
ಉಡುಪಿ, ಮಾರ್ಚ್ 22: ಜಿಲ್ಲೆಯ ರಾಜಕೀಯದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ವಾಗ್ವಾದ ಜೋರಾಗಿದೆ. ಮಾಜಿ ಶಾಸಕ ರಘುಪತಿ ಭಟ್ ಹಾಲಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಡಾನಿಡಿಯೂರು (ಉಡುಪಿ) ಗ್ರಾಮದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ತಾನು ಸಲ್ಲಿಸಿದ ಸಿಂಗಲ್ ಲೇಔಟ್ ಅರ್ಜಿ ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗುತ್ತಿದೆ ಎಂದು ಭಟ್ ಆರೋಪಿಸಿದ್ದಾರೆ.
ಶಾಸಕರ ಒತ್ತಡದಿಂದಲೇ ಅನುಮತಿ ಸಿಗುತ್ತಿಲ್ಲವೆಂದ ರಘುಪತಿ ಭಟ್
2024ರ ಮಾರ್ಚ್ 20ರಂದು ಅರ್ಜಿ ಸಲ್ಲಿಸಿದ್ದರೂ, ಮೂರು ತಿಂಗಳಿನಲ್ಲಿ ಸಿಗಬೇಕಿದ್ದರೂ ಎರಡು ವರ್ಷವಾದರೂ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಒತ್ತಡದಿಂದಲೇ ಅನುಮತಿ ನೀಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದಲ್ಲದೆ, 30 ದಿನಗಳಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಅದನ್ನು ಪಾಲಿಸಿಲ್ಲ ಅವರ ಮತ್ತೊಂದು ಆಕ್ಷೇಪ. ಸಿ.ಆರ್.ಝೆಡ್, ಜೋನ್ ಚೇಂಜ್ ಹಾಗೂ ಕಮರ್ಷಿಯಲ್ ಕನ್ವರ್ಷನ್ ಸೇರಿದಂತೆ ಅಗತ್ಯ ಅನುಮತಿಗಳು ಲಭ್ಯವಿದ್ದರೂ, ನಗರಾಭಿವೃದ್ಧಿ ಪ್ರಾಧಿಕಾರದ ಪ್ರಕ್ರಿಯೆಯನ್ನು ತಡೆಯಲಾಗಿದೆ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ
‘ರಾಜಕೀಯವಲ್ಲ, ಇದು ವೈಯಕ್ತಿಕ ಹೋರಾಟ’
ಈ ಹಿನ್ನೆಲೆ ಶಾಸಕನ ಧೋರಣೆಯನ್ನು ಖಂಡಿಸಿ ಸೋಮವಾರದಿಂದ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ನಿರಂತರ ಧರಣಿ ನಡೆಸುವುದಾಗಿ ರಘುಪತಿ ಭಟ್ ಘೋಷಿಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇನೆ. ಇದು ರಾಜಕೀಯ ಹೋರಾಟವಲ್ಲ, ವೈಯಕ್ತಿಕ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಎಂದು ಹೇಳಲಾಗಿದೆ.
ಉಡುಪಿಯಲ್ಲಿ ಇಂತಹ ರಾಜಕೀಯ ದ್ವೇಷದ ಘಟನೆಗಳ ಹಿಂದೆ ಕಂಡಿಲ್ಲ ಎಂದ ಅವರು, ಬೇರೆ ಪಕ್ಷದವರಾದರೂ ವೈಯಕ್ತಿಕ ಉದ್ಯಮಕ್ಕೆ ಅಡ್ಡಿಪಡಿಸುವ ಸಂಪ್ರದಾಯ ಇಲ್ಲ. ಇನ್ನು, ಯಶ್ ಪಾಲ್ ಸುವರ್ಣ ಶಾಸಕರಾಗಲು ತಾನು ಸಹಕಾರ ನೀಡಿದ್ದೇನೆ ಎಂದು ಹೇಳಿದ ಭಟ್, ಈಗ ಅದೇ ವ್ಯಕ್ತಿಯಿಂದ ಕಾಣಿಸಿಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.