ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ನಟಿ ಸ್ನೇಹಾ ಉಲ್ಲಾಳ್: ಕಾರಣ?

ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ನಟಿ ಸ್ನೇಹಾ ಉಲ್ಲಾಳ್: ಕಾರಣ?


ಐಶ್ವರ್ಯಾ ರೈ ಬಳಿ ಕ್ಷಮೆ ಕೇಳಿದ್ದ ನಟಿ ಸ್ನೇಹಾ ಉಲ್ಲಾಳ್: ಕಾರಣ?

ಮಂಗಳೂರು ಮೂಲದ ನಟಿ ಸ್ನೇಹಾ ಉಲ್ಲಾಳ್ (Sneha Ullal), ಬಾಲಿವುಡ್ ನ (ಬಾಲಿವುಡ್) ಜನಪ್ರಿಯ ನಟಿಯರಲ್ಲಿ ಒಬ್ಬರು. ಒಮನ್‌ನಲ್ಲಿ ಹುಟ್ಟಿದ್ದರಾದರೂ ಅವರದ್ದು ಮಂಗಳೂರು ಮೂಲ. ಸಲ್ಮಾನ್ ಖಾನ್ ನಟನೆಯ ‘ಲಕ್ಕಿ’ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಅದೂ ಅವರು ಚಿತ್ರರಂಗಕ್ಕೆ ಬರಲು ಐಶ್ವರ್ಯಾ ರೈ ಅವರೊಟ್ಟಿಗಿನ ಹೋಲಿಕೆಯೇ ಕಾರಣ. ಅವರ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳು, ಸಲ್ಮಾನ್ ಖಾನ್ ಅವರೊಂದಿಗಿನ ಒಡನಾಟ ಮತ್ತು ಐಶ್ವರ್ಯ ರೈ ಅವರ ಭೇಟಿಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಅವರು ಐಶ್ವರ್ಯಾ ರೈ ಅವರ ಬಳಿ ಕ್ಷಮೆ ಕೇಳಿರುವ ಬಗ್ಗೆ ಹೇಳಿದ್ದಾರೆ.

2005ರಲ್ಲಿ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಸ್ನೇಹ, ವಿಶ್ವ ಸುಂದರಿ ಐಶ್ವರ್ಯ ರೈ ಅವರಂತೆಯೇ ಕಾಣಿಕೆ ಎಂಬ ಕಾರಣಕ್ಕೆ ಭಾರೀ ಸುದ್ದಿಯಾಗಿದ್ದರು. ಮಾಧ್ಯಮಗಳು ತನ್ನನ್ನು ಐಶ್ವರ್ಯ ರೈ ಅವರ ತದ್ರೂಪು ಎಂದು ಕರೆಯುತ್ತಿದ್ದ ಕಾಲದಲ್ಲಿ ಸ್ನೇಹ ಅವರು ಐಶ್ವರ್ಯರನ್ನು ಭೇಟಿಯಾಗಿದ್ದರಂತೆ. ಸಂದರ್ಶನದಲ್ಲಿ ಆ ಸಂದರ್ಭವನ್ನು ನೆನಪಿಸಿಕೊಂಡಿರುವ ಸ್ನೇಹಾ ಉಲ್ಲಾಳ್ , ‘ನಾನು ಐಶ್ವರ್ಯರನ್ನು ಭೇಟಿಯಾದಾಗ ಅವರಿಗೆ ಕ್ಷಮೆ ಕೇಳಿದೆ. ಮಾಧ್ಯಮಗಳಲ್ಲಿ ಆಗುತ್ತಿದ್ದ ಹೋಲಿಕೆಗಳಿಂದಾಗಿ ಅವರು ನನ್ನ ಮೇಲೆ ಸಿಟ್ಟಾಗಿರಬಹುದು ಎಂಬ ಭಯ ನನಗಿತ್ತು. ಪ್ಲೀಸ್ ನನ್ನನ್ನು ದ್ವೇಷಿಸಬೇಡಿ ಎಂದು ಅವರಲ್ಲಿ ವಿನಂತಿಸಿದೆ’ ಎಂದು ಹೇಳಿದ್ದಾರೆ. ಆದರೆ ಐಶ್ವರ್ಯ ರೈ ಅವರು ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ನಡೆದುಕೊಂಡರು, ‘ಬಾಲಿವುಡ್ ಕುಟುಂಬಕ್ಕೆ ನಿನಗೆ ಸ್ವಾಗತ’ ಎಂದು ಐಶ್ವರ್ಯಾ ಹೇಳಿದರು ಎಂದು ಸ್ನೇಹಾ ನೆನಪು ಮಾಡಿಕೊಂಡರು.

ಇದನ್ನೂ ಓದಿ:ದುಬಾರಿಯಾದ ಸಲ್ಮಾನ್ ಖಾನ್ ಸಿನಿಮಾ; 40 ದಿನ ರೀಶೂಟ್

ಸಲ್ಮಾನ್ ಖಾನ್ ಅವರ ಬಗ್ಗೆ ಮಾತನಾಡಿದ ಸ್ನೇಹಾ, ಚಿತ್ರೀಕರಣದ ಸಮಯದಲ್ಲಿ ಅವರು ತಮಗೆ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ‘ಸಲ್ಮಾನ್, ನನ್ನ ಬಗ್ಗೆ ಎಂದಿಗೂ ಅಸಹನೆ ತೋರಲಿಲ್ಲ. ನಾನು ಆಗ ತಾನೇ ಕಾಲೇಜು ಮುಗಿಸಿ ಬಂದ ಹೊಸಬಳಗಿದ್ದೆ. ಸಲ್ಮಾನ್ ಅತ್ಯಂತ ತಾಳ್ಮೆಯಿಂದ ನನಗೆ ಎಲ್ಲವನ್ನೂ ಹೇಳಿಕೊಟ್ಟರು. ನನ್ನ ವಿರುದ್ಧ ಸಿಟ್ಟು ಪ್ರದರ್ಶಿಸಲಿಲ್ಲ, ಅಹಂ ತೋರಿಸಲಿಲ್ಲ’ ಎಂದು ಸ್ನೇಹಾ ಬಯಸುತ್ತೇನೆ.

ತಮಗೆ ನಟಿಯಾಗುವುದು ಇಷ್ಟವಿಲ್ಲ ಎಂದಿರುವ ಸ್ನೇಹಾ, ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರ ಗೆಳೆಯರು ಸ್ನೇಹಾರನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ನೋಡಿದರಂತೆ. ಅದೇ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯ ರೈ ಅವರ ಸಂಬಂಧ ಮುರಿದುಬಿದ್ದಿತ್ತು. ಸ್ನೇಹಾ ನೋಡಲು ಐಶ್ವರ್ಯಾ ರೈ ರೀತಿ ಇದ್ದೇ ಅವರಿಗೆ ‘ಲಕ್ಕಿ: ನೋ ಟೈಮ್ ಫಾರ್ ಲವ್’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಆ ಬಗ್ಗೆ ಪ್ರತಿಕ್ರಿಯಿಸಿದ ಸ್ನೇಹಾ, ‘ಅದೊಂದು ಚಿಕ್ಕವಳಾಗಿರುವುದರಿಂದ ನನಗೆ ತುಂಬಾ ಬೇಸರ ತರಲಿಲ್ಲ’.

ಸಲ್ಮಾನ್ ಖಾನ್ ಜೊತೆಗೆ ಲಾಂಚ್ ಆದರೂ ಸಹ ಸ್ನೇಹಾ ಉಲ್ಲಾಲ್ ಹೆಚ್ಚು ಯಶಸ್ವಿ ಆಗಿದ್ದು ದಕ್ಷಿಣದ ಸಿನಿಮಾಗಳಲ್ಲಿ ಸೇರಿದಂತೆ ತೆಲುಗಿನಲ್ಲಿ ‘ಉಲ್ಲಾಸಂಗಾ, ಉತ್ಸಾಹಂಗ’ ಸೇರಿದಂತೆ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ ‘ದೇವಿ’ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *