Headlines

ಬೆಂಗ್ಳೂರಿಂದ ಹೆಂಡ್ತಿ-ಮಕ್ಳಿಗೆ ಏನ್ ಗಿಫ್ಟ್ ಕೊಂಡೊಯ್ಲಿ? ಆಹಾ… ಏನ್‌ ಐಡಿಯಾ ಸಿಕ್ತು ನೋಡಿ!

ಬೆಂಗ್ಳೂರಿಂದ ಹೆಂಡ್ತಿ-ಮಕ್ಳಿಗೆ  ಏನ್ ಗಿಫ್ಟ್ ಕೊಂಡೊಯ್ಲಿ? ಆಹಾ… ಏನ್‌ ಐಡಿಯಾ ಸಿಕ್ತು ನೋಡಿ!

ಪ್ರವಾಸಿಗರೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಹೃದಯಸ್ಪರ್ಶಿ ಪ್ರಶ್ನೆಯೊಂದನ್ನು ಹಂಚಿಕೊಂಡಿದ್ದಾರೆ. ಆ ಪ್ರಶ್ನೆ ಹೀಗಿದೆ…

ಬೆಂಗಳೂರಿಗೆ ಬಂದಿರುವ ಪ್ರವಾಸಿಗರೊಬ್ಬರು ರೆಡ್ಡಿಟ್‌ನಲ್ಲಿ ತಮ್ಮ ಹೃದಯಸ್ಪರ್ಶಿ ಪ್ರಶ್ನೆಯೊಂದನ್ನು ಹಂಚಿಕೊಂಡಿದ್ದಾರೆ. ಆ ಪ್ರಶ್ನೆ ಹೀಗಿದೆ…"ನಾನು ನನ್ನ ಪತ್ನಿ ಮತ್ತು 5 ಹಾಗೂ 2 ವರ್ಷದ ಮಕ್ಕಳಿಗಾಗಿ ಬೆಂಗ್ಳೂರಿನಿಂದ ಏನಾದರೂ ಸ್ಮರಣಿಕೆ, ಉಡುಗೊರೆಯನ್ನು ತೆಗೆದುಕೊಡಬೇಕೆಂದು ಅಂದುಕೊಂಡಿದ್ದೇನೆ. ಆದರೆ ಅದು ತುಂಬಾ ದುಬಾರಿ ಇರಬಾರದು, ಮಕ್ಕಳಿಗೆ ಖುಷಿ ಕೊಡಬೇಕು" ಎಂದು ತಿಳಿಸಿದ್ದಾರೆ.

ಇದಕ್ಕೆ ನಗರದ ನೆಟ್ಟಿಗರು ಸೃಜನಾತ್ಮಕ ಸಲಹೆಗಳನ್ನು ನೀಡಿದ್ದು, ಅವರು ಸೂಚಿಸಿರುವ ಕೆಲವು ಫೇಮಸ್ ಗಿಫ್ಟ್‌ ಆಯ್ಕೆಗಳು ಇಲ್ಲಿವೆ ನೋಡಿ…

ಮೈಸೂರಿನ ಸ್ಯಾಂಡಲ್‌ವುಡ್ ಸ್ಕಿನ್ ಕೇರ್ ಅಥವಾ ಪರ್ಫ್ಯೂಮ್ಬೆಂಗಳೂರಿನ ಬ್ಯೂಟಿ ಸ್ಟೋರ್‌ಗಳಲ್ಲಿ ಸುಲಭವಾಗಿ ಸಿಗುತ್ತವೆ. ಪರ್‌ಫ್ಯೂಮ್ ಕೂಡ ನೆನಪಿನ ಉಡುಗೊರೆ ಆಗಬಹುದು.

ಇಳಕಲ್ ಅಥವಾ ಮೈಸೂರು ಸೀರೆಕಡಿಮೆ ಬಜೆಟ್‌ನಲ್ಲೂ ಸಿಗುವ ಈ ಸೊಗಸಾದ ಸೀರೆಗಳು ಪತ್ನಿಗೆ ಖುಷಿ ನೀಡಬಹುದು.

ಆರ್ಟಿಫಿಶಿಯಲ್ ಆಭರಣಗಳುನ್ಯಾಷನಲ್ ಮಾರ್ಕೆಟ್, ಚಿಕ್ಕಪೇಟೆಗಳಲ್ಲಿ ಗುಣಮಟ್ಟದ ಆಭರಣಗಳು ಕಡಿಮೆ ಬೆಲೆಗೆ ಲಭ್ಯ.

ಚನ್ನಪಟ್ಟಣ ಬೊಂಬೆಗಳುಇದು ಎಲೆಕ್ಟ್ರಾನಿಕ್ ಟಾಯ್ಸ್‌ಗಿಂತ ಚೆನ್ನ. ಮಕ್ಕಳಿಗೆ ಸುರಕ್ಷಿತವಾದ ಹತ್ತಿಯಿಂದ ತಯಾರಾದ ಲೋಕಲ್ ಟಾಯ್ಸ್ ಕೂಡ ತುಂಬಾ ಸುಂದರವಾಗಿರುತ್ತವೆ.

ಬೆಂಗ್ಳೂರಿನ ಥೀಮ್ ಸ್ಟೇಷನರಿ ಐಟಮ್ಸ್ಲೆಟರ್‌ಪ್ಯಾಡ್, ಪೆನ್ಸ್, ಮ್ಯಾಗ್ನೆಟ್ಸ್‌ ನಗರದ ಗುರುತುಗಳಿರುವ ಸ್ಮಾರಕಗಳನ್ನೂ ಕೊಡಬಹುದು.

ಪುಸ್ತಕಗಳುಮಕ್ಕಳಿಗೆ ಚಿತ್ರ ಪುಸ್ತಕಗಳು ಅಥವಾ ಲಘು ಕಥೆಗಳ ಸಂಗ್ರಹ (ಇಂಗ್ಲಿಷ್ ಅಥವಾ ಕನ್ನಡದಲ್ಲಿ) ಕೊಡಬಹುದು.

ಬೆಂಗ್ಳೂರಿನ ಫೆಮಸ್ ಫಿಲ್ಟರ್ ಕಾಫಿ ಪೌಡರ್, ಸ್ವಾದಿಷ್ಟ ಚಾಕೋಲೇಟ್‌ಗಳು (ಕೆಂಪೇಗೌಡ ಇಂಟರ್‌ನ್ಯಾಶನಲ್ ಏರ್‌ರ್ಪೋರ್ಟ್‌ ಅಥವಾ ಎಂಜಿ ರಸ್ತೆ ಶಾಪ್‌ಗಳಲ್ಲಿ ಸಿಗುತ್ತವೆ).

ಬಜೆಟ್ ಅನ್ನು ನೋಡಿಕೊಂಡು ಸರ್‌ಪ್ರೈಸ್ ಕೊಡುವುದು ಈ ಉಡುಗೊರೆ ಆಯ್ಕೆಗಳಲ್ಲಿದೆ. ನೀವು ಬೆಂಗಳೂರಿನಿಂದ ಹೊರಡುವಾಗ ಈ ಪುಟ್ಟ ಉಡುಗೊರೆಗಳು ನಿಮಗೊಂದು ನೆನಪಿನ ನಗು ತಂದುಕೊಡಬಹುದು.

Source link

Leave a Reply

Your email address will not be published. Required fields are marked *