ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್‌ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!

ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್‌ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!


ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!

ದೆಹಲಿ, ಮಾ.21: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯವು ವಾಟ್ಸಾಪ್ ಸಂಸ್ಥೆಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ. ವಂಚನೆಗೆ ಬಳಕೆಯಾಗುವ ಮೊಬೈಲ್ ಡಿವೈಸ್ ಐಡಿಗಳನ್ನು (ಸಾಧನ ಐಡಿಗಳು) ಶಾಶ್ವತವಾಗಿ ನಿರ್ಬಂಧಿಸುವಂತೆ ಸೂಚಿಸಲಾಗಿದೆ. ವಂಚನೆ ಎಸಗುವ ವ್ಯಕ್ತಿ ಅಥವಾ ಜಾಲವನ್ನು ಗುರುತಿಸಿದ ತಕ್ಷಣ, ಅವರು ಬಳಸುವ ಮೊಬೈಲ್‌ನ ಡಿವೈಸ್ ಐಡಿಯನ್ನು ಬ್ಲಾಕ್ ಮಾಡಬೇಕು. ಇದರಿಂದ ವಂಚಕರು ಅದೇ ಫೋನ್ ಬಳಸಿ ಮತ್ತೊಂದು ಅಕೌಂಟ್ ತೆರೆಯಲು ಸಾಧ್ಯವಾಗಲಿಲ್ಲ.

ಐಟಿ ನಿಯಮಗಳ ಪ್ರಕಾರ, ಡಿಲೀಟ್ ಆದ ಅಕೌಂಟ್‌ಗಳ ಮಾಹಿತಿಯನ್ನು ಕನಿಷ್ಠ 180 ದಿನಗಳ ಕಾಲ ಉಳಿಸಿಕೊಳ್ಳಬೇಕು. ಇದು ತನಿಖಾ ಸಂಸ್ಥೆಗಳಿಗೆ ಪುರಾವೆ ಸಂಗ್ರಹಿಸಲು ನೆರವಾಗಲಿದೆ.ವಾಟ್ಸಾಪ್ ಅಕೌಂಟ್‌ಗಳನ್ನು ಸಕ್ರಿಯ ಮೊಬೈಲ್ ಸಿಮ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು. ಅನಾಮಧೇಯವಾಗಿ ವಾಟ್ಸಾಪ್ ಬಳಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುವುದು, 4 ರಿಂದ 6 ತಿಂಗಳು ಇದು ಜಾರಿಯಾಗಲಿದೆ.

ಪೊಲೀಸರು ಅಥವಾ ಅದರ ಲೋಗೋಗಳನ್ನು ಪ್ರೊಫೈಲ್ ಪಿಕ್ಚರ್ ಆಗಿ ಬಳಸಿ ಜನರನ್ನು ಹೆದರಿಸುವ ವಂಚಕರನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆ (AI) ಬಳಸುತ್ತಾರೆ. ಅಂತಹ ಫೇಕ್ ಪ್ರೊಫೈಲ್‌ಗಳನ್ನು ತಕ್ಷಣವೇ ಡಿಲೀಟ್ ಮಾಡಲು ವಾಟ್ಸಾಪ್ ಒಪ್ಪಿಕೊಂಡಿದೆ. ಮ್ಯಾಲಿಶಿಯಸ್ ಎಪಿಕೆ (APK) ಫೈಲ್‌ಗಳ ವರ್ಗಾವಣೆಯನ್ನು ಪತ್ತೆಹಚ್ಚಿ ಬ್ಲಾಕ್ ಮಾಡುವ ವ್ಯವಸ್ಥೆಯನ್ನು ಸೂಚಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ

2024 ರಲ್ಲಿ ಭಾರತದಲ್ಲಿ ಸುಮಾರು 1.23 ಲಕ್ಷ ಡಿಜಿಟಲ್ ಅರೆಸ್ಟ್ ಪ್ರಕರಣಗಳು ವರದಿಯಾಗಿದ್ದು, ಜನರಿಂದ ಸುಮಾರು 1,935 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ಒಟ್ಟಾರೆ ಡಿಜಿಟಲ್ ವಂಚನೆಗಳಿಂದ ದೇಶಕ್ಕೆ ಸುಮಾರು 3,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *