
ಬಾಲಿವುಡ್ ನಟ ಸಂಜಯ್ ದತ್ (ಸಂಜಯ್ ದತ್) ಅವರಿಗೆ ‘ಧುರಂಧರ’ ಮತ್ತು ‘ಧುರಂಧರ 2’ (ಧುರಂಧರ 2) ಸಿನಿಮಾದಿಂದ ಖ್ಯಾತಿ. ಈ ಚಿತ್ರಗಳಲ್ಲಿ ಅವರು ನಿರ್ವಹಿಸುತ್ತಿರುವ ಪಾಕಿಸ್ತಾನಿ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುಬೇಡಿಕೆಯ ನಟನಾಗಿರುವ ಅವರು ಈ ಪಾತ್ರಕ್ಕಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ, ಸಂಜಯ್ ದತ್ ಅವರಿಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ (ಸಂಜಯ್ ದತ್ ಸಂಭಾವನೆ) ನೀಡಲಾಗಿದೆ.
‘ಧುರಂಧರ 2’ ಸಿನಿಮಾದಲ್ಲಿ ಸಂಜಯ್ ದತ್ ಅವರು ಪಾಕಿಸ್ತಾನದ ಪೊಲೀಸ್ ಅಧಿಕಾರಿ ಎಸ್‌ಪಿ ಚೌಧರಿ ಅಸ್ಲಂ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರವು ಕರಾಚಿಯ ನೈಜ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಖಾನ್ ಅವರ ಜೀವನದಿಂದ ಪ್ರೇರಿತವಾಗಿದೆ. ಲಿಯಾರಿ ಪ್ರದೇಶದ ಭೂಗತ ಲೋಕ ಮತ್ತು ಮಾದಕವಸ್ತು ಮಾಫಿಯಾವನ್ನು ಮಟ್ಟ ಹಾಕಲು ರಚಿಸಲಾದ ಲಿಯಾರಿ ಟಾಸ್ಕ್ ಫೋರ್ಸ್ ನೇತೃತ್ವವನ್ನು ಚೌಧರಿ ಅಸ್ಲಂ ವಹಿಸಿದ್ದರು.
ಆ ಪಾತ್ರಕ್ಕೆ ಸಂಜಯ್ ದತ್ ಅವರು ಜೀವ ತುಂಬಿದ್ದಾರೆ. ಅವರ ಗಡುಸಾದ ಧ್ವನಿ, ಖಡಕ್ ಡೈಲಾಗ್ ಡೆಲಿವರಿ ಮತ್ತು ಮ್ಯಾನರಿಸಂ ಕಾರಣದಿಂದ ಆ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಬೇರೆ ಪಾತ್ರಗಳ ರೀತಿ ಈ ಪಾತ್ರ ಕೂಡ ಸಿನಿಮಾದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಈ ಫ್ರಾಂಚೈಸಿಯ ಎರಡು ಭಾಗಗಳಿಗಾಗಿ ಸಂಜಯ್ ದತ್ ಅವರಿಗೆ ಒಟ್ಟು 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತದೆ.
ಕಲಾವಿದರ ಸಂಭಾವನೆ, ಮೇಕಿಂಗ್ ಖರ್ಚು ಎಲ್ಲವೂ ಸೇರಿ ಅದ್ದೂರಿ ಬಜೆಟ್‌ನಲ್ಲಿ ‘ಧುರಂಧರ 2’ ಸಿನಿಮಾ ಮೂಡಿಬಂದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಕೇವಲ 3 ದಿನಗಳಲ್ಲಿ ಈ ಸಿನಿಮಾ ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿಯನ್ನು ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ
ಯುಗಾದಿ, ಈದ್ ಹಬ್ಬದ ರಜೆ ಹಾಗೂ ವೀಕೆಂಡ್ ಜೊತೆಯಾಗಿ ಬಂದ ಭಾರತದಲ್ಲಿ ಕಲೆಕ್ಷನ್ ಚೆನ್ನಾಗಿ ಆಗುತ್ತಿದೆ. ಭಾರತೀಯ ಸುಮಾರು ಇದುವರೆಗೆ 339 ಕೋಟಿ ರೂಪಾಯಿಗಳಿಕೆ ಮಾಡಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಮ್‌ಪಾಲ್ ಅವರಂತಹ ಘಟಾನುಘಟಿ ಕಲಾವಿದರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.