
20, ಮಾರ್ಚ್ 20: ಬಸ್ಸಿನಲ್ಲಿ, ರೈಲಿನಲ್ಲಿ ಹೋಗುವಾಗ ಸ್ಟಾಪ್ ಬಂದಾಗ ಪಕ್ಕದ ಅಂಗಡಿಯಲ್ಲಿ ಅಥವಾ ಬುಟ್ಟಿ ಹೊತ್ತು ಬರುವ ವ್ಯಾಪಾರಿಗಳಲ್ಲಿ ಏನಾದರೂ ಕೊಂಡು ತಿನ್ನುವ ಅಭ್ಯಾಸ ಕೆಲವರಿಗೆ ಇರುತ್ತದೆ. ಹಸಿವು ನೀಗಿಸಿಕೊಳ್ಳಲು ತಿಂಡಿಗಳನ್ನು ತಿಂದರೆ ಇನ್ನು ಕೆಲವರು ಟೈಂಪಾಸ್ ಗಾಗಿ ತಿನ್ನುತ್ತಾರೆ. ಅದೇರೀತಿ ಬಸ್ ನೊಳಗೆ ಕುಳಿತಿದ್ದ ಯುವಕನೊಬ್ಬನಿಗೆ ಹಸಿವಾಗಿತ್ತು. ಚಲಿಸುವ ಬಸ್ಸಿನಲ್ಲಿ ಕುಳಿತಿದ್ದ ಆ ಯುವಕ ತಿಂಡಿಗಾಗಿ ಪಕ್ಕದಲ್ಲೇ ನಿಂತಿದ್ದ ಮಾರಾಟಗಾರನಿಗೆ ಕಿಟಕಿಯಿಂದ ಹಣ ಕೊಟ್ಟನು. ಆದರೆ ಮಾರಾಟಗಾರ ಅವನಿಗೆ ಏನನ್ನೂ ಕೊಡಲಿಲ್ಲ. ದುಡ್ಡನ್ನೂ ತಾನೇ ಇಟ್ಟುಕೊಂಡು, ತಿಂಡಿಯನ್ನೂ ಕೊಡದೆ ಆತ ಯಾಮಾರಿಸಿದ. ಬಸ್ ಚಲಿಸುವಾಗ ಆ ಹುಡುಗ ಕೂಗುತ್ತಾ ಇದ್ದ. ಆದರೆ, ವ್ಯಾಪಾರಿ ಮಾತ್ರ ಮೋಸ ಮಾಡಿದ್ದೇ ಸಾಧನೆಯೆಂದು ನಗುತ್ತಿದ್ದ. ಇದೆಲ್ಲವನ್ನೂ ಪಕ್ಕದಲ್ಲಿ ನಿಂತಿದ್ದವನು ವಿಡಿಯೋ ಮಾಡುತ್ತಿದ್ದನೇ ವಿನಃ ಆ ಹುಡುಗನಿಗಾದ ಅನ್ಯಾಯವನ್ನು ತಡೆಯಲಿಲ್ಲ ಎಂಬುದು ಇನ್ನೊಂದು ವಿಪರ್ಯಾಸ!
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ