36
Image Credit : Getty
ಸ್ವಚ್ಛಗೊಳಿಸುವ ವಿಧಾನ
ಬೇಕಾಗುವ ವಸ್ತುಗಳು: ಬಿಳಿ ಟೂತ್‌ಪೇಸ್ಟ್, ಮೃದುವಾದ ಹಳೆಯ ಟೂತ್ ಬ್ರಷ್, ಉಗುರುಬೆಚ್ಚಗಿನ ನೀರು, ಮತ್ತು ಮೃದುವಾದ ಕಾಟನ್ ಬಟ್ಟೆ. ಮೊದಲಿಗೆ, ನಿಮ್ಮ ಚಿನ್ನದ ಆಭರಣದ ಮೇಲೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ. ಆಭರಣದ ಎಲ್ಲಾ ಭಾಗಕ್ಕೂ ಪೇಸ್ಟ್ ತಾಗುವಂತೆ ನೋಡಿಕೊಳ್ಳಿ. ಮೃದುವಾದ ಬ್ರಷ್ ಅನ್ನು ಸ್ವಲ್ಪ ನೀರಿನಲ್ಲಿ ಅದ್ದಿ, ಆಭರಣದ ಮೇಲೆ ನಿಧಾನವಾಗಿ ವೃತ್ತಾಕಾರದಲ್ಲಿ ಉಜ್ಜಿ. ಡಿಸೈನ್‌ನ ಸಂದಿಗಳಲ್ಲಿರುವ ಕೊಳೆಯನ್ನು ತೆಗೆಯಲು ಬ್ರಷ್ ಸಹಾಯ ಮಾಡುತ್ತದೆ. ಜೋರಾಗಿ ಉಜ್ಜಬೇಡಿ, ಇದರಿಂದ ಆಭರಣದ ಮೇಲೆ ಗೀರುಗಳು ಬೀಳುವ ಸಾಧ್ಯತೆ ಇರುತ್ತದೆ.