
ಐಪಿಎಲ್ ವೇಳೆ ಲಂಡನ್ಗೆ ಹೋಗಿ ಬರಲು ವಿಶೇಷ ವಿಮಾನ ಬೇಕೆಂದು ವಿರಾಟ್ ಕೊಹ್ಲಿ ಆರ್ಸಿಬಿ ಬಳಿ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ಸ್ವತಃ ಕೊಹ್ಲಿ ಅವರೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸತ್ಯಾಸತ್ಯತೆಯನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಐಪಿಎಲ್ 2026ರ ಆರಂಭಕ್ಕೆ ದಿನಗಣನೆ ಶುರುವಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಸಕತ್ ಸದ್ದು ಮಾಡುತ್ತಿದ್ದಾರೆ. IPL ಇತಿಹಾಸದಲ್ಲಿ 9 ಸಾವಿರ ರನ್ ಪೂರೈಸಿದ ಮೊದಲ ಆಟಗಾರನಾಗಲು ಕೊಹ್ಲಿಗೆ ಇನ್ನು ಕೆಲವೇ ರನ್ಗಳ ಅವಶ್ಯಕತೆಯಿರುವುದು ಒಂದೆಡೆಯಾದರೆ, ಆರ್ಸಿಬಿ ಮ್ಯಾನೇಜ್ಮೆಂಟ್ ಮುಂದೆ ಕೊಹ್ಲಿ ಭಾರಿ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂಬ ವರದಿ ಇನ್ನೊಂದೆಡೆ.
ಕೊಹ್ಲಿ ಪೋಸ್ಟ್
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಸಕತ್ ಸದ್ದು ಮಾಡುತ್ತಿದೆ. ಅದೇನೆಂದರೆ, ಐಪಿಎಲ್ ಸೀಸನ್ ನಡೆಯುವಾಗ ಪಂದ್ಯಗಳ ನಡುವೆ 3 ದಿನಗಳ ಬಿಡುವು ಸಿಕ್ಕರೆ ನಾನು ಲಂಡನ್ಗೆ ಹೋಗಿ ಬರುತ್ತೇನೆ. ಇದಕ್ಕಾಗಿ ಭಾರತ ಮತ್ತು ಲಂಡನ್ ನಡುವೆ ಸಂಚರಿಸಲು ನನಗೆ ಚಾರ್ಟರ್ಡ್ ಫ್ಲೈಟ್ ಅರ್ಥಾತ್ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು ಎಂದು ಕೊಹ್ಲಿ ಆರ್ಸಿಬಿಗೆ ಷರತ್ತು ವಿಧಿಸಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ. ಇದೀಗ ಖುದ್ದು ಕೊಹ್ಲಿ ಅವರು ಸೈಲೆಂಟಾಗಿ ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಈ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್
ವಿರಾಟ್ ಕೊಹ್ಲಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಸುದ್ದಿಯ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಜೊತೆಗೆ ಎರಡು ನಗುವ ಎಮೋಜಿ ಅಷ್ಟೇ ಹಾಕುವ ಮೂಲಕ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಸೂಚ್ಯವಾಗಿ ತಿಳಿಸಿದ್ದಾರೆ.
28ರಂದು ಪಂದ್ಯ
ಇದೇ 28 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸಿಬಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಕಳೆದ ಸೀಸನ್ನಲ್ಲಿ 18ನೇ ವರ್ಷದ ಕಾತರದ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ್ದ ಕೊಹ್ಲಿ, ಈ ಬಾರಿಯೂ ಬ್ಯಾಟಿಂಗ್ನಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಲು ಸಜ್ಜಾಗಿದ್ದಾರೆ. ವಿರಾಟ್ ಕೊಹ್ಲಿ ಪ್ರಸ್ತುತ ಕಳೆದ ವಾರವಷ್ಟೇ ಆರ್ಸಿಬಿ ಶಿಬಿರಕ್ಕೆ ಸೇರಿದ್ದರು. ಆರ್ಸಿಬಿ ತರಬೇತಿ ಶಿಬಿರದಲ್ಲಿ ವಿರಾಟ್ ಕೊಹ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿವೆ. ಕೆಲವು ವೀಡಿಯೊಗಳಲ್ಲಿ ವಿರಾಟ್ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡುಬಂದರೆ, ಇನ್ನು ಕೆಲವು ವೀಡಿಯೊಗಳಲ್ಲಿ ಅವರು ಆರ್ಸಿಬಿ ಆಟಗಾರರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬರುತ್ತದೆ.
Scroll to load tweet…