ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ, ತಮ್ಮ ಪತ್ನಿ ಅಕ್ಷತಾ ಜೊತೆಗಿನ ಸಂದರ್ಶನವೊಂದರಲ್ಲಿ ತಮ್ಮ ಮೊದಲ ರಾತ್ರಿ ಮೂರು ದಿನಗಳ ಕಾಲ ವಿಳಂಬವಾದ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಬಿಗ್ ಬಾಸ್ ನಂತರ ತಮಗೆ ಸಿಗುತ್ತಿರುವ ಸಿನಿಮಾ ಹಾಗೂ ವೆಬ್ ಸೀರೀಸ್ ಆಫರ್‌ಗಳ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಬಿಗ್ಬಾಸ್ 10ರ ಖ್ಯಾತಿಯ ವಿನಯ್ ಗೌಡ ಬಿಗ್ಬಾಸ್ನಿಂದ ಬಂದ ಮೇಲೆಯೂ ಸಕತ್ ಡಿಮಾಂಡ್ ಕುದುರಿಸಿಕೊಂಡಿದ್ದಾರೆ. ಬಿಗ್ಬಾಸ್ನಲ್ಲಿ ಸದಾ ಜಗಳದಿಂದಲೇ ಫೇಮಸ್ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಮೂರನೇ ರನ್ನರ್ ಅಪ್ ಆಗಿ ಮಿಂಚಿದರು.

ಇದೀಗ ಅವರು ತಮ್ಮ ಬದುಕಿನ ಹಲವು ವಿಷಯಗಳ ಬಗ್ಗೆ ಬಾಸ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಈ ಷೋಗೆ ಅವರ ಪತ್ನಿ ಅಕ್ಷತಾ ಗೌಡ ಕೂಡ ಹಾಜರಾಗಿದ್ದರು. ಪ್ರೀತಿಸಿ ಮದುವೆಯಾಗಿದೆ ಈ ಜೋಡಿ. ಈ ಸಮಯದಲ್ಲಿ ತಮ್ಮ ಮದುವೆ ಮತ್ತು ಫಸ್ಟ್ ನೈಟ್ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ ವಿನಯ್ ಗೌಡ.

ಮದುವೆಯಾಗಿ ಮೂರು ದಿನ ಆದ್ರೂ ಫಸ್ಟ್ ನೈಟ್ ಮಾಡಲು ಕೊಟ್ಟೇ ಇರಲಿಲ್ಲ. ಆ ಶಾಸ್ತ್ರ, ಈ ಶಾಸ್ತ್ರ ಎಂದರು. ನಾನು ಯಾವಾಗ ಈ ಶಾಸ್ತ್ರ ಎಲ್ಲಾ ಮುಗಿಯತ್ತೆ ಎಂದು ಕಾಯ್ತಿದ್ದೆ. ಕೊನೆಗೂ ಮೂರನೆಯ ದಿನ ಯಾವುದೋ ಒಂದು ಮುಹೂರ್ತ ಫಿಕ್ಸ್ ಮಾಡಿದ್ರು. ಹೂವಿನ ಅಲಂಕಾರ ಎಲ್ಲಾ ಮಾಡಿದ್ರು. ಮೊದಲೇ ಮೂರು ದಿನ ಆಗಿತ್ತು. ಆ ಹೂವಿನ ಅಲಂಕಾರ, ಮುಹೂರ್ತ ಯಾರಿಗೆ ಬೇಕಿತ್ತು ಎಂದು ತಮಾಷೆಯಾಗಿ ಅಂದಿನ ದಿನ ಮೆಲುಕು ಹಾಕಿದ್ದಾರೆ ವಿನಯ್ ಗೌಡ.

ಮೂರು ದಿನ ಹೆಂಡತಿಯನ್ನು ನೋಡಲೂ ಬಿಟ್ಟಿರಲಿಲ್ಲ. ಎಲ್ಲರೂ ನನ್ನ ಹಿಂದೆ ಮುಂದೆ ಇರುತ್ತಿದ್ದರು. ಕೊನೆಗೂ ಮೂರನೆಯ ದಿನ ಬಿಟ್ಟರಪ್ಪ. ಸೋನು ನಿಗಮ್ ಅವರ ಹಾಡನ್ನು ಹಾಕಿ ನಮ್ಮ ಕೆಲಸ ಮುಗಿಸಿದ್ವಿ. ಸರಿಯಾಗಿ ಒಂದು ವರ್ಷಕ್ಕೆ ಮಗ ಹುಟ್ಟಿದ. ನಾನು, ಪತ್ನಿ ಮತ್ತು ಮಗ ಇದಿಷ್ಟೇ ನನ್ನ ಪ್ರಪಂಚ ಎಂದಿದ್ದಾರೆ ವಿನಯ್ ಗೌಡ.

ಇನ್ನು, ವಿನಯ್ ಗೌಡ (Bigg Boss Vinay Gowda) ಅವರಿಗೆ ಬಿಗ್ಬಾಸ್ನಿಂದ ಬಂದ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರುತ್ತಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ನಟಿಸುತ್ತಿದ್ದಾರೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದರು ಅವರು.

ಕೆಲ ದಿನಗಳ ಹಿಂದೆ ಇವರು ಇದೇ ಬಿಗ್ಬಾಸ್ನ ಮೋಕ್ಷಿತಾ ಪೈ (Mokshita Pai) ಜೊತೆ ಮಾಡುತ್ತಿರುವ ವೆಬ್ಸೀರಿಸ್ ಕುರಿತು ಮಾತನಾಡಿದ್ದರು. ಧೃತಿ ಕ್ರಿಯೇಷನ್ಸ್ನಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರಿಸ್ ಇದಾಗಿದೆ. ಈಗಾಗಲೇ ಇವರ ಚಿಕ್ಕ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನಟರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.

Source link
ಮದ್ವೆಯಾಗಿ 3 ದಿನ ಆದ್ರೂ ಫಸ್ಟ್ ನೈಟ್ಗೆ ಬಿಡಲೇ ಇಲ್ಲ, ಅದ್ಕೇ… Bigg Boss ವಿನಯ್ ಗೌಡ ಓಪನ್ ಮಾತು