
ಬೆಳಗಾವಿ, ಮಾರ್ಚ್ 21: ಜಿಲ್ಲೆಯಲ್ಲಿ ಸೈಬರ್ ವಂಚಕರು ವೃದ್ಧ ಉದ್ಯಮವನ್ನು ಗುರಿಯಾಗಿಸಿಕೊಂಡು 15 ಕೋಟಿ ರೂಪಾಯಿ ದೋಚಿದ ಸಾರ್ವಜನಿಕ ಘಟನೆ ಬೆಳಕಿಗೆ ಬಂದಿದೆ. ಡಿಜಿಟಲ್ ಅರೆಸ್ಟ್ (ಡಿಜಿಟಲ್ ಬಂಧನ) ಎಂದು ಬೆದರಿಸಿರುವ ವಂಚಕರು ಕೋಟಿಗಟ್ಟಲೆ ಹಣ ದೋಚಿದ್ದಾರೆ. ಪ್ರಕರಣ ಬೆಳಗಾವಿಯ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.
ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡ ವಂಚಕರು
ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ವಿಡಿಯೋ ಕಾಲ್ ಮಾಡಿ ಬೆದರಿಸಿದ್ದ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಸಿಲುಕಿದೆ ಎಂದು ಹೇಳಿ ಭಯ ಹುಟ್ಟಿಸಿದ್ದರು. ತನಿಖೆ ನಡೆಯುತ್ತಿದೆ, ಹಣದ ಸುರಕ್ಷತೆಗೆ ಬೇರೆ ಖಾತೆಗೆ ವರ್ಗಾಯಿಸಿ, ಬಳಿಕ ಮರಳಿಸುತ್ತೇವೆ ಎಂದು ನಂಬಿಸಿ ಹಂತ ಹಂತವಾಗಿ 15 ಕೋಟಿ ರೂ. ಪಡೆದವರು. ಬಳಿಕ ಸಂಪರ್ಕ ಕಡಿತಗೊಂಡ ವೃದ್ಧ ಉದ್ಯಮಿಗೆ ಅನುಮಾನ ಬಂದಿದ್ದು ಮಾರ್ಚ್ 18 ರಂದು ಬೆಳಗಾವಿ ನಗರದ ಸಿಇಎನ್ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ ಡಿಜಿಟಲ್ ಅರೆಸ್ಟ್ ವಂಚನೆಗೆ ಬ್ರೇಕ್: ವಾಟ್ಸಾಪ್ ಸಂಸ್ಥೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೋದಿ ಸರ್ಕಾರ!
90 ಲಕ್ಷ ರೂ. ಇರುವ ಬ್ಯಾಂಕ್ ಖಾತೆ ಫ್ರೀಜ್ ಮಾಡಿದ
ಪೊಲೀಸರು ತಕ್ಷಣ ಕ್ರಮ ಕೈಗೊಂಡು ವಂಚಕರ ಖಾತೆ ಫ್ರೀಜ್ ಮಾಡಿದ್ದು, 15 ಕೋಟಿಯಲ್ಲಿ 90 ಲಕ್ಷ ರೂ. ಇರುವ ಖಾತೆಯನ್ನು ತಡೆಹಿಡಿದಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ. ಒಂದೇ ತಿಂಗಳಿನಲ್ಲಿ ಮೂರು ನಾಗರಿಕರು ಇಂತಹ ವಂಚನೆಗೆ ಒಳಗಾಗಿರುವಾಗ, ಇಂತಹ ಬೆದರಿಕೆಗಳಿಗೆ ಹೆದರದೆ ತಕ್ಷಣ ಪೊಲೀಸರಿಗೆ ದೂರು ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.