Headlines

ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಕ್-ಪಿಟಕ್ ಎನ್ನದ ದೀಪಿಕಾ ಪಡುಕೋಣೆ

ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಕ್-ಪಿಟಕ್ ಎನ್ನದ ದೀಪಿಕಾ ಪಡುಕೋಣೆ


ಪತಿಯ ಸಿನಿಮಾ ದೊಡ್ಡ ಸಕಸ್ ಕಂಡರೂ ತುಟಕ್-ಪಿಟಕ್ ಎನ್ನದ ದೀಪಿಕಾ ಪಡುಕೋಣೆ

ಬಾಲಿವುಡ್ ಸಿನಿಮಾ ‘ಧುರಂಧರ 2’ (ಧುರಂಧರ 2) ಸೂಪರ್ ಹಿಟ್ ಆಗಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರ ಗಮನ ಸೆಳೆಯುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ವೃತ್ತಿ ಜೀವನದ ಅತ್ಯಂತ ದೊಡ್ಡ ಯಶಸ್ಸು ಇದು. ಆದಾಗ್ಯೂ ಅವರ ಪತ್ನಿ ದೀಪಿಕಾ ಪಡುಕೋಣೆ ಅವರು ಈ ಬಗ್ಗೆ ಯಾವುದೇ ಪೋಸ್ಟ್ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

‘ಧುರಂಧರ 2’ ಸಿನಿಮಾ ಮಾರ್ಚ್ 19 ರಂದು ರಿಲೀಸ್ ಆಯಿತು. ಈದ್ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಭರ್ಜರಿ ಸಕಸ್ ಕಂಡಿದೆ. ಸಿನಿಮಾ ಎರಡನೇ ದಿನಕ್ಕೆ ಭಾರತದಲ್ಲಿ 269 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ನೋಡಿದವರೆಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಸಿನಿಮಾ ಇಷ್ಟವಾಗಿದೆ.

ಆದರೆ, ದೀಪಿಕಾ ಪಡುಕೋಣೆ ಮಾತ್ರ ಈ ವಿಷಯದಲ್ಲಿ ಇನ್ನೂ ಮೌನವಾಗಿದ್ದಾರೆ. ಈ ಬಗ್ಗೆ ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಏಕೆ ಮೌನವಾಗಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಅವರು ಪ್ರೀಮಿಯರ್ ಶೋನಲ್ಲಿ ಕಾಣಿಸಿಕೊಂಡಿಲ್ಲ. ಇದು ಏಕೆ ಎಂಬ ಚರ್ಚೆ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಅವರು ಎಡಪಂಥೀಯ ಆಲೋಚನೆಗಳಿಂದ ಪ್ರಭಾವಿತರಾದವರು ಎಂದು ಹೇಳುತ್ತಿದ್ದರು. ‘ಧುರಂಧರ 2’ ಸಿನಿಮಾ ಬಲ ಪಂಥೀಯ ಚಿಂತನೆಗಳನ್ನು ಹೊಂದಿದೆ. ಈ ಕಾರಣದಿಂದ ದೀಪಿಕಾ ಪಡುಕೋಣೆ ಅವರು ಮೌನ ತಾಳಬಹುದೇ ಎಂಬ ಚರ್ಚೆ ನಡೆದಿದೆ.

ಇದನ್ನೂ ಓದಿ: ಆ ಒಂದು ವಿಷಯದ ಬಗ್ಗೆ ಕಂಪ್ಲೇಂಟ್ ಮಾಡಿದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಮಗುವಿನ ಆರೋಗ್ಯದಲ್ಲಿ ಬ್ಯೂಸಿ ಇದ್ದಾರೆ. ಈ ಕಾರಣಕ್ಕೆ ಅವರು ಸಿನಿಮಾ ನೋಡೋದು ತಡವಾಗಬಹುದು ಎಂದು ಹೇಳಲಾಗದು. ಈ ಕಾರಣದಿಂದ ಅವರು ಈ ಬಗ್ಗೆ ಮೌನ ತಾಳಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *