ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಭಾರಿ ಪ್ರಶಂಸೆ ಗಳಿಸಿದ್ದ ‘ವಲವಾರ’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಇಬ್ಬರು ಮಕ್ಕಳು ಮತ್ತು ಹಸುವಿನ ಸುತ್ತ ನಡೆಯುವ ಈ ಕತೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಈ ಸಿನಿಮಾವನ್ನು ಸನ್ ನೆಕ್ಸ್ಟ್ ನಲ್ಲಿ ನೋಡಬಹುದು.
ಅರ್ಜುನ್ ಸರ್ಜಾ ನಿರ್ದೇಶಿಸಿ, ಅವರ ಪುತ್ರಿ ಐಶ್ವರ್ಯಾ ನಾಯಕಿಯಾಗಿ, ಉಪೇಂದ್ರ ಅವರ ಅಣ್ಣನ ಪುತ್ರ ನಿರಂಜನ್ ನಾಯಕನಾಗಿ ನಟಿಸಿರುವ ‘ಸೀತಾಪಯಣ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಸನ್ ನೆಕ್ಸ್ಟ್ ನಲ್ಲಿ ಸಿನಿಮಾ ವೀಕ್ಷಣೆ ಮಾಡಿಲ್ಲ.
‘ಪೀಕಿ ಬ್ಲೈಂಡರ್ಸ್’ ಜನಪ್ರಿಯ ವೆಬ್ ಸರಣಿ ಆಸ್ಕರ್ ವಿಜೇತ ಕಿಲಿಯನ್ ಮರ್ಫಿ ನಟಿಸಿರುವ ಈ ಸರಣಿಯನ್ನು ಇದೀಗ ಸಿನಿಮಾ ಮಾಡಿದೆ, ಸಿನಿಮಾಕ್ಕೆ ‘ಪೀಕಿ ಬ್ಲೇಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್’ ಎಂದು ಹೆಸರಿಸಲಾಗಿದೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜೀತ್ ದೊಸ್ಸಾಂಜ್ ಇನ್ನೂ ಕೆಲವು ಸ್ಟಾರ್ ನಟರು ನಟಿಸಿರುವ ‘ಬಾರ್ಡರ್ 2’ ಸಿನಿಮಾ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗುತ್ತಿದೆ. ಈ ಸಿನಿಮಾ 1971ರ ಇಂಡೋ-ಪಾಕಿಸ್ತಾನ ಯುದ್ಧದ ಕುರಿತಾದ ಕಥೆಯನ್ನು ಒಳಗೊಂಡಿದೆ. ಇದೀಗ ಸಿನಿಮಾ ನೆಟ್ಫ್ಲಿಕ್ನಲ್ಲಿ ಬಿಡುಗಡೆಯಾಗಿದೆ.
ಕೊಲೆಗಳ ತನಿಖೆಗೆ ಹೋದ ಯುವಕನಿಗೆ ಚಿತ್ರ ವಿಚಿತ್ರಗಳು ಎದುರಾಗುತ್ತವೆ. ಸುರ ಮತ್ತು ಅಸುರರ ಕಥೆ ಒಳಗೊಂಡ ತೆಲುಗು ಸಿನಿಮಾ ‘ಜಟಾಧರ’ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಸುಧೀರ್ ಬಾಬು ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ ನಟಿಸಿದ್ದಾರೆ.
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಜಡೇಶ್ ಹಂಪಿ ನಿರ್ದೇಶನದ ‘ಲ್ಯಾಂಡ್ ಲಾಾರ್ಡ್’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಸಿನಿಮಾವನ್ನು ಜೀ5 ನಲ್ಲಿ ವೀಕ್ಷಿಸಲಾಗಿದೆ.





