
ಈ ದಿನ ಯಾವುದೇ ಮುಖ್ಯ ಕೆಲಸ- ಕಾರ್ಯ, ಹಣಕಾಸಿನ ಮಾತುಕತೆ ಮಾಡಬೇಕು ಎಂದಿದ್ದಲ್ಲಿ ರಾಘವೇಂದ್ರ ಸ್ವಾಮಿಗಳು ಅಥವಾ ಸಾಯಿಬಾಬಾರವರನ್ನು ಸ್ಮರಿಸಿ ಮುಂದುವರಿಯಿರಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಮೇಲಿಂದ ಮೇಲೆ ಭಾವನಾತ್ಮಕವಾಗಿ ಭಾರವಾದ ಮಾತುಗಳನ್ನು ಕೇಳಿಸಿಕೊಳ್ಳುವ ಸನ್ನಿವೇಶಗಳು ಉದ್ಭವ ಆಗಲಿವೆ. ನಾಲ್ಕು ಗೋಡೆಯ ಮಧ್ಯೆ ಮಾತನಾಡಿ ಮುಗಿಸಬೇಕಾದ ವಿಷಯಗಳನ್ನು ಅದೇ ರೀತಿ ಮಾತಾಡಿ ಮುಗಿಸಿಕೊಳ್ಳಿ. ಹೆಚ್ಚು ಕಷ್ಟ ಆಗಬಹುದಾದ ವಿಷಯಗಳು ಅಥವಾ ವಿಚಾರಗಳನ್ನು ಪ್ರಭಾವ ಪೂರ್ಣ ಮಾಡುವ ಕುರಿತು ತೀರ್ಮಾನವನ್ನು ಮಾಡಲಾಗಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಉದ್ಯೋಗ ಬದಲಾವಣೆ ಮಾಡಬೇಕು ಎಂದಾದರೂ ಪ್ರಯತ್ನ ಮಾಡುತ್ತಾ ಇರುವವರಿಗೆ ನಿರೀಕ್ಷೆ ಕೂಡ ಮಾಡದಂತಹ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ಈ ಹಿಂದೆ ಹೂಡಿಕೆ ಮಾಡಿದಂಥ ಹಣದ ಮೇಲೆ ಸ್ವಲ್ಪ ಮೊತ್ತವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಲೋಚನೆ ಶುರು ಆಗಲಿದೆ. ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಿದ್ದರೆ, ಅದಕ್ಕಾಗಿ ಹಣವನ್ನು ಅಡ್ವಾನ್ಸ್ ನೀಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಗೆಳೆತನದಲ್ಲಿ ಯಾವುದೆಲ್ಲ ಸಹಜ ಎಂದು ಭಾವಿಸಿದ್ದಿರೋ ಅದು ಹಾಗಲ್ಲ ಎಂದೆನಿಸಲಿದೆ. ಅಂತರಂಗದ ವಿಚಾರಗಳನ್ನು ಸಲುಗೆಯ ಕಾರಣಕ್ಕೆ ಹಂಚಿಕೊಳ್ಳಬಾರದು ಎಂಬ ಸಲಹೆಯನ್ನು ಕುಟುಂಬ ಸದಸ್ಯರು ನೀಡಲಿದ್ದಾರೆ, ಇದು ನಿಮಗೂ ಸರಿ ಎನಿಸಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಆಲೋಚನೆ ಮಾಡಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.