
ಆನೇಕಲ್, ಮಾರ್ಚ್ 21: ಶಿವಮೊಗ್ಗದ ಹುಲಿಧಾಮದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಸಮೀಕ್ಷಾ ರೆಡ್ಡಿ ಮಾವೀನ್ ನವೀನ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಆನೇಕಲ್ ನಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು, ಚಿಕ್ಕಂದಿನಿಂದಲೂ ಕಾಡು ಪ್ರಾಣಿಗಳ ಸಮೀಕ್ಷಾಗೆ ಹೆಚ್ಚು ಪ್ರೀತಿ. ನೂರಾರು ಕೋಟಿ ರೂ ಆಸ್ತಿ ಇದ್ರೂ ಸೇವೆ ಮಾಡಬೇಕೆಂಬ ಹಂಬಲ ಇತ್ತು. ಮದುವೆ ಮಾಡಿಕೊಳ್ಳುವ ಯೋಚನೆ ಕೂಡ ಸಮೀಕ್ಷಾಗೆ ಇರಲಿಲ್ಲ. ಅಧಿಕಾರಿಗಳು ಹಾಸ್ಟೆಲ್ ಬಳಿ ಜೀಪ್ ಕಳುಹಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಇಬ್ಬರು ಯುವತಿಯರನ್ನ ಜೊತೆಗೆ ಕಳಿಸಿದ್ದಾರೆ. ಒಬ್ಬ ಹುಡುಗಿಯನ್ನು ನೀರಾನೆ ಬಳಿ ಕಳಿಸಲು ಕಾಮನ್‌ಸೆನ್ಸ್ ಬೇಕು. 20 ಸಿಂಹಗಳು ಸಹ ಒಂದು ನೀರಾನೆ ಸಮೀಪ ಹೋಗಲ್ಲ, ಅದಕ್ಕಿಂತ ಹೆಚ್ಚಾಗಿ ನೀರಾನೆ ಗರ್ಭಿಣಿ ಇದ್ದು ಭಯ ಇರುತ್ತೆ. ವೈಲ್ಡ್‌ಲೈಫ್ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.