
ಆಹಾರ ಮತ್ತು ದಿನಸಿ (Food & Groceries)
ಪ್ರತಿಯೊಬ್ಬರಿಗೂ ಆಹಾರವು ಪ್ರಾಥಮಿಕ ಅಗತ್ಯವಾಗಿದೆ. ಆದ್ದರಿಂದ ಈ ವ್ಯವಹಾರವು ಎಂದಿಗೂ ವಿಫಲವಾಗುವುದಿಲ್ಲ. ಟಿಫಿನ್ ಸೆಂಟರ್, ಫುಡ್ ಹೋಮ್ ಡೆಲಿವರಿ ಅಥವಾ ಒಂದು ಸಣ್ಣ ಹೋಟೆಲ್‌ನಂತಹ ವ್ಯವಹಾರಗಳು ಇತರ ವ್ಯಾಪಾರಗಳಿಗಿಂತ 5 ಪಟ್ಟು ಅಧಿಕ ಲಾಭದೊಂದಿಗೆ ಉತ್ತಮ ಆದಾಯವನ್ನು ನೀಡುತ್ತವೆ.
ಇದರ ಜೊತೆಗೆ ದಿನಸಿ ಅಂಗಡಿಗಳು ಕೂಡ ನಮ್ಮ ದೈನಂದಿನ ಜೀವನದಲ್ಲಿ ಅತಿ ಮುಖ್ಯ. ಅದಕ್ಕಾಗಿಯೇ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳು ಬಂದರೂ ಸಹ, ಸಾಮಾನ್ಯ ಜನರ ಮೊದಲ ಆಯ್ಕೆ ಹತ್ತಿರದ ಕಿರಾಣಿ ಅಂಗಡಿಯೇ ಆಗಿರುತ್ತದೆ. ಆದ್ದರಿಂದ ಇವು ಕೂಡ ಉತ್ತಮ ಲಾಭ ತಂದುಕೊಡುತ್ತವೆ.