ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ನಿಲ್ಲುವ ಹಂತ ತಲುಪಿದೆ. ಮದುವೆ ಮಂಟಪದಲ್ಲಿ ಸುನಿಲ್, ಜೈದೇವನ ಶಿಷ್ಯ ಎಂಬ ಸತ್ಯ ಭೂಮಿಕಾ ಮತ್ತು ಗೌತಮ್‌ಗೆ ತಿಳಿದಿದ್ದು, ಜೈದೇವನ ಕುತಂತ್ರವನ್ನು ಬಯಲು ಮಾಡಲು ಭೂಮಿಕಾ ಸಿದ್ಧಳಾಗಿದ್ದಾಳೆ. ಈ ಮದುವೆ ನಿಂತರೆ ಮಲ್ಲಿಯ ಮುಂದಿನ ಗತಿ ಏನು ಎಂಬ ಕುತೂಹಲ ಮೂಡಿದೆ.
ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ಅಸಲಿ ಆಟ ಶುರುವಾಗಿದೆ. ಮಲ್ಲಿಗೆ ಇನ್ನೇನು ಸುನಿಲ್ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಆತನ ಅಸಲಿಯತ್ತು ಭೂಮಿಕಾ ಮತ್ತು ಗೌತಮ್ ಎದುರು ಬಯಲಾಗಿದೆ.

ಸುನಿಲ್ನನ್ನು ನೋಡಿದ ಪಾರ್ಥ, ಅವನು ಜೈದೇವನ ಶಿಷ್ಯ ಎಂದು ಹೇಳಿದರೆ, ಅತ್ತ ಆಕಾಶ್ ಸುನೀಲ್ನ ಅಸಲಿಯತ್ತನ್ನು ಪತ್ತೆ ಮಾಡಿ ಅಮ್ಮನಿಗೆ ತಿಳಿಸಿದ್ದಾನೆ. ಭೂಮಿಕಾ ಬೆಂಕಿಯಾಗಿದ್ದಾಳೆ.

ಜೈದೇವನ ಬಳಿ ಹೋಗಿ ಕೆಂಡಾಮಂಡಲವಾದ ಭೂಮಿಕಾ, ಇನ್ನೊಬ್ಬ ಗಂಡಸನ್ನು ಹೆಂಡತಿಯ ಹಿಂದೆ ಬಿಟ್ಟವ ನಿನ್ನಂಥವರನ್ನು ಗಂಡಸು ಅನ್ನುವುದಿಲ್ಲ ಎಂದು ಕೆಂಡ ಕಾರಿದ್ದಾಳೆ. ಜೈದೇವ ಎದುರಾಡಲು ಹೋದಾಗ, ಏ.. ನೀನೇನು ಅವಳ ಮದುವೆ ನಿಲ್ಲಿಸುತ್ತಿ, ನಾನೇ ನಿಲ್ಲಿಸುತ್ತೇನೆ ಎಂದು ಹೋಗಿದ್ದಾಳೆ.

ಜೈದೇವನ ಕೆಟ್ಟ ದಿನ ಅಂತೂ ಬಂದಾಯ್ತು. ಆದರೆ ಮಲ್ಲಿಯ ಗತಿ ಏನು? ಸುನಿಲ್ ಈಗಾದ್ರೂ ಬಾಯಿ ಬಿಟ್ಟು ನಾನು ಮಲ್ಲಿಯನ್ನು ನಿಜವಾಗಿಯೂ ಪ್ರೀತಿಸ್ತೇನೆ ಎಂದು ಹೇಳ್ತಾನಾ? ಒಂದು ವೇಳೆ ಈ ಮದುವೆ ನಿಂತರೆ ಮಲ್ಲಿಯ ಸ್ಥಿತಿ ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ.

ಆದರೆ, ಇದರ ನಡುವೆಯೇ, ಅಷ್ಟು ಬುದ್ಧಿವಂತರಾಗಿರುವ ಭೂಮಿಕಾ ಮತ್ತು ಗೌತಮ್‌ಗೆ ಸುನೀಲ್ ಅಸಲಿಯತ್ತು ಇಷ್ಟು ದಿನ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಏಕೆ ಎನ್ನುವುದು ವೀಕ್ಷಕರ ಪ್ರಶ್ನೆ.

ಅಂತೂ ದಿನೇ ದಿನೇ ಸೀರಿಯಲ್ ಕುತೂಹಲ ಕೆರಳಿಸುತ್ತಾ ಇದೆ. ಜೈದೇವ ಸೋಲುವುದು ಗ್ಯಾರೆಂಟಿ. ಆದರೆ ಮಲ್ಲಿ ಬದುಕಿನಲ್ಲಿ ಮತ್ತೊಮ್ಮೆ ಮೋಸ ಆಗಬಾರದು, ಸುನಿಲ್ ಎಲ್ಲ ಸತ್ಯ ಹೇಳಬೇಕು. ಮಲ್ಲಿಯ ಮದುವೆ ಆಗಬೇಕು ಎನ್ನುವುದು ವೀಕ್ಷಕರ ಆಶಯ.

Source link
Amruthadhaare: ನೀನು ಗಂಡಸೇ ಅಲ್ಲ- ಭೂಮಿಕಾ ಬೆಂಕಿ; ಮಲ್ಲಿ ಮದುವೆ ನಿಲ್ಲಿಸಲು ಹೋಗೇ ಬಿಟ್ಟಳು