ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 21ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 21ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9 ರ ಮಾರ್ಚ್ 21 ರ ದಿನಭವಿಷ್ಯ

ಜೇಬಿನಲ್ಲಿ ಯಾವಾಗಲೂ ಒಂದು ಬೆಳ್ಳಿಯ ನಾಣ್ಯ ಅಥವಾ ಹಸಿರು ಬಣ್ಣದ ಕರವಸ್ತ್ರ ಇಟ್ಟುಕೊಳ್ಳಿ. ಇದು ಆರ್ಥಿಕ ಸ್ಥಿರತೆಗೆ ಸಹಕಾರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಲ್ಲಿ ಯಾರ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನಗಳನ್ನು ಮಾಡುವಿರಿ ಅಂತಹವರಿಗೆ ಇತರರ ಸಹಾಯ ಅಥವಾ ಶಿಫಾರಸಿನ ಮೂಲಕ ಸುಲಭವಾಗಿ ಕೆಲಸ ಮಾಡಬಹುದು. ಇನ್ನು ಯಾರ ಮನೆಯಲ್ಲಿ ಕೆಲವು ಸಿವಿಲ್ ಕೆಲಸಗಳನ್ನು ಮಾಡಬೇಕು ಅಂದುಕೊಳ್ಳುತ್ತೀರೋ ಅಂಥವರಿಗೆ ಉತ್ತಮ ಕೆಲಸಗಾರರ ಪರಿಚಯವಾಗಿ, ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ಮೊತ್ತದಲ್ಲಿ ಕೆಲಸ ಮುಗಿಯುವ ಮಾರ್ಗ ಗೋಚರವಾಗುತ್ತದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಈ ಹಿಂದಿನ ಕೆಲವು ಅನುಭವಗಳಿಂದ ಹಲ್ಲು ಕಚ್ಚಿಕೊಂಡು ಇರುತ್ತವೆ. ನಿಮಗೆ ಕುತ್ತಿಗೆ ತನಕ ಬಂದ ಕೋಪವನ್ನು ತಡೆದುಕೊಂಡು, ಕೆಲವು ಕೆಲಸಗಳನ್ನು ಮಾಡಲೇಬೇಕು. ಒಂದೋ ವಿಷಯವನ್ನು ಅರ್ಥ ಮಾಡಿಕೊಳ್ಳದ ಅಥವಾ ಸನ್ನಿವೇಶಕ್ಕೆ ಸರಿಯಾಗಿ ಪ್ರತಿಕ್ರಿಯಿಸಿದ ಕೆಲವರ ಜೊತೆಗೆ ವ್ಯವಹರಿಸಲೇ ಬೇಕಾದ ಒತ್ತಡಕ್ಕೆ ನೀವು ಸಿಲುಕಿಕೊಳ್ಳುತ್ತೀರಿ. ನಿಮ್ಮ ಮೇಲೆ ವಿಪರೀತ ಅವಲಂಬಿತರಾದ ಕೆಲವು ಸ್ನೇಹಿತರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಶ್ರಮವಾಗಿ ಪರಿಣಮಿಸುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಯಾರ ಸ್ವಂತ ವೃತ್ತಿ, ವ್ಯವಹಾರ ಅಥವಾ ವ್ಯಾಪಾರವನ್ನು ಮಾಡುತ್ತಿರುವಿರೋ ಅಂಥವರಿಗೆ ದೊಡ್ಡ ದೊಡ್ಡ ಅವಕಾಶಗಳು ಕಾಣಿಸುತ್ತವೆ. ಅದೇ ವೇಳೆ ಆ ಕಡೆಗೆ ಗಮನವಿಟ್ಟು ಕಾರ್ಯ ನಿರ್ವಹಿಸುವುದು ಸವಾಲಾಗಿ ಪರಿಣಮಿಸುತ್ತದೆ. ಈ ದಿನ ನೀವು ನೋ ಪಾರ್ಕಿಂಗ್, ಒನ್ ವೇ ಅಥವಾ ಸಿಗ್ನಲ್ ಜಂಪ್ ಇಂತಹ ಕಾರಣಗಳಿಗಾಗಿ ದಂಡ ಕಟ್ಟಲು, ಎಚ್ಚರಿಕೆಯಿಂದ ಇರಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *