Headlines

Mallikarjun Mutya: ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ತನಿಖೆಗೆ ಹೈಕೋರ್ಟ್ ತಡೆ, ನಿಟ್ಟುಸಿರು ಬಿಟ್ಟ ಭಕ್ತರು | Karnataka High Court Stays Pocso Investigation Against Mallikarjun Mutya Rav

ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ಪೀಠ ತಡೆ ನೀಡಿದೆ. ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮುತ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ತಡೆಯಾಜ್ಞೆಯಿಂದ ಮುತ್ಯಾ ಹಾಗೂ ಅವರ ಭಕ್ತರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ಯಾದಗಿರಿ (ಮಾ.21): ಬಾಲಕಿ ಜೊತೆಗೆ ಅನುಚಿತ ವರ್ತನೆ ಆರೋಪದಡಿ ಯಾದಗಿರಿ ಜಿಲ್ಲೆಯ ಮಹಲ್‌ ರೋಜಾದ ಚಾಂಗ್‌ದೇವ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣದ ತನಿಖೆಗೆ ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠ ತಡೆ ನೀಡಿ ಆದೇಶ ಹೊರಡಿಸಿದೆ. 

ಪ್ರಕರಣ ದಾಖಲಾದ ಬಳಿಕ ವಿಚಾರಣೆಗೆ ತಡೆ ನೀಡುವಂತೆ ಮಲ್ಲಿಕಾರ್ಜುನ ಮುತ್ಯಾ‌ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ಹೈಕೋರ್ಟ್ ತನಿಖೆಗೆ ತಡೆ ನೀಡಿದ್ದು, ತಾತ್ಕಾಲಿಕ ರಿಲೀಫ್‌ನಿಂದ ಮುತ್ಯಾ ಹಾಗೂ ಭಕ್ತರ ವಲಯದಲ್ಲಿ ನಿಟ್ಟುಸಿರು ಮೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಬಾಲಕಿ ಜೊತೆಗಿನ ವರ್ತನೆಯ ದೃಶ್ಯಗಳು ವೈರಲ್‌ ಆದ ಬಳಿಕ ಶಹಾಪುರ ಸಿಡಿಪಿಓ ಫೆ.25ರಂದು ನೀಡಿದ ದೂರಿನ ಮೇರೆಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು.

ಪ್ರಕರಣದ ರದ್ದು ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಮುತ್ಯಾ ಪರ ವಕೀಲರು, ನಂತರ ವಾಪಸ್ ಪಡೆದು, ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಾ.9ರಂದು ಬೇಲ್‌ ಅರ್ಜಿ ತಿರಸ್ಕೃತಗೊಳಿಸಿದ ಕೋರ್ಟ್‌ ತನಿಖೆಗೆ ಎಸ್ಪಿಗೆ ಸೂಚಿಸಿತ್ತು. ಅದರನ್ವಯ, ಶಹಾಪುರ ಠಾಣೆ ಪೊಲೀಸರು ತನಿಖೆಗೆ ಮುಂದಾಗಿದ್ದರು.

Source link

Leave a Reply

Your email address will not be published. Required fields are marked *