ತಂತಾನೇ ಚಲಿಸುವ ಪಾರ್ಕ್​ನ ಉಪಕರಣ: ತನಿಖೆಗೆ ಬಂದ ಪೊಲೀಸರೇ ಬೆಚ್ಚಿಬಿದ್ದರು! ಏನಿದು ನಿಗೂಢ | Several Equipments In Delhis Park Would Move On Its Own Video Viral Suc

ತಂತಾನೇ ಚಲಿಸುವ ಪಾರ್ಕ್​ನ ಉಪಕರಣ: ತನಿಖೆಗೆ ಬಂದ ಪೊಲೀಸರೇ ಬೆಚ್ಚಿಬಿದ್ದರು! ಏನಿದು ನಿಗೂಢ | Several Equipments In Delhis Park Would Move On Its Own Video Viral Suc



ತಂತಾನೇ ಚಲಿಸುವ ಪಾರ್ಕ್​ನ ಉಪಕರಣ: ತನಿಖೆಗೆ ಬಂದ ಪೊಲೀಸರೇ ಬೆಚ್ಚಿಬಿದ್ದರು! ಏನಿದು ನಿಗೂಢ | Several Equipments In Delhis Park Would Move On Its Own Video Viral Suc

ದೆಹಲಿಯ ಪಾರ್ಕ್ ಒಂದರಲ್ಲಿ ರಾತ್ರೋರಾತ್ರಿ ವ್ಯಾಯಾಮದ ಉಪಕರಣಗಳು ತಾವಾಗಿಯೇ ಚಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಕೂಡ ಈ ವಿಚಿತ್ರ ಘಟನೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ, ಆದರೆ ಇದರ ಸತ್ಯಾಸತ್ಯತೆ ಇನ್ನೂ ಬಹಿರಂಗವಾಗಿಲ್ಲ.

ದೆವ್ವ, ಭೂತ, ಪಿಶಾಚಿಗಳು ಇವೆಯೋ, ಇಲ್ಲವೋ ಎನ್ನುವುದು ಪ್ರಶ್ನಾತೀತವಾಗಿದೆ. ಅದು ಅವರವರಿಗೆ ಬಿಟ್ಟಿರುವ ವಿಷಯ. ಕೆಲವರು ಇದು ಭ್ರಮೆ, ನಮ್ಮ ಮಾನಸಿಕ ಸಮಸ್ಯೆ ಎಂದರೆ, ಮತ್ತೆ ಕೆಲವರು ತಾವು ಕಣ್ಣಾರೆ ಅನುಭವಿಸಿರುವ ಚಿತ್ರ- ವಿಚಿತ್ರ ಘಟನೆಗಳ ಬಗ್ಗೆ ವಿವರಿಸುವುದು ಇದೆ. ಸ್ನೇಹಿತರೋ ಇನ್ಯಾರೋ ಸತ್ತಿರುವ ವಿಷಯ ತಿಳಿಯದೇ ಇದ್ದವರಿಗೆ ಆ ಸ್ನೇಹಿತ ಸಿಕ್ಕು ಮಾತನಾಡಿ ಹೋದ ಬಳಿಕ ಆತ ಸತ್ತಿರುವ ವಿಷಯ ತಿಳಿದಿದೆ ಎನ್ನುವ ಘಟನೆಗಳನ್ನೂ ನೆನಪಿಸಿಕೊಂಡವರು ಇದ್ದಾರೆ. ಸಕಾರಾತ್ಮಕ ಶಕ್ತಿ ಇದ್ದ ಮೇಲೆ ನಕಾರಾತ್ಮಕತೆಯೂ ಇರುತ್ತದೆ ಎನ್ನುವ ಮಾತು ಇದೆ. ದೇವರು, ದೆವ್ವ, ಆತ್ಮ ಇವೆಲ್ಲವುಗಳು ಇಂದಿಗೂ ಪ್ರಶ್ನಾರ್ಥವಾಗಿಯೇ ಉಳಿದಿದೆ.

ಹಲ್​ಚಲ್​ ಸೃಷ್ಟಿಸಿದ ವಿಡಿಯೋ

ಅದೇನೇ ಇರಲಿ. ಇದೀಗ ಇಲ್ಲೊಂದು ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದು ದೆಹಲಿಯ ಪಾರ್ಕ್​ ಎಂದು ಹೇಳಲಾಗಿದೆ. ಪಾರ್ಕ್​ನಲ್ಲಿ ಇಟ್ಟಿರುವ ಉಪಕರಣಗಳು ರಾತ್ರೋರಾತ್ರಿ ಏಕಾಏಕಿ ಸದ್ದು ಮಾಡುತ್ತಿದ್ದು, ಅದು ಹತ್ತಿರವೇ ಇರುವ ಅಪಾರ್ಟ್​ಮೆಂಟ್​ನ ವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಕೆಲವರು ಏನು ಎಂದು ಇಣುಕಿದಾಗ ಇಲ್ಲಿ ವಿಚಿತ್ರವಾದ ಆಕೃತಿ ಕಾಣಿಸುವುದಾಗಿ ಹೇಳಿದ್ದಾರೆ. ಕೆಲವರಿಗೆ ಮಹಿಳೆಯೊಬ್ಬಳು ವಿಚಿತ್ರವಾಗಿ ನಗುವುದು ಕಂಡಿದೆಯಂತೆ. ಅದು ಭ್ರಮೆನೋ, ನಿಜವೋ, ಕಲ್ಪನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇಲ್ಲಿಯ ಉಪಕರಣಗಳು ತಂತಾನೇ ಚಲಿಸುವುದಾಗಿ ಸ್ಥಳೀಯರು ಪೊಲೀಸರಿಗೆ ದೂರು ಕೊಟ್ಟಿದ್ದರು.

ಏಕಾಏಕಿ ಚಲಿಸಿದ ಉಪಕರಣ

ಅಲ್ಲಿ ಪೊಲೀಸರು ಎಲ್ಲವನ್ನೂ ಪರಿಶೀಲಿಸಿದಾಗ, ಆರಂಭದಲ್ಲಿ ಏನೂ ಕಾಣಿಸಲಿಲ್ಲ. ಕೊನೆಗೆ ಮಧ್ಯರಾತ್ರಿ ಉಪಕರಣಗಳು ಏಕಾಏಕಿ ಚಲಾಯಿಸುವುದನ್ನು ಅವರೂ ನೋಡಿದ್ದಾರೆ. ಯಾಕೋ ಅದರ ಮೇಲೆ ಕುಳಿತು ವ್ಯಾಯಾಮ ಮಾಡುತ್ತಿರುವ ರೀತಿಯಲ್ಲಿ ಉಪಕರಣ ಮಾತ್ರ ಕಾಣಿಸಿದೆ. ಮನುಷ್ಯರು ಯಾರೂ ಕಾಣಿಸಲಿಲ್ಲ ಎನ್ನಲಾಗಿದೆ.

ಬೆಚ್ಚಿಬಿದ್ದ ಪೊಲೀಸರು

ಕೆಲವರು ತಾವು ಮನುಷ್ಯರ ಆಕೃತಿಯನ್ನು ನೋಡಿರುವುದಾಗಿ ಹೇಳಿದ್ದರಿಂದ ಪೊಲೀಸರು ಅದನ್ನು ಪರಿಶೀಲಿಸಲು ಹೆದರುತ್ತಲೇ ಕುಳಿತಿದ್ದರು. ಆದರೆ ಯಾವುದೇ ಆಕೃತಿ ಕಾಣಿಸಲಿಲ್ಲ. ಮಹಿಳೆಯ ನಗು ಕೂಡ ಕೇಳಿಸಲಿಲ್ಲ. ಆದರೆ, ವಿಚಿತ್ರವಾಗಿ ಈ ಉಪಕರಣಗಳು ತಂತಾನೇ ಚಲಿಸಲು ಆರಂಭಿಸಿರುವುದನ್ನು ನೋಡಿದ ಪೊಲೀಸರು ಬೆಚ್ಚಿಬಿದ್ದಿರುವುದಾಗಿ ವರದಿಯಾಗಿದೆ. ಇದರ ಸತ್ಯಾಸತ್ಯತೆ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಹೇಳಿಕೇಳಿ ಸೋಷಿಯಲ್​ ಮೀಡಿಯಾದಲ್ಲಿ ಏನು ಬೇಕಾದರೂ ವೈರಲ್​ ಆಗುತ್ತವೆ. ಕೆಲವೊಮ್ಮೆ ಎಐ ಮೂಲಕ ಸೃಷ್ಟಿಸಲಾಗುತ್ತದೆ. ಆದ್ದರಿಂದ ಇದು ನಡೆದಿರುವ ಘಟನೆಯೋ ಅಥವಾ ಕಪೋಕಲ್ಪಿತವೋ ಎಂದು ಕಂಡುಹಿಡಿಯುವುದು ಕಷ್ಟ.



Source link

Leave a Reply

Your email address will not be published. Required fields are marked *