ಗುರೂಜಿ ರಾಸಲೀಲೆ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ, 35ರ ಮಹಿಳೆಯನ್ನು3 ವರ್ಷದಿಂದ ಬಳಸಿಕೊಂಡ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಗುರೂಜಿ ಪ್ರಕರಣ ಇದೀಗ ಕೆಲ ಟ್ವಿಸ್ಟ್ ಪಡೆದುಕೊಂಡಿದೆ.

ಜ್ಯೋತಿಷಿ, ಸ್ವಯಂಘೋಷಿತ ದೇವಮಾನವ ಎಂದೇ ಗುರುತಿಸಿಕೊಂಡಿದ್ದ ಅಶೋಕ್ ಖಾರಟ್ ರಾಸಲೀಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 35ರ ಮಹಿಳೆ ಮೇಲೆ ಕಳೆದ 3 ವರ್ಷದಿಂದ ಒತ್ತಾಯಪೂರ್ವ ಲೈಂಗಿಕ ಕ್ರಿಯೆ ನಡೆಸಿದ ಕ್ಯಾಪ್ಟನ್ ಅಶೋಕ್ ಖಾರಟ್‌ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ವಶಪಡಿಸಿಕೊಂಡ ಪೆನ್‌ಡ್ರೈವ್‌ನಲ್ಲಿ ಈ ಖತರ್ನಾಕ್ ಗುರೂಜಿ 58 ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿರುವ ವಿಡಿಯೋಗಳು ಲಭ್ಯವಾಗಿದೆ. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಧಾರ್ಮಿಕತೆ, ಆಧ್ಯಾತ್ಮಿಕತೆ ಹೆಸರಿನಲ್ಲಿ ಮಹಿಳೆಯರನ್ನು ಬಳಸಿಕೊಳ್ಳುತ್ತಿದ್ದ ಅಶೋಕ್ ಖಾರಟ್ ಅರೆಸ್ಟ್ ಬೆನ್ನಲ್ಲೇ ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಾನ್ಕರ್ ಇದೇ ಪ್ರಕರಣ ಸಂಬಂಧ ರಾಜೀನಾಮ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ರೂಪಾಲಿ ಚಕಾನ್ಕಕರ್ ಹಾಗೂ ಅರೆಸ್ಟ್ ಆಗಿರುವ ಅಶೋಕ್ ಖಾರಟ್ ನಡುವಿನ ಸಂಪರ್ಕ. ಅಶೋಕ್ ಖಾರಟ್ ಅರೆಸ್ಟ್ ಆದ ಬೆನ್ನಲ್ಲೇ ರೂಪಾಲಿ ಚಕಾನ್ಕರ್ ಜೊತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳ ವಿಡಿಯೋ ಹಾಗೂ ಫೋಟೋಗಳು ಬಹಿರಂಗವಾಗಿತ್ತು.

ಈ ಪೈಕಿ ಅಶೋಕ್ ಖಾರಟ್‌ಗೆ ಕೊಡೆ ಹಿಡಿದು ಸತ್ಕರಿಸುವ ವಿಡಿಯೋ, ಅಶೋಕ್ ಖಾರಟ್ ಪಾದ ಪೂಜೆ ಮಾಡುತ್ತಿರುವ ವಿಡಿಯೋ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. 58ಕ್ಕೂ ಹೆಚ್ಚು ಮಹಿಳೆಯನ್ನು ಲೈಂಗಿಕವಾಗಿ ಪೀಡಿಸಿರುವ ವ್ಯಕ್ತಿ ಜೊತೆ ಮಹಿಳಾ ಆಯೋಗದ ಅಧ್ಯಕ್ಷೆ ಗುರುತಿಸಿಕೊಂಡಿದ್ದಾರೆ ಎಂದರೆ ಮಹಿಳೆಯರಿಗೆ ನ್ಯಾಯ ಸಿಗಲು ಸಾಧ್ಯವೇ ಎಂದು ಮಹಾರಾಷ್ಟ್ರದ ವಿಪಕ್ಷಗಳು ಹಾಗೂ ಹಲವು ನಾಯಕರು ಆಕ್ರೋಶ ಹೊರಹಾಕಿದ್ದರು. ತೀವ್ರ ಮುಜುಗರಕ್ಕೆ ಸಿಲುಕಿರುವ ರೂಪಾಲಿ ಚಕಾನ್ಕರ್ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಾನ್ಕರ್ ಅರೆಸ್ಟ್ ಆಗಿರುವ ಅಶೋಕ್ ಖಾರಟ್ ಅವರ ಖಾರಟ್ ಟ್ರಸ್ಟ್‌ನ ಸದಸ್ಯೆಯಾಗಿದ್ದಾರೆ. ಇತ್ತ ಹಲವು ಕಾರ್ಯಕ್ರಮಗಳಲ್ಲಿ ಅಶೋಕ್ ಖಾರಟ್ ಜೊತೆ ಕಾಣಿಸಿಕೊಂಡಿದ್ದಾರೆ. ಇತ್ತ ವಿಪಕ್ಷಗಳ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ಮಹಿಳಾ ಆಯೋಗ ಮುಖ್ಯಸ್ಥೆ ರೂಪಾಲಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಅಶೋಕ್ ಖಾರಟ್ ಜ್ಯೋತಿಷಿಯಾಗಿ, ಸ್ವಯಂ ಘೋಷಿತ ದೇವಮಾನವನಾಗಿ ಗುರುತಿಸಿಕೊಂಡಿದ್ದರು. ಇದಕ್ಕಿಂತ ಮುಖ್ಯವಾಗಿ ಅಶೋಕ್ ಖಾರಟ್ ನಿವೃತ್ತಿ ನೌಕಾಪಡೆ ಅಧಿಕಾರಿಯಾಗಿದ್ದಾರೆ. ಹೀಗಾಗಿ ಅವರ ಮೇಲೆ ಗೌರವ ಇತ್ತು. ಅಶೋಕ್ ಖಾರಟ್ ಅಕ್ರಮ ಚುಟವಟಿಕೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಇರಲಿಲ್ಲ. ಕೆಲ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇನೆ. ಇದರ ಹೊರತುಪಡಿಸಿ ಯಾವುದೇ ಸಂಪರ್ಕವಿಲ್ಲ ಎಂದು ರೂಪಾಲಿ ಚಕಾನ್ಕರ್ ಸ್ಪಷ್ಟಪಡಿಸಿದ್ದಾರೆ.

ಅಶೋಕ್ ಖಾರಟ್ ಜೊತೆಗಿನ ಸಂಪರ್ಕ ಕುರಿತು ಸ್ಪಷ್ಟನೆ

Source link
ಗುರೂಜಿ ರಾಸಲೀಲೆ ವಿಡಿಯೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಹಿಳಾ ಆಯೋಗ ಮುಖ್ಯೆಸ್ಥೆ ರಾಜೀನಾಮೆ