
ಬೆಂಗಳೂರು, ಮಾರ್ಚ್ 21: ಹೈಫೈ ಲೈಫ್ ಹೊಂದಿರುವ ಕೆಲವರ ಶೋಕಿ ಬೇರೆನೇ ಇರುತ್ತೆ. ಅದರಲ್ಲೂ ಕಾರುಗಳಿರುವ ಅನೇಕರು ಮಾಡುತ್ತಾರೆ. ಕಳೆದ ಎರಡು ತಿಂಗಳ ಹಿಂದೆ ಗ್ರೀನ್ ಕಲರ್ ಲ್ಯಾಂಬೋರ್ಗಿನಿ (ಲಂಬೋರ್ಗಿನಿ) ಜಿಗ್ ಜಾಗ್ ಜರ್ನಿ ಮಾಡಿ ಸುದ್ದಿಯಾಗಿತ್ತು. ಇದೀಗ ವೈಟ್ ಕಲರ್ ಲ್ಯಾಂಬೋರ್ಗಿನಿ ಕಾರವೊಂದು ಸದ್ದು ಮಾಡುತ್ತಿದೆ. ಸರ್ಕಲ್ ನಡುವೆಯೇ ರಾಜಾ ರೋಷವಾಗಿ ಡ್ರಿಫ್ಟಿಂಗ್ ಮಾಡಲಾಗಿದೆ. ಪೊಲೀಸರ ಬಗ್ಗೆ ಗೊತ್ತಿದ್ದೂ, ಸಿನಿಮಾ ಸ್ಟೈಲ್ ನಲ್ಲಿ ಶೋಕಿ ಮಾಡಿದ್ದಾರೆ.
ಸರ್ಕಲ್ ನಡುವೆಯೇ ಡ್ರಿಫ್ಟಿಂಗ್
ಬೆಂಗಳೂರಿನ ಪ್ರಸಿದ್ಧ ಅನಿಲ್ ಕುಂಬ್ಳೆ ಸರ್ಕಲ್ ನ ಮಧ್ಯೆ ಹೀಗೆ ರಾಜಾರೋಷವಾಗಿ ಕಾರಿನ ಡ್ರಿಫ್ಟಿಂಗ್ ಮಾಡಲಾಗಿದೆ. ಲ್ಯಾಂಬೋರ್ಗಿನಿ ಕಾರು ಚಾಲಕನೊಬ್ಬ ಸಿನಿಮಾ ಸ್ಟೈಲ್ ನಲ್ಲಿ ಡ್ರಿಫ್ಟಿಂಗ್ ಮಾಡಿ ಸುದ್ದಿಯಾಗಿದ್ದಾನೆ. ಇಂದು ಬೆಳಗಿನ ಜಾವ 2 ಅಥವಾ 3ಗಂಟೆ ಸುಮಾರಿಗೆ ಈ ರೀತಿಯಾಗಿ ಕಾರು ಸ್ಟಂಟ್ ಮಾಡಲಾಗಿದೆ. ಸುತ್ತಮುತ್ತ ಸಿಸಿಟಿವಿ, ಪೊಲೀಸ್ ಕಣ್ಗಾವಲು, ಎಂಜಿ ರೋಡ್ ಆಗಿದ್ದರೆ ರಾತ್ರಿಯಾದರೂ ವಾಹನಗಳು ಸಂಚರಿಸುತ್ತಿರುತ್ತವೆ. ಈ ಮಧ್ಯೆ ಬಳಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಮಾಲೀಕ ಹೀಗೆ ಸ್ಟೈಲ್ ನಲ್ಲಿ ಸರ್ಕಲ್ ನಡುವೆಯೇ ಡ್ರಿಫ್ಟಿಂಗ್ ಮಾಡಿದ್ದಾನೆ. ಜೊತೆಗೆ ಜೋರಾಗಿ ಕೂಗಾಡುತ್ತಾ ಎಂಜಾಯ್ ಮಾಡಿದ್ದಾನೆ.
ಇದನ್ನೂ ಓದಿ: ಕಾರು ಖರೀದಿಸಿದ್ದು ಯಾರೋ, ನೋಂದಣಿ ಮಾಡಿಸಿದ್ದು ಇನ್ಯಾರದೋ ಹೆಸರಿಗೆ: ಲ್ಯಾಂಬೋರ್ಗಿನಿ ರಹಸ್ಯ ಬಯಲು
ಚಾಲಕನ ಈ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಪೊಲೀಸರಿಗೂ ರವಾನಿಸಿದ್ದಾರೆ. ಮಾಹಿತಿ ಬಂದ ಕೂಡಲೇ ಎಫ್‌ಐಆರ್ ದಾಖಲಿಸಿ ಪರಿಶೀಲನೆ ಮಾಡಿದ್ದು, ಸದ್ಯ ಕೆಎ-05 ಎನ್‌ಆರ್ 0009 ಕಾರು ನಂಬರ್ ಇದೆ. ಆದರೆ ಮಾಲೀಕ ಯಾರು? ರಸ್ತೆಯ ಈ ರೀತಿ ಜಾಲಿ ರೈಡ್ ಮಾಡಲಾಗಿದೆ, ಹೀಗೆ ಹಲವು ಆಯಾಮಗಳಲ್ಲಿ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಾಲಕನನ್ನ ಪತ್ತೆ ಮಾಡಿ ಆರ್.ಸಿ ರದ್ದು ಮಾಡಿ ಕಾರು ವಶಪಡಿಸಿಕೊಳ್ಳಲು ಖಾಕಿ ಮುಂದಾಗಿದೆ.
ಡಿಸಿಪಿ ಸಾಹಿಲ್ ಬಾಗ್ಲಾ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಗ್ಲಾದಲ್ಲಿ ಕಾಣಿಸಿಕೊಂಡಿದ್ದು, ಬೆಳಗಿನಜಾವ 2-3 ಗಂಟೆ ಸುಮಾರಿಗೆ ಈ ರೀತಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ಮಾಲೀಕನ ಪತ್ತೆ ಕಾರ್ಯ ನಡೆದಿದೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆ ಹಚ್ಚುತ್ತೇವೆ. ಘಟನೆ ಸಂಬಂಧ ಆರ್ಸಿ ಕೂಡ ಕ್ಯಾನ್ಸಲ್ ಮಾಡಲು ನಿರ್ಧರಿಸಿದ್ದೇವೆ. ಈ ರೀತಿ ರಸ್ತೆಯಲ್ಲಿ ಯಾರೂ ಕೂಡ ಸ್ಟಂಟ್ ಮಾಡಲು ಅವಕಾಶವಿಲ್ಲ, ಹೀಗೆ ಮಾಡಿದರೆ ಆರ್ಸಿ ರದ್ದುಗೊಳಿಸಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ: ವೈರಲ್ ವಿಡಿಯೋ ನೇತೃತ್ವದ ಚಾಲಕನ ವಿರುದ್ಧ ಎಫ್‌ಐಆರ್
ಪೊಲೀಸರು ಕೇಸ್ ಹಾಕಿ ವಾರ್ನ್ ಮಾಡಿದರೂ ಕೆಲವರು ಹಣವಿದೆ ಅಂತಾ ಈ ರೀತಿ ಶೋಕಿ ಮಾಡುವುದು ಮಾತ್ರ ನಿಲ್ಲುತ್ತಿಲ್ಲ. ಆದರೆ ಶೋಕಿಗೆ ಬೇರೆಯವರ ಪ್ರಾಣಕ್ಕೆ ತೊಂದರೆ ಆದರೆ ಯಾರು ಹೊಣೆ?
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.