ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 21ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 21ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3 ರ ಮಾರ್ಚ್ 21 ರ ದಿನಭವಿಷ್ಯ

ಮನೆಯಲ್ಲಿರುವ ತುಳಸಿ ಅಥವಾ ಇತರ ಹಸಿರು ಗಿಡಗಳಿಗೆ ನೀರು ಹಾಕುವುದರಿಂದ ನಿಮ್ಮ ಮಾತಿನ ಬಲ ಹೆಚ್ಚಿ ಸಂವಹನ ಉತ್ತಮವಾಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸೋಶಿಯಲ್ ಕಾಂಟ್ಯಾಕ್ಟ್ ಬಹಳ ಮುಖ್ಯ ಎಂದು ಬಲವಾಗಿ ಅನಿಸಲಿದೆ. ನಿಮಗೆ ಬಹಳ ಇಷ್ಟವಾಗುವಂಥ ವ್ಯಕ್ತಿಯ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಕಿರು ಪ್ರವಾಸಕ್ಕಾದರೂ ತೆರಳುವಂಥ ಯೋಗ ಇದೆ. ಇಲ್ಲದಿದ್ದಲ್ಲಿ ಹೋಟೆಲ್, ಇಂತಹ ಕಡೆಗಳಲ್ಲಿಯಾದರೂ ಒಟ್ಟಿಗೆ ಸಮಯ ಕಳೆಯುವ ಯೋಗ ಇದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಪ್ರೀತಿ- ಪ್ರೇಮದಲ್ಲಿ ಓದು ಮೂಡಿ, ಸಣ್ಣ- ಪುಟ್ಟ ಮನಸ್ತಾಪ- ಅಭಿಪ್ರಾಯ ಭೇದಗಳು ಏನಾದರೂ ಕಾಣಿಸಿಕೊಂಡಿದ್ದರೆ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ನೀವಾಗಿಯೇ ತೆಗೆದುಕೊಂಡಂತಹ ಜವಾಬ್ದಾರಿಗಳನ್ನು ತುಂಬ ಚೆನ್ನಾಗಿ ನಿರ್ವಹಣೆ ಮಾಡಿದ್ದೀರಿ. ನಿಮ್ಮೆದುರಿಗೆ ನಿಂತು ವ್ಯವಹಾರದ ವಿಚಾರಕ್ಕೆ ದಾರಿ ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗದಷ್ಟು ಕಟ್ಟುನಿಟ್ಟಾಗಿ ನೀವು ನಡೆದುಕೊಂಡಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸಂಕೋಚ ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದೆನಿಸಲಿದೆ. ನಿಮ್ಮ ಎಲ್ಲ ವಿಚಾರಗಳಿಗೆ, ಸಂಗತಿಗಳಿಗೆ ಮೂಗು ತೂರಿಕೊಂಡು ಬರುತ್ತಿದ್ದ ಅಥವಾ ಬರುತ್ತಿರುವ ವ್ಯಕ್ತಿಗಳಿಗೆ ಮುಲಾಜಿಲ್ಲದೆ ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಯಾವುದೋ ಸಂಕೋಚದಿಂದ ಹೇಳದೆ ಉಳಿದ ಸಂಗತಿಗಳನ್ನು ಏಕಾಏಕಿ ಹೇಳಿ ಮುಗಿಸಿದೆ. ಕಫ- ಶೀತ ಮೊದಲಾದ ಸಮಸ್ಯೆಗಳು ಕಾಡಬಹುದು, ಜಾಗ್ರತೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *