ಇರಾನ್‌ ತೈಲದ ಮೇಲಿನ ಅಮೆರಿಕ ನಿರ್ಬಂಧ ತೆರವು – ವೈರಿ ದೇಶದ ಬಗ್ಗೆ ಮೆತ್ತಗಾದರೆ ಟ್ರಂಪ್‌ ? | Donald Trump Softens Stance On Rival As United States Lifts Sanctions On Iran Oil

ಇರಾನ್‌ ಕಚ್ಚಾತೈಲ ಮಾರಾಟದ ಮೇಲಿನ ನಿರ್ಬಂಧವನ್ನು ಅಮೆರಿಕ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ. ಯುದ್ಧ ಆರಂಭವಾದ ಬಳಿಕ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ನಿಂದ 120 ಡಾಲರ್‌ವರೆಗೂ ತಲುಪಿದ ಹಿನ್ನೆಲೆಯಲ್ಲಿ, ದರ ಇಳಿಕೆಯ ಕ್ರಮವಾಗಿ ಅಮೆರಿಕ ಸರ್ಕಾರ ಈ ಕ್ರಮ

ವಾಷಿಂಗ್ಟನ್‌: ಸಮುದ್ರದಲ್ಲಿ ನಿಂತಿರುವ ಹಡಗುಗಳಲ್ಲಿನ ಇರಾನ್‌ ಕಚ್ಚಾತೈಲ ಮಾರಾಟದ ಮೇಲಿನ ನಿರ್ಬಂಧವನ್ನು ಅಮೆರಿಕ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ. ಯುದ್ಧ ಆರಂಭವಾದ ಬಳಿಕ ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 70 ಡಾಲರ್‌ನಿಂದ 120 ಡಾಲರ್‌ವರೆಗೂ ತಲುಪಿದ ಹಿನ್ನೆಲೆಯಲ್ಲಿ, ದರ ಇಳಿಕೆಯ ಕ್ರಮವಾಗಿ ಅಮೆರಿಕ ಸರ್ಕಾರ ಈ ಕ್ರಮ ಕೈಗೊಂಡಿದೆ.

ಅಮೆರಿಕ ಸರ್ಕಾರದ ಈ ಕ್ರಮದಿಂದಾಗಿ ವಿವಿಧ ದೇಶಗಳ ಹಡಗಿನಲ್ಲಿ ತುಂಬಿಡಲಾಗಿದ್ದ 14 ಕೋಟಿ ಬ್ಯಾರೆಲ್‌ಗಳಷ್ಟು ತೈಲ ಖರೀದಿಗೆ ಲಭ್ಯವಾಗಲಿದೆ. ಈ ನಿರ್ಬಂಧ ತೆರವು ಮಾ.21ರಿಂದ ಆರಂಭವಾಗಿ ಏ.19ರವರೆಗೆ ಇರಲಿದೆ ಎಂದು ಅಮೆರಿಕ ಹೇಳಿದೆ. ಜೊತೆಗೆ ಈ ವಿನಾಯ್ತಿ ಈಗಾಗಲೇ ತೈಲ ಬಾವಿಯಿಂದ ಹೊರತೆಗೆದು ಸಂಚಾರಕ್ಕೆ ಸಿದ್ಧವಾಗಿರುವ ತೈಲಕ್ಕೆ ಮಾತ್ರ ಅನ್ವಯ, ಹೊಸ ಖರೀದಿ ಅಥವಾ ಉತ್ಪಾದನೆಗೆ ಅನ್ವಯವಾಗದು ಎಂದು ಅಮೆರಿಕ ಹೇಳಿದೆ.

ಅಮೆರಿಕ ಸರ್ಕಾರದ ವಿನಾಯ್ತಿಯಿಂದಾಗಿ ಮುಂದಿನ ಎರಡು ವಾರಗಳ ಕಾಲ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಸಹಜ ಸ್ಥಿತಿಯಲ್ಲಿ ಮುಂದುವರೆಯುವ ಆಶಾಭಾವನೆ ವ್ಯಕ್ತವಾಗಿದೆ. ಇದೆ ಕಾರಣಕ್ಕಾಗಿ ಇತ್ತೀಚೆಗೆ ರಷ್ಯಾದ ತೈಲ ಖರೀದಿಗೆ ಅಮೆರಿಕ 30 ದಿನಗಳ ವಿನಾಯ್ತಿ ನೀಡಿತ್ತು.

ನಮ್ಮ ತೈಲ ಹಡಗು ಸಮುದ್ರದಲ್ಲಿಲ್ಲ- ಇರಾನ್‌:

ಆದರೆ ನಮ್ಮ ಯಾವುದೇ ತೈಲವೂ ಸಮುದ್ರದಲ್ಲಿ ಇಲ್ಲ ಅಥವಾ ಅಂತಾರಾಷ್ಟ್ರೀಯ ಖರೀದಿದಾರರಿಗೆ ಪೂರೈಸಲು ನಮ್ಮ ಬಳಿ ಹೆಚ್ಚುವರಿ ತೈಲವೂ ಇಲ್ಲ ಎಂದು ಇರಾನ್‌ ಇಂಧನ ಸಚಿವಾಲಯ ತಿರುಗೇಟು ನೀಡಿದೆ. ಹೀಗಾಗಿ ಅಮೆರಿಕದ ಆಫರ್‌ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬ ಪ್ರಶ್ನೆ ಎದ್ದಿದೆ.

ಅಮೆರಿಕ ನಡೆಗೇನು ಕಾರಣ?

– ಜಾಗತಿಕವಾಗಿ ಕಚ್ಚಾತೈಲದ ದರ ಇಳಿಸಲು ಅಮೆರಿಕ ಕ್ರಮ

– ಇರಾನ್‌ ಒಪ್ಪಿದರೆ 14 ಕೋಟಿ ಬ್ಯಾರೆಲ್‌ ತೈಲ ಮಾರಾಟಕ್ಕೆ

– ಆದರೆ ನಮ್ಮ ತೈಲ ಹಡಗು ಸಮುದ್ರದಲ್ಲಿಲ್ಲ ಎಂದ ಇರಾನ್‌

Source link

Leave a Reply

Your email address will not be published. Required fields are marked *