
ರಣ್ವೀರ್ ಸಿಂಗ್ (ರಣವೀರ್ ಸಿಂಗ್) ನಟಿಸಿರುವ ‘ಧುರಂಧರ್ 2’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದ ಸೈನಿಕನೋರ್ವ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರ ಮಟ್ಟ ಹಾಕುವ ಕಥೆ ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಕೆಲವು ನಿಜ ವ್ಯಕ್ತಿಗಳ ಕತೆಗಳನ್ನು ತೋರಿಸಲಾಗಿದೆ. ಅದರಲ್ಲೂ ಪಾಕಿಸ್ತಾನದ ರಹಾಮನ್ ಡಕೈತ್, ಎಸ್ ಪಿ ಚೌಧರಿ ಅಸ್ಲಂ, ಇಲಿಯಾಸ್ ಕಾಶ್ಮೀರಿ ಇನ್ನೂ ಕೆಲವು ಅಕೀತ್ ಅಹ್ಮದ್ ಇನ್ನೂ ಕೆಲವು ನಿಜ ವ್ಯಕ್ತಿಗಳ ಪಾತ್ರಗಳನ್ನು ತೋರಿಸಲಾಗಿದೆ.
ಪಾಕಿಸ್ತಾನದಲ್ಲಿ ‘ಧುರಂಧರ 2’ ಸಿನಿಮಾ ಬ್ಯಾನ್ ಆಗಿದ್ದರೂ ಪಾಕಿಸ್ತಾನದ ಜನ ಮುಗಿಬಿದ್ದು ‘ಧುರಂಧರ 2’ ಸಿನಿಮಾ ನೋಡುತ್ತಿದ್ದರೆ, ಪಾಕಿಸ್ತಾನದಲ್ಲಿ ಅತಿ ಹೆಚ್ಚು ಮಾರಾಟ ಆಗುತ್ತಿರುವ ಪೈರಸಿ ಸಿನಿಮಾ ಎಂದರೆ ಅದು ‘ಧುರಂಧರ’ ಮತ್ತು ‘ಧುರಂಧರ 2’. ಸಾಮಾನ್ಯ ಜನರು, ರಾಜಕಾರಣಿಗಳು ಸಹ ‘ಧುರಂಧರ’ ಸಿನಿಮಾದ ಪೈರಸಿ ಕಾಪಿಗಳನ್ನು ನೋಡುತ್ತಿದ್ದಾರೆ.
‘ಧುರಂಧರ’ ಮತ್ತು ‘ಧುರಂಧರ 2’ ಸಿನಿಮಾದಲ್ಲಿ ಬಹಳ ಪ್ರಮುಖ ಪಾತ್ರವೊಂದಿದೆ. ಸಿನಿಮಾದಲ್ಲಿ ಪಾತ್ರದ ಹೆಸರು ಜಮೀಲ್ ಜಮಾಲಿ, ಆದರೆ ಈ ಪಾತ್ರ ಪಾಕಿಸ್ತಾನದ ರಾಜಕಾರಣಿ ನಬೀಲ್ ಗೋಬಾಲ್ ಅವರ ಪಾತ್ರವಾಗಿದೆ. ನಬೀಲ್ ಗೋಬಾಲ್ ಹಲವು ಕಡೆ ‘ಧುರಂಧರ್’ ಸಿನಿಮಾ ಸಂದರ್ಶನಗಳನ್ನು ನೀಡಿದ್ದು, ‘ನನ್ನ ಪಾತ್ರವನ್ನು ಹಾಸ್ಯ ಪಾತ್ರಧಾರಿಯಂತೆ ತೋರಿಸಲಾಗಿದೆ’ ಎಂದು ಗೋಳು ತೋಡಿಕೊಂಡಿದ್ದಾರೆ. ಜೊತೆಗೆ ತಮ್ಮ ಹಾಗೂ ರಹಮಾನ್ ಡಕೈತ್ ನಡುವಿದ್ದ ಗೆಳೆತನದ ಬಗ್ಗೆಯೂ ಮಾತನಾಡಿದ್ದಾರೆ.
ಇದನ್ನೂ ಓದಿ:’ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ
ನಬೀಲ್ ಗೋಬಾಲ್ ಮಾತ್ರವೇ, ಪಾಕಿಸ್ತಾನದ ಇನ್ನೂ ಕೆಲ ರಾಜಕಾರಣಿಗಳು ‘ಧುರಂಧರ’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಆದ ಅಭಿಪ್ರಾಯಗಳನ್ನು ಸಿನಿಮಾ ಬಗ್ಗೆ ತಿಳಿಸಲಾಗಿದೆ. ಇತ್ತೀಚೆಗಿನ ಸಂದರ್ಶನ ಮಾತನಾಡುತ್ತಿರುವ ಪಾಕಿಸ್ತಾನದ ರಾಜಕಾರಣಿ ನಬೀಲ್ ಗೋಬಾಲ್, ‘ನಾವು (ಪಾಕಿಸ್ತಾನ) ಸಹ ಇದೇ ರೀತಿಯ ಸಿನಿಮಾ ಒಂದನ್ನು ಮಾಡಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು’ ಎಂಬ ಹಾಸ್ಯಾಸ್ಪದ ಹೇಳಿಕೆಯನ್ನು ಪ್ರಕಟಿಸಿದ್ದಾರೆ.
‘ಧುರಂಧರ’ ಮತ್ತು ಈಗ ‘ಧುರಂಧರ 2’ ಸಿನಿಮಾದ ಹಾಡುಗಳಂತೂ ಪಾಕಿಸ್ತಾನದಲ್ಲಿ ಭಾರೀ ವೈರಲ್ ಆಗಿವೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮದುವೆಗಳಲ್ಲಿಯೂ ‘ಧುರಂಧರ’ ಸಿನಿಮಾದ ಹಾಡುಗಳನ್ನು ಹಾಕಲಾಗುತ್ತಿದೆ. ಪಾಕಿಸ್ತಾನದಲ್ಲಿ ಪೈರಸಿ ಸಿಡಿ ಕ್ಯಾಸೆಟ್ ಮಾರಾಟ ಮಾಡುವವರಿಗಂತೂ ‘ಧುರಂಧರ’ ಮತ್ತು ‘ಧುರಂಧರ 2’ ಸಿನಿಮಾದಿಂದ ಭಾರಿ ಲಾಭವಾಗಿದೆ. ಅಂಗಡಿಗಳ ಮುಂದೆ ‘ಧುರಂಧರ’ ಸಿನಿಮಾದ ಪೋಸ್ಟರ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ