯವೂ ಆಗಲಿಲ್ಲ, ತೊಂದರೆಯೂ ಆಗಲಿಲ್ಲ” ಎನ್ನುತ್ತಾರೆ.

ಸ್ನೇಹಾ ತಮ್ಮ ಮೊದಲ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜೊತೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ. “ಅವರು ನನಗೆ ಒಮ್ಮೆಯೂ ಕಿರಿಕಿರಿ ಮಾಡಲಿಲ್ಲ. ಅವರು ತುಂಬಾ ಸಹನೆಯಿಂದ ನಡೆದುಕೊಂಡರು ಮತ್ತು ನನಗೆ ಸಹಾಯ ಮಾಡಿದರು,” ಎಂದು ಹೇಳಿದ್ದಾರೆ. ಇದೀಗ ಸ್ನೇಹಾ ಉಳ್ಳಾಲ್‌ “ನೀಲಕಾಂತಾ” ಎಂಬ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ನೇಹ ಉಳ್ಳಾಲ್ ಓಮನ್‌ನ ಮಸ್ಕತ್‌ನಲ್ಲಿ ಮಂಗಳೂರಿನ ತುಳು ದೇವಾಡಿಗ ತಂದೆ ಮತ್ತು ಸಿಂಧಿ ತಾಯಿಯಲ್ಲಿ ಹುಟ್ಟಿ ಬೆಳೆದವರು. ಓಮನ್‌ನ ಸಲಾಲಾದ ಇಂಡಿಯನ್ ಸ್ಕೂಲ್ ಮಸ್ಕತ್ ಮತ್ತು ಇಂಡಿಯನ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿ ನಂತರ ತಾಯಿಯೊಂದಿಗೆ ಮುಂಬೈಗೆ ಬಂದು ಡುರೆಲೋ ಕಾನ್ವೆಂಟ್ ಹೈಸ್ಕೂಲ್‌ಗೆ ಹೋಗಿ ವರ್ತಕ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. 17ನೇ ವಯಸ್ಸಿನಲ್ಲಿ ಹಿಂದಿ ಚಲನಚಿತ್ರ ಲಕ್ಕಿಯಲ್ಲಿ ಸಲ್ಮಾನ್‌ ಜೊತೆ ನಟಿಸಿದರು. ನಂತರ ಸೊಹೈಲ್ ಖಾನ್ ಅವರೊಂದಿಗೆ ಆರ್ಯನ್ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಕೆಲವು ತೆಲುಗು ಚಿತ್ರಗಳು. ಯಾವುದೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.



Source link

Leave a Reply

Your email address will not be published. Required fields are marked *