
ಪ್ರೀ ವೆಡ್ಡಿಂಗ್ ಶೂಟ್ ವೇಳೆ ವರನು ವಧುವನ್ನು ನೀರಿನಲ್ಲಿ ಎತ್ತಲು ಹೋಗಿ ಅವಘಡ ಸಂಭವಿಸಿದೆ. ಆಯತಪ್ಪಿ ಇಬ್ಬರೂ ನೀರಿಗೆ ಬಿದ್ದಿದ್ದು, ಮೇಲೆ ಬರಲು ಒದ್ದಾಡಿದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯು ಭಾವಿ ದಂಪತಿಗೆ ಮರೆಯಲಾಗದ ನೆನಪಾಗಿ ಉಳಿಯಲಿದೆ.
ಈಗಂತೂ ಮದುವೆ ಎನ್ನುವುದು ಆರಂಭವಾಗುವುದೇ ಪ್ರೀ ವೆಡ್ಡಿಂಗ್ ಶೂಟ್ನಿಂದ. ಈಗ ಎಲ್ಲರಿಗೂ ಮದುವೆಯ ಮೊದಲು ವಿಡಿಯೋ ಮಾಡಿಸುವ ಹುಚ್ಚು. ಇದೊಂದು ಟ್ರೆಂಡ್ ಆಗಿಬಿಟ್ಟಿದೆ. ಮದುವೆಯ ದಿನ ದೊಡ್ಡ ಪರದೆಯ ಮೇಲೆ ಈ ವಿಡಿಯೋ ಹಾಕಿ ಖುಷಿಪಡುತ್ತಾರೆ. ಪ್ರೀ ವೆಡ್ಡಿಂಗ್ ಶೂಟ್ (Pre- Wedding Shoot) ಮಾಡಿಸಿಕೊಳ್ಳುವವರ ಸಂಖ್ಯ ಹೆಚ್ಚಾಗಿರೋ ಕಾರಣ, ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಲು ಹಲವರು ಮುಂದಾಗುತ್ತಾರೆ. ಇದರಿಂದ ಇದಾಗಲೇ ಚಿತ್ರ-ವಿಚಿತ್ರ ಎನ್ನಿಸುವಂಥ ಫೋಟೋ, ವಿಡಿಯೋಶೂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದರೆ, ಕೆಲವೊಂದು ಸಮಯದಲ್ಲಿ ಈ ವಿಡಿಯೋ ಸಮಯದಲ್ಲಿಯೇ ಸಾವನ್ನಪ್ಪಿರುವ ಘಟನೆಗಳೂ ನಡೆದಿವೆ.
ಪ್ರೀ ವೆಡ್ಡಿಂಗ್ ಶೂಟ್ನಲ್ಲಿ ಅವಘಡ
ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇದು ಸೀರಿಯಲ್ , ಸಿನಿಮಾ ಪ್ರಭಾವವೋ ಗೊತ್ತಿಲ್ಲ. ಅಲ್ಲಿ ನಟಿಯರನ್ನು ನಾಯಕರು ಅತ್ಯಂತ ಸುಲಭವಾಗಿ ಎತ್ತಿ ಬಿಡುತ್ತಾರಲ್ಲ. ಆದರೆ ಶೂಟಿಂಗ್ ಸಂದರ್ಭದಲ್ಲಿ ಅಲ್ಲಿ ನಡೆಯುವುದೇ ಬೇರೆ. ನಿಜವಾಗಿಯೂ ನಾಯಕರು ನಾಯಕಿಯನ್ನು ಎತ್ತಿಯೇ ಇರುವುದಿಲ್ಲ. ಕೊನೆಗೆ ಎಡಿಟಿಂಗ್ನಲ್ಲಿ ಅವೆಲ್ಲಾ ಮಾಡಲಾಗುತ್ತದೆ. ಆದರೂ ಪುರುಷರಿಗೆ ತನ್ನ ಭಾವಿ ಪತ್ನಿಯ ಎದುರು ಪೌರುಷ ತೋರಿಸಬೇಕು, ಆಕೆಯನ್ನು ಮೆಚ್ಚಿಸಬೇಕು ಎನ್ನುವ ಹುಮ್ಮಸ್ಸು ಇರುತ್ತದಲ್ಲ, ಅದೇ ರೀತಿ ಇಲ್ಲಿಯೂ ಆಗಿದೆ.
ನೀರಿನಲ್ಲಿ ಶೂಟಿಂಗ್
ನೀರಿನಲ್ಲಿ ಈ ಶೂಟಿಂಗ್ ಮಾಡಲಾಗಿದೆ. ಇದರಲ್ಲಿ ವರ ಹುಡುಗಿಯನ್ನು ನೀರಿನಲ್ಲಿ ಎತ್ತಿ ಪೋಸ್ ಕೊಡಲು ಹೋಗಿದ್ದಾನೆ. ಅವಳನ್ನು ಸುಲಭವಾಗಿ ಎತ್ತಿದ ಕೂಡ. ಆದರೆ ಆಕೆಯ ಭಾರವನ್ನು ತಡೆದುಕೊಳ್ಳಲಾಗಿಲ್ಲನೋ ಅಥವಾ ನೀರಿನಲ್ಲಿ ಆಯ ತಪ್ಪಿದನೋ ಗೊತ್ತಿಲ್ಲ. ಹುಡುಗಿ ಸಹಿತವಾಗಿ ಇಬ್ಬರೂ ನೀರಿನಲ್ಲಿ ಮುಳುಗಿ ಹೋದರು. ಹುಡುಗಿ ಆತನ ಮೈಮೇಲೆಯೇ ಬಿದ್ದುಬಿಟ್ಟಳು.
ಒದ್ದಾಡಿದ ಭಾವಿ ದಂಪತಿ!
ಆ ಪರಿಸ್ಥಿತಿಯಲ್ಲಿ ಇಬ್ಬರೂ ಮೇಲೆ ಬರಲು ಒದ್ದಾಡಿ ಹೋದರು. ಇನ್ನು ಪ್ರೀ ವೆಡ್ಡಿಂಗ್ ಶೂಟ್ ಕನಸಿನಲ್ಲಿಯೂ ಮಾಡಿಸಿಕೊಳ್ಳಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಪಾಪ ಭಾವಿ ಪತ್ನಿಯ ಎದುರು ಹೀರೋ ಆಗಲು ಹೋಗಿ ಹೀಗೆಲ್ಲಾ ಆಗಬಾರದಿತ್ತು ಎಂದು ಕೆಲವರು ಹೇಳಿದ್ರೆ, ಅವರ ವಿಡಿಯೋ ವೈರಲ್ ಮಾಡಬಾರದಿತ್ತು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್ ಮಾತ್ರ ಇವರಿಗೆ ಕೊನೆಯವರೆಗೂ ನೆನಪಿರುತ್ತೆ ಬಿಡಿ.
Scroll to load tweet…