
ಬೆಂಗಳೂರು, (ಮಾರ್ಚ್ 22): ಯುಗಾದಿ (ಯುಗಾದಿ) ಹಾಗೂ ರಂಜಾನ್ (ರಂಜಾನ್) ಹಬ್ಬಕ್ಕೆ ಸಾಲುಸಾಲು ರಜೆ ಇದ್ದ ಹಿನ್ನೆಲೆಗೆ ಹೋಗಿದ್ದ ಜನ ಇದೀಗ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಈ ಪರಿಣಾಮ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಫುಲ್ ಟ್ರಾಫಿಕ್ (ಟ್ರಾಫಿಕ್) ಜಾಮ್. ಸಾಲು ಸಾಲು ರಜೆಗಳು ಹಾಗೂ ಟ್ರಿಪ್ ಹೋಗಿದ್ದವು ಇದೀಗ ಬೆಂಗಳೂರಿಗೆ ವಾಪಸ್ ಆಗುತ್ತಿದ್ದು, ಬೆಂಗಳೂರು ಎಂಟ್ರಿ ಕೊಡುವ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿದೆ. ರಸ್ತೆಯಲ್ಲಿ ವಾಹನಗಳು ನಿಂತಲ್ಲೇ ನಿಂತಿದ್ದು, ಆಗ ಅಲ್ಪ ಸ್ವಲ್ಪ ಮೂವ್ ಆಗುತ್ತಿವೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.