ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ನಟ ಝೈದ್ ಖಾನ್, ತಮ್ಮ ತಂದೆಯ ಜೀವನದ ಒಂದು ಹಾಸ್ಯ ಪ್ರಸಂಗವನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ರಾವೆಲ್ ಬಿಸಿನೆಸ್ನಲ್ಲಿ ಮೋಸ ಮಾಡುತ್ತಿದ್ದ ಚಾಲಕನನ್ನು ಹಿಡಿಯಲು ಜಮೀರ್ ಅವರು ಬುರ್ಖಾ ಧರಿಸಿ ಪ್ರಯಾಣಿಕರಂತೆ ಬಸ್ ಹತ್ತಿದ ಘಟನೆಯನ್ನು ಝೈದ್ ವಿವರಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ (Zaid Khan) ಇದಾಗಲೇ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಬನಾರಸ್’ ಚಿತ್ರದ ಮೂಲಕ 2022ರಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿರೋ ಇವರು ಇದಾಗಲೇ ಆಕ್ಷನ್-ಡ್ರಾಮಾ ‘ಕಲ್ಟ್’ ಚಿತ್ರದಲ್ಲಿಯೂ ನಟಿಸಿದ್ದಾರೆ. ಝೈದ್ ಖಾನ್ ಜೊತೆ ನಟಿ ರಚಿತಾ ರಾಮ್, ಮಲೈಕಾ ವಸುಪಾಲ್ ನಟಿಸಿದ್ದು ಕಳೆದ ಜನವರಿಯಲ್ಲಿ ಇದು ಬಿಡುಗಡೆಯಾಗಿದೆ.

ರಾಜಕೀಯ ತಮಗೇ ಕೊನೆಯಾಗಲಿ ಎನ್ನುವ ಆಸೆ ಅಪ್ಪಂದು. ಅದಕ್ಕಾಗಿ ನಾನು ಸಿನಿಮಾಕ್ಕೆ ಬಂದಿರುವುದಾಗಿ ಇದಾಗಲೇ ಝೈದ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ಅಪ್ಪ ಜಮೀರ್ ಅಹ್ಮದ್ ಖಾನ್ (B.Z. Zameer Ahmed Khan) ಅವರ ಜೀವನದ ಕೆಲವು ಹಾಸ್ಯ ಪ್ರಸಂಗಗಳನ್ನು metrosaga ಚಾನೆಲ್ ಜೊತೆ ಹಂಚಿಕೊಂಡಿದ್ದಾರೆ.

ಇದರಲ್ಲಿ ಒಂದು ಜಮೀರ್ ಅವರು ಡ್ರೈವರ್ ಪರೀಕ್ಷೆ ಮಾಡಲು ಬುರ್ಖಾ ಹಾಕಿಕೊಂಡು ಹೋಗಿದ್ದ ಫನ್ನಿ ಪ್ರಸಂಗ. ನನ್ನ ಅಪ್ಪಂದು ತುಂಬಾ ಫನ್ನಿ ಕ್ಯಾರೆಕ್ಟರ್ ಎಂದಿರುವ ಅವರು, ನಮ್ಮದು ಟ್ರ್ಯಾವಲ್ ಬಿಜಿನೆಸ್ ಇದೆ. ಆಗ ನಡೆದ ಘಟನೆ ಹೇಳುತ್ತೇನೆ ಎಂದು ನಕ್ಕು ನಗಿಸುವ ಒಂದು ಉದಾಹರಣೆ ಕೊಟ್ಟಿದ್ದಾರೆ. ಈ ಮೂಲಕ ಜಮೀರ್ ಅವರು ಎಷ್ಟು ಫನ್ನಿ ಎನ್ನುವುದನ್ನು ತಿಳಿಸಿದ್ದಾರೆ.

ನಮ್ಮದು ಟ್ರ್ಯಾವಲ್ ಬಿಜಿನೆಸ್ ಇದೆಯಲ್ವಾ? 50 ಕೆಪ್ಯಾಸಿಟಿ ಎಂದು ಅಂದುಕೊಳ್ಳೋಣ. ಹೊರಡುವಾಗ 30 ಜನ ಟಿಕೆಟ್ ಬುಕ್ ಮಾಡಿಕೊಂಡು ಹೋಗ್ತಾರೆ ಅಂದುಕೊಳ್ಳಿ. ಬೆಂಗಳೂರು ಟು ಹೈದರಾಬಾದ್ ಎಂದುಕೊಂಡರೆ, ಇಲ್ಲಿಂದ 30 ಜನ ಹೋದೋರು ಹೈದರಾಬಾದ್ಗೆ ಹೋಗುವ ತನಕ 50 ಜನ ಆಗ್ತಿದ್ರು ಎಂದು ಘಟನೆ ನೆನಪಿಸಿಕೊಂಡಿದ್ದಾರೆ.

ಅಲ್ಲಿ ಡ್ರೈವರ್ ಗೋಲ್ಮಾಲ್ ಮಾಡ್ತಿದ್ರು. ಮಾರ್ಗಮಧ್ಯೆ ನಿಲ್ಲಿಸಿ ಪ್ಯಾಸೆಂಜರ್ ಅನ್ನು ಹತ್ತಿಸಿಕೊಂಡು ಹೆಚ್ಚು ದುಡ್ಡು ಪಡೆದು ಹೀಗೆಲ್ಲಾ ಮಾಡ್ತಿರೋದು ಅಪ್ಪಂಗೆ ತಿಳಿಯಿತು. ಆದರೆ ಆಗ ಸಿಸಿಟಿವಿ ಇರಲಿಲ್ಲವಲ್ಲ, ಹೇಗೆ ಕಂಡುಹಿಡಿಯುವುದು ಎಂದು ಅಪ್ಪಂಗೆ ಗೊತ್ತಾಗಲಿಲ್ಲ ಎಂದು ಅಂದು ಮಾಡಿದ ಕಿತಾಪತಿಯನ್ನು ನೆನಪಿಸಿಕೊಂಡಿದ್ದಾರೆ ………

ಅದಕ್ಕೆ ನಮ್ಮಪ್ಪ ಒಂದು ಉಪಾಯ ಮಾಡಿದ್ರು. ಮಾರ್ಗ ಮಧ್ಯೆ ಇರುವ ಸ್ಟಾಪ್ನಲ್ಲಿ ಅಪ್ಪ ಬುರ್ಖಾ ಹಾಕಿಕೊಂಡು ಪ್ಯಾಸೆಂಜರ್ ರೀತಿ ಹೋದರು. ಆಗ ನಿಜವಾದ ವಿಷಯ ತಿಳಿಯಿತು. ಕೂಡಲೇ ಆ ಡ್ರೈವರ್ನನ್ನು ಕೆಲಸದಿಂದ ತೆಗೆದು ಹಾಕಿದ್ರು.

Source link
ಬುರ್ಖಾ ಧರಿಸಿ ಬಸ್ ಏರಿದ್ದ ಸಚಿವ ಜಮೀರ್ ಅಹ್ಮದ್: ಆ ದಿನದ ಘಟನೆ ನೆನೆದ ಮಗ Zaid Khan