ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy



ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ- ಅಮೆರಿಕದಲ್ಲಿ ಯುಎಇ ಹೂಡಿಕೆ ಹೆಚ್ಚು | Iran Launches Major Strike On Dubai Aiming To Hit United States Economy

ಅಮೆರಿಕ, ಇಸ್ರೇಲ್‌ನ ದಾಳಿಗೆ ಪ್ರತಿಯಾಗಿ ಕೊಲ್ಲಿ ದೇಶಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. ಅದರೆ ಕೊಲ್ಲಿ ದೇಶಗಳ ಪೈಕಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ (ಯುಎಇ) ಮೇಲೇ ಇರಾನ್‌ ಹೆಚ್ಚು ದಾಳಿ ನಡೆಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಅಬುಧಾಬಿ: ಅಮೆರಿಕ, ಇಸ್ರೇಲ್‌ನ ದಾಳಿಗೆ ಪ್ರತಿಯಾಗಿ ಕೊಲ್ಲಿ ದೇಶಗಳ ಮೇಲೆ ಇರಾನ್‌ ದಾಳಿ ನಡೆಸುತ್ತಿದೆ. ಅದರೆ ಕೊಲ್ಲಿ ದೇಶಗಳ ಪೈಕಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ (ಯುಎಇ) ಮೇಲೇ ಇರಾನ್‌ ಹೆಚ್ಚು ದಾಳಿ ನಡೆಸುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಆದರೆ ಇಂಥದ್ದೊಂದು ದಾಳಿಯ ಹಿಂದೆ, ಅಮೆರಿಕ ನೆಲದ ಮೇಲೆ ನೇರ ದಾಳಿ ನಡೆಸದೆಯೇ ಆ ದೇಶಕ್ಕೆ ಇರಾನ್‌ ಏಟು ನೀಡುತ್ತಿರುವ ಅಚ್ಚರಿಯ ವಿಷಯವೂ ಇದೆ.

ಹೌದು. ಕತಾರ್‌, ಸೌದಿ ಅರೇಬಿಯಾ ಸೇರಿ ಹಲವು ಕೊಲ್ಲಿ ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆ ಹೊಂದಿರುವಂತೆ ಯುಎಇನಲ್ಲೂ ಸೇನಾ ನೆಲೆ ಹೊಂದಿದೆ. ಹೀಗಾಗಿಯೇ ಆ ದೇಶದ ಮೇಲೂ ಅಮೆರಿಕ ದಾಳಿ ನಡೆಸುತ್ತಿದೆ ಎಂದೇ ಊಹಿಸಲಾಗಿತ್ತು. ಆದರೆ ಕಳೆದ 22 ದಿನಗಳಲ್ಲಿ ಯುಎಇ ಮೇಲೆ ಇರಾನ್‌ 1714 ಡ್ರೋನ್‌ಗಳು, 334 ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು 13 ಕ್ರೂಸ್ ಕ್ಷಿಪಣಿ ದಾಳಿ ನಡೆಸಿರುವುದು ಬೇರೆಯದ್ದೇ ಕಥೆ ಹೇಳುತ್ತಿವೆ.

ಯುಎಇ ಏಕೆ ಗುರಿ?:

ಅಮೆರಿಕದ ಸೇನಾ ನೆಲೆ ಇರುವ ಜೊತೆಜೊತೆಗೆ ಯುಎಇ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಔದ್ಯೋಗಿಕ ವಲಯದಲ್ಲಿ ಹೆಚ್ಚುತಿರುವ ಸಂಬಂಧವೇ ಇರಾನ್‌ನ ಈ ತೀವ್ರ ದಾಳಿಗೆ ಕಾರಣ ಎಂದು ಅಂಕಿ ಅಂಶಗಳು ಹೇಳಿವೆ.

ಡೊನಾಲ್ಡ್‌ ಟ್ರಂಪ್‌ 2ನೇ ಬಾರಿ ಅಧ್ಯಕ್ಷರಾಗಿ ಪಟ್ಟವೇರಿದ ಬಳಿಕ ಅವರು ಕೊಲ್ಲಿ ದೇಶಗಳಿಂದ ಹೆಚ್ಚೆಚ್ಚು ಹೂಡಿಕೆ ಅಪೇಕ್ಷಿಸಿದ್ದರು. ಪರಿಣಾಮ ಅಮೆರಿಕಕ್ಕೆ 2025ರಲ್ಲಿ ಹರಿದುಬಂದ 468 ಲಕ್ಷ ಕೋಟಿ ವಿದೇಶಿ ಹೂಡಿಕೆಯಲ್ಲಿ (5.2 ಟ್ರಿಲಿಯನ್‌ ಡಾಲರ್‌ ) 126 ಲಕ್ಷ ಕೋಟಿ ರು. ಕೇವಲ ಯುಎಇ ಒಂದರಿಂದಲೇ ಬಂದಿದೆ. ಇದು ಮುಂದಿನ 10 ವರ್ಷದಲ್ಲಿ ಒಟ್ಟಾರೆ ಮಾಡಲಿರುವ ಹೂಡಿಕೆ ಪ್ರಮಾಣ. ಅಂದರೆ ಇದೀಗ ಯುಎಇ ಮೇಲೆ ದಾಳಿ ಮಾಡಿದರೆ ಅದರ ಪರೋಕ್ಷ ಪರಿಣಾಮ ಅಮೆರಿಕದ ಮೇಲೂ ಆಗುತ್ತದೆ. ಇದು ಇರಾನ್‌ ದಾಳಿ ದೊಡ್ಡ ಒಳಗುಟ್ಟು.

ಇದರ ಜೊತೆಗೆ ಯುಇಎ ಜಾಗತಿಕ ಹೂಡಿಕೆಯ ಆಕರ್ಷಣೆ ಕೇಂದ್ರವೂ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಯುಎಇಗೆ ವಿಶೇಷವಾಗಿ ದುಬೈಗೆ ವಿದೇಶಿ ಕಂಪನಿ ಮತ್ತು ಹೂಡಿಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ದುಬೈ ಸರ್ಕಾರ 1,000ಕ್ಕೂ ಹೆಚ್ಚು ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ವಿದೇಶಿಗಳಿಗೆ ಶೇ.100 ಮಾಲೀಕತ್ವ ಅನುಮತಿಸಿದ ನಂತರ ಹೂಡಿಕೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದರಲ್ಲಿ ಅಮೆರಿಕದ ಕಂಪನಿಗಳ ಪಾಲು ದೊಡ್ಡದಿದೆ.

ಹೀಗಾಗಿಯೇ ಕಳೆದ 22 ದಿನಗಳಲ್ಲಿ ಯುಎಇನ ವಿಮಾನ ನಿಲ್ದಾಣ, ತೈಲ ನಿಕ್ಷೇಪ, ತೈಲ ಸಂಸ್ಕರಣಾ ಘಟಕ, ರಾಯಭಾರ ಕಚೇರಿ, ಜನವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ಇರಾನ್‌ ದಾಳಿ ನಡೆಸುತ್ತಿದೆ. ಇಂಥ ದಾಳಿ ಸ್ಥಳೀಯರಲ್ಲಿ ಮಾತ್ರವಲ್ಲದೇ ಇಲ್ಲಿ ಹೂಡಿಕೆ ಮಾಡುವವರ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕಾಗಿಯೇ ಉಳಿದೆಲ್ಲಾ ದೇಶಗಳಿಗಿಂತಲೂ ಯುಇಎ ಮೇಲೆ ಇರಾನ್‌ ಹೆಚ್ಚಿನ ದಾಳಿ ನಡೆಸುತ್ತಿದೆ ಎನ್ನಲಾಗಿದೆ.

ಯುಎಇ ಮೇಲಿನ ದಾಳಿ ರಹಸ್ಯ

– ಅಮೆರಿಕದ ಮೇಲೆ ದಾಳಿ ಮಾಡದೆಯೇ ಟ್ರಂಪ್‌ಗೆ ಇರಾನ್‌ ಏಟು

– ಅಮೆರಿಕದಲ್ಲಿ ಇತರ ದೇಶಕ್ಕಿಂತ ಯುಎಇ ಅತಿ ಹೆಚ್ಚು ಹೂಡಿಕೆ

– ಹೀಗಾಗಿ ಯುಎಇ ಮೇಲೆ ದಾಳಿ ಮೂಲಕ ಅಮೆರಿಕಕ್ಕೆ ಪಾಠ

– ಯುಇಎ ಮೇಲೆ ಇರಾನ್‌ 1714 ಡ್ರೋನ್‌, 347 ಕ್ಷಿಪಣಿ ದಾಳಿ



Source link

Leave a Reply

Your email address will not be published. Required fields are marked *