Headlines

ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities

ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities



ಅಣುಸ್ಥಾವರ ಮೇಲೆ ಇರಾನ್‌-ಇಸ್ರೇಲ್‌ ದಾಳಿ-ಪ್ರತಿದಾಳಿ- ನಟಾನ್ಜ್‌ ಸ್ಥಾವರಕ್ಕೆ ಇಸ್ರೇಲ್‌ ಕ್ಷಿಪಣಿ | Iran Israel Exchange Strikes On Nuclear Facilities

ಪರಸ್ಪರ ಸೇನಾ ನೆಲೆ, ರಾಯಭಾರ ಕಚೇರಿ, ತೈಲ, ಅನಿಲ ಘಟಕಗಳ ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಇಸ್ರೇಲ್‌ ಮತ್ತು ಇರಾನ್‌, ಶನಿವಾರ ಪರಸ್ಪರರ ಪರಮಾಣು ಘಟಕಗಳ ಮೇಲೆ ದಾಳಿ ಯತ್ನ ನಡೆಸಿವೆ.

ದುಬೈ: ಪರಸ್ಪರ ಸೇನಾ ನೆಲೆ, ರಾಯಭಾರ ಕಚೇರಿ, ತೈಲ, ಅನಿಲ ಘಟಕಗಳ ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಇಸ್ರೇಲ್‌ ಮತ್ತು ಇರಾನ್‌, ಶನಿವಾರ ಪರಸ್ಪರರ ಪರಮಾಣು ಘಟಕಗಳ ಮೇಲೆ ದಾಳಿ ಯತ್ನ ನಡೆಸಿವೆ.

ಮಧ್ಯಪ್ರಾಚ್ಯ ಯುದ್ಧದಲ್ಲಿ ಪರಮಾಣು ದಾಳಿಯ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಕಳವಳದ ಬೆನ್ನಲ್ಲೇ ಈ ಆಘಾತಕಾರಿ ಬೆಳವಣಿಗೆ ನಡೆದಿದೆ.

ಇಸ್ರೇಲ್‌ನಿಂದ ನಟಾನ್ಜ್‌ ಗುರಿ:

ಅಣ್ವಸ್ತ್ರಗಳು ಇರಾನ್‌ ಕೈವಶವಾಗದಂತೆ ತಡೆಯುವುದೇ ನಮ್ಮ ಗುರಿ ಎಂದು ಹೇಳಿ ಇರಾನ್‌ ಮೇಲೆ ಯುದ್ಧ ಆರಂಭಿಸಿದ್ದ ಅಮೆರಿಕ ಮತ್ತು ಇಸ್ರೇಲ್‌, ಶನಿವಾರ ಶತ್ರು ದೇಶದ ರಾಜಧಾನಿ ಟೆಹ್ರಾನ್‌ನಿಂದ 220 ಕಿ.ಮೀ ದೂರದ ನಟಾನ್ಜ್‌ ಪರಮಾಣು ಘಟಕದ ಮೇಲೆ ದಾಳಿ ನಡೆಸಿವೆ. ಇದು ಭಾರೀ ಆತಂಕಕ್ಕೆ ಕಾರಣವಾಗಿದೆಯಾದರೂ, ಸದ್ಯ ಅಲ್ಲಿ ವಿಕಿರಣ ಸೋರಿಕೆಯ ಯಾವುದೇ ಸುಳಿವು ಕಂಡುಬಂದಿಲ್ಲ.

ಡಿಮೋನ್‌ ಮೇಲೆ ಪ್ರತಿದಾಳಿ:

ಈ ದಾಳಿಯ ಬೆನ್ನಲ್ಲೇ ಇಸ್ರೇಲ್‌ ಅತಿದೊಡ್ಡ ಯುರೇನಿಯಂ ಸಂಸ್ಕರಣಾ ಘಟಕ ಇರುವ ಡಿಮೋನ್‌ ನಗರದ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಶಾಲಾ ಕಟ್ಟಡವೊಂದು ಕುಸಿದು ಬಿದ್ದಿದ್ದು 20 ಜನರಿಗೆ ಗಾಯಗಳಾಗಿವೆ ಎಂದು ಇಸ್ರೇಲ್‌ ಹೇಳಿದೆ. ಆದರೆ ಪರಮಾಣು ಘಟಕಕ್ಕೆ ಹಾನಿಯಾದ ಬಗ್ಗೆ ಅದು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಪರಮಾಣು ಘಟಕಕ್ಕೆ ಹಾನಿ ಆಗಿರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ತನ್ನ ಸಂಶೋಧನಾ ಕೇಂದ್ರ ಎಂದು ಹೇಳಿಕೊಳ್ಳುವ ಘಟಕವನ್ನು ಇಸ್ರೇಲ್‌ ತನ್ನ ಅಣ್ವಸ್ತ್ರಗಳಿಗೆ ಅಗತ್ಯವಾದ ಪ್ಲುಟೋನಿಯಂ ಸಂಸ್ಕರಣೆಗೆ ಬಳಸುತ್ತಿದೆ ಎಂಬ ಆರೋಪವಿದೆ.

ಇರಾನ್‌ನ ತನ್ನ ಬಳಿ ರಹಸ್ಯವಾಗಿ ಸಂಗ್ರಹಿಸಿರುವ 400 ಕೆಜಿಯಷ್ಟು ಯುರೇನಿಯಂ ಅನ್ನು ಈಗಾಗಲೇ ಶೇ.60ರಷ್ಟು ಸಂಸ್ಕರಣೆ ಮಾಡಿದೆ. ಅದು ಶೇ.90ರ ಮಟ್ಟ ತಲುಪಿದರೆ, ಬಳಿಕ ಕೆಲವೇ ದಿನಗಳಲ್ಲಿ ಕನಿಷ್ಠ 10 ಪರಮಾಣು ಬಾಂಬ್‌ ಸಿದ್ಧಪಡಿಸುವ ಸಾಮರ್ಥ್ಯ ಇರಾನ್‌ಗೆ ಲಭ್ಯವಾಗುತ್ತದೆ ಎಂಬುದು ಅಮೆರಿಕದ ಆರೋಪ. ಆದರೆ ಇದು ಕೇವಲ ನಾಗರಿಕ ಉದ್ದೇಶದ್ದು ಎಂಬುದು ಇರಾನ್‌ನ ವಾದ.



Source link

Leave a Reply

Your email address will not be published. Required fields are marked *