
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿಗಳಿಗಾಗಿ 15 ವರ್ಷಗಳ ಹಿಂದಿನ ಬ್ಲಾಕ್ ಬಸ್ಟರ್ ಚಿತ್ರ ‘ಸಾರಥಿ’ಯನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಕಾಕತಾಳೀಯವೆಂದರೆ, 2011ರಲ್ಲಿ ಈ ಸಿನಿಮಾ ಬಿಡುಗಡೆಯಾದಾಗಲೂ ದರ್ಶನ್ ಜೈಲಿನಲ್ಲಿದ್ದರು.
ಬೆಂಗಳೂರು: ನಟ ದರ್ಶನ್‌ಗೆ ಯಾವ ಹಬ್ಬವೂ ಇಲ್ಲ. ಈ ಬೇಸರ ಹಬ್ಬ ಬಂದಾಗೆಲ್ಲಾ ದಾಸನ ಡೈ ಹಾರ್ಡ್ ಫ್ಯಾನ್ಸ್‌ಗೆ ಕಾಡುತ್ತಲೇ ಇದೆ. ಹಾಗಂತ ಸುಮ್ಮನೇ ಕೂರೋಕೆ ಆಗಲ್ವಲ್ಲಾ. ದರ್ಶನ್‌ರನ್ನ ನೆನಪಿಸುವಂತಹ ಏನಾದ್ರು ಒಂದು ಕೆಲಸ ಆಗ್ತಾನೇ ಇರಬೇಕಲ್ವಾ..? ಅಂತಹದ್ದೊಂದು ದೊಡ್ಡ ಸೆಲೆಬ್ರೇಷನ್ ಮಾಡೋ ಸಮಯ ದಚ್ಚು ಫ್ಯಾನ್ಸ್‌ಗೆ ಹತ್ತಿರವಾದಂತಿದೆ. ಯುಗಾದಿ ಹಬ್ಬದಲ್ಲಿ ಆ ಖುಷಿಯನ್ನ ಊರಿಡೀ ಹಂಚೋ ಸಮಯ ಬಂದಿದೆ. ಹಾಗಾದ್ರೆ ಏನದು ನೋಡೋಣ ಬನ್ನಿ..
ಜೈಲಲ್ಲಿ ದಾಚ್ಚುಗೆ ಮಂಗಳಾರತಿ. ಚಿತ್ರಮಂದಿರದಲ್ಲಿ ಸಾರಥಿಗೆ ಆರತಿ..!
ಯೆಸ್,, ನಟ ದರ್ಶನ್ ಜೈಲು ಸೇರಿದ ಮೇಲೆ ದರ್ಶನ್ ಫ್ಯಾನ್ಸ್ ಸೈಲೆಂಟ್ ಆಗಿದ್ದಾರೆ. ಅವರಿಗೆ ಇರೋದು ಒಂದೇ ಚಿಂತೆ ನಮ್ಮ ಹೀರೋ ಅದ್ಯಾವಾಗ ಜೈಲಿನಿಂದ ಹೊರ ಬರುತ್ತಾರೆ ಅನ್ನೋದು. ಅದು ದರ್ಶನ್ ಕೇಸ್ಅನ್ನ ವಿಚಾರಣೆ ಮಾಡುತ್ತಿರೋ ನ್ಯಾಯಾದೀಶರಿಗೂ ಗೊತ್ತಿಲ್ಲ. ಯಾಕಂದ್ರೆ ದಾಸನ ಕೊಲೆ ಕೇಸಿನ ವಿಚಾರಣೆ ಇನ್ನೂ ಟ್ರಯಲ್ನಲ್ಲಿದೆ. ಹೀಗಾಗಿ ದರ್ಶನ್‌ಗೆ ಜೈಲಿನಲ್ಲಿ ಮಂಗಳಾರತಿ ಆಗ್ತಾನೆ ಇದೆ. ಆದ್ರೆ ಈಗ ವಿಷಯ ಅದಲ್ಲ. ಚಿತ್ರಮಂದಿರಗಳಲ್ಲಿ ಸಾರಥಿಗೆ ಆರತಿ ಎತ್ತೋ ಸಮಯ ಬಂದಿದೆ. ಫ್ಯಾನ್ಸ್ ದಿನ ಫೂರ್ತಿ ಸಂಭ್ರಮಿಸೋ ಗಳಿಗೆ ಸೃಷ್ಟಿಯಾಗುತ್ತಿದೆ.
ಮತ್ತೆ ನೆನಪಾಗುತ್ತಿದೆ 15 ವರ್ಷದ ಇತಿಹಾಸ..!
ಹೌದು, ನಟ ದರ್ಶನ್ 15 ವರ್ಷದ ಹಿಂದೆ ಸೃಷ್ಟಿಸಿದ್ದ ಇತಿಹಾಸವೊಂದು ಈಗ ಮತ್ತೆ ನೆನಪಾಗುತ್ತಿದೆ, ಅದಕ್ಕೆ ಕಾರಣ ನಟ ದರ್ಶನ್ರ ಸಾರಥಿ ಸಿನಿಮಾ. ಯಾಕಂದ್ರೆ ದಚ್ಚು ಸಾರಥಿ ದರ್ಶನ್ ಕರೀಯರ್ನಲ್ಲೇ ಅತಿದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ. ಇದೇ ಟೈಮ್ನಲ್ಲಿ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋಗಿದ್ದ ದರ್ಶನ್ ಮೇಲಿನ ಅನುಕಂಪ ಸೃಷ್ಟಿಯಾಗಿತ್ತು. ಜೊತೆಗೆ ಸಾರಥಿ ಕಂಟೆಂಟ್ ಕೂಡ ಅದ್ಭುತವಾಗಿತ್ತು. ರಿಪೀಟ್ ಆಡಿಯನ್ಸ್ ಸಿನಿಮಾಗೆ ಬಂದಿದ್ರು. ಇದೆಲ್ಲಾ ಸೇರಿ ಸಾರಥಿ ಆ ಕಾಲಕ್ಕೆ ಶತದಿನೋತ್ಸವ ಆಚರಿಸಿತ್ತು.
ಈಗ ಮತ್ತೆ ದಾಸ ಜೈಲು ವಾಸ ಅನುಭವಿಸ್ತಾ ಇದ್ದಾರೆ. ಈ ನೋವಿಗೆ ಎಷ್ಟೇ ಮುಲಾಮು ಹಚ್ಚಿದ್ರೂ ಫ್ಯಾನ್ಸ್‌ಗೆ ಮಾತ್ರ ನೋವು ಕಡಿಮೆ ಆಗುತ್ತಿಲ್ಲ. ಹೀಗಾಗಿ ಆ ದಿನ ಆ ಕ್ಷಣನ್ನ ಮತ್ತೆ ನೆನಪಿಸಿಕೊಂಡು ಒಂದ್ ಚೂರು ಖುಷಿ ಪಡೋದಕ್ಕೆ ಸಾರಥಿ ಸಿನಿಮಾ ಬರು ಬಿಡುಗಡೆ ಮಾಡೋದಕ್ಕೆ ಸಿದ್ಧತೆಗಳು ನಡೀತಾ ಇದೆ. ಕಾಕತಾಳಿಯಾ ಅಂದ್ರೆ 15 ವರ್ಷದ ಹಿಂದೆ ದರ್ಶನ್ ಜೈಲಲ್ಲಿದ್ದಾಗ್ಲೇ ಸಾರಥಿ ಬಂದಿತ್ತು. ಈಗ್ಲೂ ದಾಸ ಜೈಲಲ್ಲಿರುವಾಗ್ಲೆ ಸಾರಥಿ ಮರು ಬಿಡುಗಡೆ ಆಗುತ್ತಿದೆ.
2011 ಸೆಪ್ಟೆಂಬರ್ ಸಾರಥಿ; 2025 ಸೆಪ್ಟೆಂಬರ್ ಡೆವಿಲ್!
ಅದು 2011ನೇ ಇಸವಿ ಸೆಪ್ಟೆಂಬರ್ 30ನೇ ತಾರೀಖು. ರಾಜ್ಯಾದ್ಯಂತ ದರ್ಶನ್ ನಟಿಸಿದ್ದ ಸಾರಥಿ ಸಿನಿಮಾ ರಿಲೀಸ್ ಆಗಿತ್ತು. ದರ್ಶನ್ ಆ ಚಿತ್ರದಲ್ಲಿ ಆಟೋ ಚಾಲಕನ ಪಾತ್ರ ಮಾಡಿದ್ರು. ದರ್ಶನ್ ಸೋದರ ದಿನಕರ್ ತೂಗುದೀಪ ಚಿತ್ರವನ್ನ ನಿರ್ದೇಶನ ಮಾಡಿದ್ರು. ಆದ್ರೆ ಸಿನಿಮಾ ರಿಲೀಸ್ ಆಗೋ ಹೊತ್ತಲ್ಲಿ ಚಿತ್ರದ ನಾಯಕ ಮಾತ್ರ ಪರಪ್ಪನ ಅಗ್ರಹಾರದಲ್ಲಿದ್ದ. ಕಳೆದ ವರ್ಷ ದರ್ಶನ್ ನಟನೆಯ ಡಿವಿಲ್ ಸಿನಿಮಾ ಬಿಡುಗಡೆ ಆಗುವಾಗ್ಲು ದರ್ಶನ್ ಜೈಲಿನಲ್ಲಿದ್ದಾರೆ. ಈಗ ದರ್ಶನ್ ಜೈಲಿನಲ್ಲಿ ಇರುವಾಗ್ಲೆ ಸಾರಥಿ ಸಿನಿಮಾ ಮರು ಬಿಡುಗಡೆ ಮಾಡೋದಕ್ಕೆ ಸಿದ್ಧತೆ ನಡೀತಾ ಇದೆ.
ದರ್ಶನ್ ರ ಬ್ಲಾಕ್ ಬಸ್ಟರ್ ಚಿತ್ರ ‘ಸಾರಥಿ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ₹7-8 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ, 20 ಕೋಟಿಗೂ ಅಧಿಕ ಗಳಿಕೆ ದಾಖಲಿಸಿತ್ತು. ಈಗ ಸಾರಥಿ ಸಿನಿಮಾವನ್ನ ಮತ್ತೆ ರಿ ರಿಲೀಸ್ ಮಾಡೋದಕ್ಕೆ ನಿರ್ಪಾಪಕ ಕೆ.ವಿ ಸತ್ಯ ಪ್ರಕಾಶ್ ಸಿದ್ಧರಾಗಿದ್ದಾರೆ.
ನಟ ದರ್ಶನ್ ಜೈಲು ಸೇರಿ ವರ್ಷ ಆಗ್ತಾ ಬಂದಿದೆ. ಆದ್ರೆ ಥಿಯೇಟರ್ನಲ್ಲಿ ದಾಸನ ಹಳೇ ಸಿನಿಮಾಗಳು ದಚ್ಚು ನೆನಪುಗಳನ್ನ ಹೊತ್ತು ಬರುತ್ತಿವೆ. ದಾಸ ಇಲ್ಲ ಅನ್ನೋ ನೋವನ್ನ ದೂರಾ ಮಾಡೋಕೆ ಅಂತಲೇ ಈ ಹಿಂದೆ ಕರಿಯಾ ಸಿನಿಮಾ ಮರು ಬಿಡುಗಡೆ ಆಗಿತ್ತು.
ಅಷ್ಟೆ ಅಲ್ಲ ದಾಸನ ಮತ್ತೊಂದು ಹಿಟ್ ಚಿತ್ರ ‘ಶಾಸ್ತ್ರಿ’, ಹಾಗು ‘ನಮ್ಮ ಪ್ರೀತಿಯ ರಾಮು’ ಸಿನಿಮಾಗಳು ದರ್ಶನ್ ಜೈಲಿನಲ್ಲಿರುವಾಗ್ಲೆ ಮರು ಬಿಡುಗಡೆ ಆಗಿವೆ. ಈ ಡೆವಿಲ್ ಕೂಡ ರೀ ರಿಲೀಸ್ ಆಗಿದೆ. ಈ ಎಲ್ಲಾ ಸಿನಿಮಾಗಳ ದಾಖಲೆಯನ್ನ ಮರು ಬಿಡುಗಡೆ ಆಗುತ್ತಿರೋ ಸಾರಥಿ ಮುರಿಯುತ್ತಾ ನೋಡಬೇಕಿದೆ.