ಡಿಕೆಶಿ ಪರ ಪ್ರಣವಾನಂದ ಸ್ವಾಮೀಜಿ ಬ್ಯಾಟಿಂಗ್, ಸಿಎಂ ಸಿದ್ದರಾಮಯ್ಯರ ಮೇಲೆ ಶ್ರೀಗಳು ಅಸಮಾಧಾನಗೊಂಡಿದ್ದು ಏಕೆ? | Pranavananda Swamiji Backs Dks Why Is The Seer Upset With Cm Siddaramaiah Rav

ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ, ಕಾಂಗ್ರೆಸ್‌ಗಾಗಿ ದುಡಿದ ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ತಮ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು (ಮಾ.22): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದಿದ್ದು ಅವರಿಗೆ ಕೂಲಿ ಸಿಗಬೇಕು. ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಬಳಿ ಒತ್ತಾಯಿಸುತ್ತೇವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

 ಶನಿವಾರ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಲಿ ಎಂದು ಒತ್ತಾಯಿಸಿದ ಸ್ವಾಮೀಜಿಗಳ ಮಠಕ್ಕೆ ಬಜೆಟ್‌ನಲ್ಲಿ ನಯಾಪೈಸೆ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ದಾವಣಗೆರೆ ಕಾಂಗ್ರೆಸ್ ಟಿಕೆಟ್ ಫೈಟ್: ಸಮರ್ಥ್ ಶಾಮನೂರು ಪರ ಡಿಕೆಶಿ-ಅಲ್ಪಸಂಖ್ಯಾತ ಕಾರ್ಡ್‌ ಪ್ಲೇ ಮಾಡಿದ ಸಿದ್ದರಾಮಯ್ಯ!

ನಮ್ಮ ಸಮುದಾಯದ ಯಾವ ಬೇಡಿಕೆಯನ್ನೂ ಸಿದ್ದರಾಮಯ್ಯ ಈಡೇರಿಸಲಿಲ್ಲ. ಹೀಗಾಗಿ ಮೇ ತಿಂಗಳಲ್ಲಿ ವಿವಿಧ ಮಠಾಧೀಶರ ಬೃಹತ್ ಸಭೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಡಿ.ಕೆ.ಶಿವಕುಮಾರ್ ಅವರ ಸಮಯ ಕೇಳಲು ಬಂದಿದ್ದೆವು. ಸಮಯ ನೀಡಲು ಅವರು ಒಪ್ಪಿದ್ದಾರೆ ಎಂದರು.

ಇದನ್ನೂ ಓದಿ:ಡಿಕೆಶಿ, ಪ್ರಿಯಾಂಕ್ ಖರ್ಗೆ ರೀತಿ ನಮಗೂ ಮಂತ್ರಿ ಪದವಿ ಕೊಡಿ: ಮಂತ್ರಿಗಿರಿಗಾಗಿ ಇಕ್ಬಾಲ್ ಪಟ್ಟು!

Source link

Leave a Reply

Your email address will not be published. Required fields are marked *