
ಚಿಕ್ಕಬಳ್ಳಾಪುರ, (ಮಾರ್ಚ್ 22): ಜಗಳದ ಬಳಿಕ ಮಲಗಿದ್ದ ಗಂಡನ (ಗಂಡ) ಮರ್ಮಾಂಗಕ್ಕೆ ಹೆಂಡತಿ (ಹೆಂಡತಿ) ಒಡ್ಡು ಕೊಲೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ) ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ನಡೆದಿದೆ. ಪತಿ ಮುನೀಂದ್ರ ಹಾಗೂ ವರ್ಷಾ ನಡುವೆ ಗಲಾಟೆ ಹೊಂದಿದ್ದ, ಬಳಿಕ ಮುನೀಂದ್ರ ಮಲಗುವ ವೇಳೆ ಪತ್ನಿ ವರ್ಷಾ ಆತನ ಮರ್ಮಾಂಗಕ್ಕೆ ಬಲವಾಗಿ ಒದ್ದಿದ್ದಾಳೆ. ತನ್ನ ಗಂಡನಿಗೆ ಡೈವೋರ್ಸ್ ಕೊಡುವಂತೆ ಪೀಡಿಸಿದ್ದಾಳೆ. ಆದರೆ, ಡೈವೋರ್ಸ್ ಕೊಡಲು ಒಪ್ಪದ ಗಂಡ ಮನೆಯಲ್ಲಿ ಮಲಗಿದ್ದಾಗ, ಆತನ ಮರ್ಮಾಂಗಕ್ಕೆ ಒದ್ದು ಕೊಲೆ ಯತ್ನ ನಡೆಸಿದ್ದಾಳೆ ಎಂದು ತಿಳಿದುಬಂದಿದ್ದು, ಅತ್ತ ಗಂಡ ಆಸ್ಪತ್ರೆ ಸೇರಿದ್ದ ಪತ್ನಿ ಆಸ್ಪತ್ರೆಯ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ನಿವಾಸಿಗಳಾದ ಮುನೀಂದ್ರ ಹಾಗೂ ವರ್ಷಾ ಐದು ವರ್ಷ ಪರಸ್ಪರ ಪ್ರೀತಿಸಿದ್ದು, ಕಳೆದ 2 ವರ್ಷ ಹಿಂದಷ್ಟೇ ಪೊಲೀಸ್ ಠಾಣೆಯಲ್ಲಿ ವಿವಾಹವಾಗಿದ್ದರು. ಆದರೆ, ಮದುವೆ ಬಳಿಕ ಅದೇನಾಯ್ತೋ ಏನೋ ವಿಚ್ಛೇದನ ನೀಡುವಂತೆ ವರ್ಷಾ, ಗಂಡನಿಗೆ ಪೀಡಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಪದೇ ಪದೇ ಗಂಡನ ಜೊತೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದರಂತೆ. ಇದೇ ರೀತಿ ಬೆಳಿಗ್ಗೆ ಗಂಡನ ಬಟ್ಟೆ ಹರಿದು ಹಾಕಿ ಜೋರು ಗಲಾಟೆ ಮಾಡಿದ್ದಂತೆ. ಜಗಳದ ವೇಳೆ ಸಾರ್ವಜನಿಕ ಸ್ಥಳದಲ್ಲಿ ಬಟ್ಟೆ ಬಿಚ್ಚಿ ಹಾಕಿದ್ದಾಳೆ. ಸಾಲದಕ್ಕೆ ತನ್ನ ಬಟ್ಟೆಯನ್ನೂ ಸಹ ತೆಗೆದು ಬನ್ನಿ ಯಾರ್ ಬರ್ತಿರಾ ಬನ್ನಿ ಎಂದು ಕಿರುಚಾಡಿದ್ದಾಳೆ. ನಂತರ ಮಧ್ಯರಾತ್ರಿ ಮನೆಯಲ್ಲಿ ಮಲಗಿದ್ದ ಗಂಡನ ಮರ್ಮಾಂಗಕ್ಕೆ ಬಲವಾಗಿ ಒಡ್ಡಿದ್ದಾಳೆ. ಬಳಿಕ ಆತನೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: ಸ್ನೇಹಿತೆಯ ಲವ್ನಲ್ಲಿ ಮಧ್ಯಸ್ಥಿಕೆ: ಗಂಡ ಹೆಂಡ್ತಿ ಗಲಾಟೆ ಸಾವಿನಲ್ಲಿ ಅಂತ್ಯ
ಇನ್ನು ಬೆಳಗ್ಗೆ ಆಸ್ಪತ್ರೆಗೆ ಬಂದ ಮಹಿಳೆಗೆ ಗಂಡನನ್ನ ನೋಡಲು ಕುಟುಂಬಸ್ಥರು ಅವಕಾಶ ನೀಡಿಲ್ಲ. ಇದಾದ ಬಳಿಕ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಮಹಿಳೆ ಕ್ರೀಮಿನಾಶಕ ಸೇವಿಸಿ ಹೈಡ್ರಾಮಾವೇ ಮಾಡಿದ್ದಾಳೆ. ಇನ್ನು ವಿಷ ಸೇವಿ ಆತ್ಮಹತ್ಯೆಗೆ ಯತ್ನಿಸಿದ ವರ್ಷಾ, ಅಸ್ವಸ್ಥಳಾಗಿದ್ದರೆ, ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದುವೆಯಾದ ಹೊಸದರಲ್ಲಿ ವರ್ಷಾ ತವರು ಮನೆಯಲ್ಲಿದ್ದು, ಇತ್ತೀಚಿಗೆ ಗಂಡನ ಮನೆಗೆ ಶಿಪ್ಟ್ ಆಗಿದ್ದರು. ಬಳಿಕ ಸಣ್ಣಪುಟ್ಟ ವಿಚಾರಕ್ಕೆ ವರ್ಷಾ ಗಂಡನ ಜೊತೆ ಕಿರಿಕ್ ಮಾಡುತ್ತಿದ್ದಳು. ಗಂಡನ ಸಹವಾಸವೆ ಬೇಡ ಎಂದು ಮಾಂಗಲ್ಯ ಸರ, ಕಾಲುಂಗರ ಬಿಚ್ಚಿ ಬೀದಿಯಲ್ಲಿ ಎಸೆದು ಹೋಗಿದ್ದಾಳಂತೆ. ಹೇಗಾದರೂ, ಇದೀಗ ಗಂಡನನ್ನು ಕೊಲೆಗೈದಿದ್ದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಪಾಲಾಗಿದ್ದಾಳೆ.