Headlines

ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್

ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್

ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್

ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್, ಟೂರ್ನಿ ಆರಂಭಕ್ಕೆ ಇನ್ನು ಕೆಲ ದಿನ ಮಾತ್ರ ಬಾಕಿ ಅಷ್ಟರಲ್ಲೇ ಆರ್‌ಸಿಬಿ ಫ್ರಾಂಚೈಸಿ ಮಾರಾಟದಲ್ಲಿ ಕೆಲ ಅಚ್ಚರಿ ಬೆಳವಣಿಗೆ ನಡೆದಿದೆ.

2026ರ ಐಪಿಎಲ್ ಟೂರ್ನಿಗೆ ಆರ್‌ಸಿಬಿ ಭರ್ಜರಿ ತಯಾರಿ ನಡೆಸುತ್ತಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಸತತ 2ನೇ ಬಾರಿ ಟ್ರೋಫಿ ಗೆಲ್ಲಲು ಆರ್‌ಸಿಬಿ ಸತತ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಸೈಲೆಂಟ್ ಆಗಿದ್ದ ಫ್ರಾಂಚೈಸಿ ಮಾರಾಟದಲ್ಲಿ ಕೆಲ ಮಹತ್ವದ ಬೆಳವಣಿಗೆ ನಡೆದಿದೆ.

ಆರ್‌ಸಿಬಿ ಫ್ರಾಂಚೈಸಿ ಬಿಡ್ಡಿಂಗ್ ಮಾರಾಟ ಸುದ್ದಿ ಹೊರಬೀಳುತ್ತಿದ್ದಂತೆ ಹಲವು ಸಂಸ್ಥೆಗಳು ಖರೀದಿಗೆ ಮುಂದಾಗಿತ್ತು. ಆದರೆ ಮೌಲ್ಯ ಹೆಚ್ಚಾಗುತ್ತಿದ್ದಂತೆ ಕೆಲ ಸಂಸ್ಥೆಗಳು ಬಿಡ್ಡಿಂಗ್‌ನಿಂದ ಹಿಂದೆ ಸರಿದಿತ್ತು. ಕೇವಲ 2 ಕಂಪನಿಗಳು ಮಾತ್ರ ಬಿಡ್ಡಿಂಗ್ ಪೂಲ್‌ನಲ್ಲಿ ಬಾಕಿ ಉಳಿದಿತ್ತು. ಇದೀಗ ಆರ್‌ಸಿಬಿ ಖರೀದಿಸಲು ಆದಿತ್ಯ ಬಿರ್ಲಾ ಗ್ರೂಪ್ ಮುಂದಾಗಿದೆ. ಆಧಿತ್ಯ ಬಿರ್ಲಾ ಗ್ರೂಪ್ ಬಿಡ್ಡಿಂಗ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.

ಆದಿತ್ಯ ಬಿರ್ಲಾ ಗ್ರೂಪ್ ಹಾಗೂ ಅಮೆರಿಕದ ಪ್ರತಿಷ್ಠಿತ ಕ್ರೀಡಾ ಹೂಡಿಕೆ ಕಂಪನಿ ಕಟ್ಟಿ ಬೆಳೆಸಿರುವ ಡೇವಿಡ್ ಬ್ಲಿಟ್ಜರ್ ಜಂಟಿಯಾಗಿ ಆರ್‌ಸಿಬಿ ಬಿಡ್ಡಿಂಗ್‌ನಲ್ಲಿ ಧುಮುಕಿದೆ. ಆರ್‌ಸಿಬಿ ಹಾಗೂ ಆರ್‌ಸಿಬಿ ಮಹಿಳಾ ತಂಡ ಎರಡೂ ತಂಡಗಳನ್ನು ಖರೀದಿಸಲು ಬಿಡ್ಡಿಂಗ್ ಸಲ್ಲಿಸಿದೆ. ಇದರಿಂದ ಆರ್‌ಸಿಬಿ ಖರೀದಿ ಪೈಪೋಟಿ ಮತ್ತೆ ತೀವ್ರಗೊಂಡಿದೆ.

ಆರ್‌‌ಸಿಬಿ ಫ್ರಾಂಚೈಸಿ ಖರೀದಿಸಲು ಸದ್ಯ ಮೂರು ಬಿಡ್ಡರ್ಸ್ ಕಣದಲ್ಲಿದ್ದಾರೆ. ಮಣಿಪಾಲ್ ಗ್ರೂಪ್‌ನ ರಂಜನ್ ಪೈ ಹಾಗೂ ಅಮೀಜ್ ಪ್ರೇಮ್‌ಜಿ ಅವರ ಪ್ರೇಮ್‌ಜಿ ಇನ್ವೆಸ್ಟ್ ಅಧಿಕೃತವಾಗಿ ಆರ್‌ಸಿಬಿ ಖರೀದಿಸಲು ಬಿಡ್ಡಿಂಗ್ ಸಲ್ಲಿಸಿದೆ. ಇದೀಗ ಆದಿತ್ಯ ಬಿರ್ಲಾ ಹಾಗೂ ಡೇವಿಡ್ ಬ್ಲಿಟ್ಜರ್ ಜಂಟಿಯಾಗಿ ಬಿಡ್ಡಿಂಗ್ ಸಲ್ಲಿಸಿದ್ದಾರೆ. ಈ ಮೂಲಕ 3 ಪ್ರಮುಖ ಬಿಡ್ಡರ್ ಕಣದಲ್ಲಿದ್ದಾರೆ.

ಆರ್‌ಸಿಬಿ ಮಾಲೀಕ ಸಂಸ್ಥೆ ಡಿಯಾಜಿಯೋ ಆರ್‌ಸಿಬಿ ಮಾರಾಟ ಮಾಡುವ ಮೂಲಕ ಬರೋಬ್ಬರಿ 16000 ಕೋಟಿ ರೂಪಾಯಿಯಿಂದ 18,000 ಕೋಟಿ ರೂಪಾಯಿ ನಿರೀಕ್ಷೆಯಲ್ಲಿದೆ. ಸದ್ಯ ಮೂರನೇ ಬಿಡ್ಡರ್ ಕಣದಲ್ಲಿರುವ ಕಾರಣ ದಾಖಲೆ ಮೊತ್ತಕ್ಕೆ ಮಾರಾಟವಾದರೂ ಅಚ್ಚರಿಯಿಲ್ಲ. ಡಿಯಾಜಿಯೋ ಕನಿಷ್ಠ 2 ಬಿಲಿಯನ್ ಡಾಲರ್ ನಿರೀಕ್ಷೆಯಲ್ಲಿದೆ.

ಆದಿತ್ಯ ಬಿರ್ಲಾ ಗ್ರೂಪ್ ಎರಡು ಫ್ರಾಂಚೈಸಿ ಖರೀದಿಗೆ ಬಿಡ್ಡಿಂಗ್ ಸಲ್ಲಿಸಿದೆ. ರಾಜಸ್ತಾನ ರಾಯಲ್ಸ್ ಹಾಗೂ ಆರ್‌ಸಿಬಿ ಎರಡೂ ಫ್ರಾಂಚೈಸಿಗೆ ಬಿಡ್ಡಿಂಗ್ ಮಾಡಲಿದೆ. ಆದರೆ ಬಿಸಿಸಿಐ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಎಕಕಾಲದಲ್ಲಿ ಎರಡು ಫ್ರಾಂಚೈಸಿಯಲ್ಲಿ ಪಾಲು ಪಡೆಯುವಂತಿಲ್ಲ. ಆದಿತ್ಯ ಬಿರ್ಲಾ ಎರಡೂ ಫ್ರಾಂಚೈಸಿಗೆ ಬಿಡ್ಡಿಂಗ್‌ ಸಲ್ಲಿಸಿದ್ದಾರೆ. ಎರಡೂ ಬಿಡ್ಡಿಂಗ್ ಗೆದ್ದರೂ ಒಂದನ್ನು ಉಳಿಸಿಕೊಂಡು ಮತ್ತೊಂದು ಬಿಟ್ಟುಕೊಡಬೇಕು.

ಎರಡು ಫ್ರಾಂಚೈಸಿಗೆ ಬಿಡ್ಡಿಂಗ್ ಸಲ್ಲಿಸಿದ ಬಿರ್ಲಾ ಗ್ರೂಪ್

Source link

Leave a Reply

Your email address will not be published. Required fields are marked *